• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಸಿದ್ಧ ಕಥಕ್ ನೃತ್ಯಪಟು ಬಿರ್ಜೂ ಮಹಾರಾಜ್ ವಿಧಿವಶ

|
Google Oneindia Kannada News

ನವದೆಹಲಿ, ಜನವರಿ 17: ಕಥಕ್ ನೃತ್ಯಶೈಲಿಯಲ್ಲಿ ದಿಗ್ಗಜರಾದ ಬಿರ್ಜು ಮಹಾರಾಜ್ ವಿಧಿವಶರಾಗಿದ್ದಾರೆ ಎಂದು ಅವರ ಸಂಬಂಧಿಕರು ಮಾಹಿತಿ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಸೋಮವಾರ ವರದಿ ಮಾಡಿದೆ. ಬಿರ್ಜು ಅವರಿಗೆ 83 ವರ್ಷ ವಯಸ್ಸಾಗಿತ್ತು. ದೆಹಲಿಯ ಸಾಕೇತ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಬಿರ್ಜು ಮಹಾರಾಜ್ ಲಕ್ನೋದ ಕಲ್ಕಾ-ಬಿಂದಾದಿನ್ ಘರಾನಾದ ಪ್ರತಿಪಾದಕರಾಗಿದ್ದರು.

ಕಥಕ್ ಮಾಂತ್ರಿಕ ಪಂಡಿತ್ ಬಿರ್ಜು ಮಹಾರಾಜ್ ಅವರ ಮೊಮ್ಮಗಳು ರಾಗಿಣಿ ಮಹಾರಾಜ್ ಅವರು ಈ ಬಗ್ಗೆ ಎಎನ್ಐ ಜೊತೆ ಮಾತನಾಡಿ, ''ಕಳೆದ ಒಂದು ತಿಂಗಳಿನಿಂದ ಬಿರ್ಜು ಮಹಾರಾಜ್ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ 12:15-12:30 ರ ಸುಮಾರಿಗೆ ಅವರು ಹಠಾತ್ ಉಸಿರಾಟದ ತೊಂದರೆಗೆ ಒಳಗಾದರು, ನಾವು ಅವರನ್ನು 10 ನಿಮಿಷಗಳಲ್ಲಿ ಆಸ್ಪತ್ರೆಗೆ ಕರೆತಂದಿದ್ದೇವೆ, ಆದರೆ ಅವರು ನಮ್ಮಗಲಿದರು,'' ಎಂದಿದ್ದಾರೆ.

ಬಿರ್ಜೂರಿಗೆ ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದಾರೆ. ಇವರ ಪೈಕಿ ಮಮತಾ ಮಹಾರಾಜ್‌, ದೀಪಕ್‌ ಮಹಾರಾಜ್‌ ಹಾಗೂ ಜಯ್‌ ಕಿಶನ್‌ ಮಹಾರಾಜ್‌ ಕಥಕ್‌ ನೃತ್ಯದಲ್ಲಿ ಪರಿಣತರಾಗಿದ್ದಾರೆ. ತ್ರಿಭುವನ್‌ ಮಹಾರಾಜ್‌ ಎಂಬ ಹೆಸರಿನ ಮೊಮ್ಮಗನಿದ್ದಾನೆ.

ಬಿರ್ಜು ಮಹಾರಾಜ್

ಬಿರ್ಜು ಮಹಾರಾಜ್

ಬಿರ್ಜು ಮಹಾರಾಜ್ ಫೆಬ್ರವರಿ 4, 1937 ರಂದು ಪ್ರಸಿದ್ಧ ಕಥಕ್ ನೃತ್ಯ ಕುಟುಂಬದಲ್ಲಿ ಬ್ರಿಜ್ ಮೋಹನ್ ನಾಥ್ ಮಿಶ್ರಾ ಆಗಿ ಜನಿಸಿದರು. ತಂದೆ ಅಚ್ಚನ್ ಮಹಾರಾಜ್ ಮತ್ತು ಚಿಕ್ಕಪ್ಪಂದಿರಾದ ಶಂಭು ಮತ್ತು ಲಚ್ಚು ಮಹಾರಾಜರಲ್ಲದೆ, ಅವರು ಬಿಂದದೀನ್ ಮಹಾರಾಜರ ಪ್ರಭಾವದಿಂದ ನೃತ್ಯಪಟುವಾಗಿ ರೂಪುಗೊಂಡರು.

ಅವರು ತಮ್ಮ ತಂದೆಯೊಂದಿಗೆ ಬಾಲ್ಯದಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದರು ಮತ್ತು ಅವರ ಹದಿಹರೆಯದಲ್ಲಿ ಗುರು (ಮಹಾರಾಜ್) ಆದರು. ಬಿರ್ಜು ಮಹಾರಾಜ್ ರಾಂಪುರ ನವಾಬನ ದರ್ಬಾರ್‌ನಲ್ಲಿಯೂ ಪ್ರದರ್ಶನ ನೀಡಿದರು.

ಅವರು 28 ವರ್ಷದವರಾಗಿದ್ದಾಗ, ಬಿರ್ಜು ಮಹಾರಾಜ್ ಅವರ ನೃತ್ಯ ಪ್ರಕಾರದ ಪಾಂಡಿತ್ಯವು ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟಿತು.

ಭಾರತೀಯ ಲಲಿತ ಕಲಾ ಅಕಾಡೆಮಿ 'ಕಲಾಶ್ರಮ' ಸಂಸ್ಥೆ

ಭಾರತೀಯ ಲಲಿತ ಕಲಾ ಅಕಾಡೆಮಿ 'ಕಲಾಶ್ರಮ' ಸಂಸ್ಥೆ

ಅವರ ಪರಿಪೂರ್ಣ ಲಯ ಮತ್ತು ಅಭಿವ್ಯಕ್ತ ಅಭಿನಯ ಅಥವಾ ಭಾವಾಭಿನಯ ಭಾಷೆಗೆ ಹೆಸರುವಾಸಿಯಾದ ಬಿರ್ಜು ಮಹಾರಾಜ್ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಅಭಿವೃದ್ಧಿಪಡಿಸಿದರು. ಅವರು ಅದ್ಭುತ ನೃತ್ಯ ಸಂಯೋಜಕ ಎಂದು ಹೆಸರಾಗಿದ್ದರು ಮತ್ತು ಅವರು ನೃತ್ಯ-ನಾಟಕಗಳನ್ನು ಜನಪ್ರಿಯಗೊಳಿಸಲು ಸಹಾಯ ಮಾಡಿದರು. ಬಿರ್ಜೂ ಮಹಾರಾಜ್‌ ಸಂಗೀತ ನಾಟಕ ಅಕಾಡೆಮಿಯ ಬೋಧಕವೃಂದದ ಮುಖ್ಯಸ್ಥರಾಗಿದ್ದರು. 1998ರಲ್ಲಿ ನಿವೃತ್ತರಾದ ನಂತರ, ತಮ್ಮದೇ ಆದ ಕಥಕ್‌ ಮತ್ತು ಭಾರತೀಯ ಲಲಿತ ಕಲಾ ಅಕಾಡೆಮಿ 'ಕಲಾಶ್ರಮ' ಸಂಸ್ಥೆ ಸ್ಥಾಪಿಸಿದರು.

ಸಿನಿಮಾದಲ್ಲೂ ನೃತ್ಯ ಸಂಯೋಜನೆ

ಸಿನಿಮಾದಲ್ಲೂ ನೃತ್ಯ ಸಂಯೋಜನೆ

ಸತ್ಯಜಿತ್‌ ರಾಯ್‌ ನಿರ್ದೇಶನದ ಶತರಂಜ್‌ ಕೆ ಖಿಲಾಡಿ ಎಂಬ ಹಿಂದಿ ಚಲನಚಿತ್ರದ ಎರಡು ನೃತ್ಯ ದೃಶ್ಯಗಳಿಗಾಗಿ ಬಿರ್ಜೂ ಮಹಾರಾಜ್‌ ಸಂಗೀತ ಸಂಯೋಜಿಸಿ, ಹಾಡನ್ನೂ ಹಾಡಿದರು. ನಂತರ 2002ರಲ್ಲಿ ಬಿಡುಗಡೆಯಾದ, ಶಾ‌ರುಖ್‌ ಖಾನ್‌ ಅಭಿನಯದ ದೇವದಾಸ್‌ ಹಿಂದಿ ಚಲನಚಿತ್ರದ ಹಾಡು, ಕಾಹೇ ಛೇಡ್‌ ಮೊಹೆ ಹಾಡಿಗೆ ಬಿರ್ಜೂ ಮಹಾರಾಜ್‌ ನೃತ್ಯ ಸಂಯೋಜನೆ ಮಾಡಿದ್ದರು. ಇದಲ್ಲದೆ, ಶತರಂಜ್‌ ಕೆ ಖಿಲಾಡಿ(1977), ದಿಲ್‌ ತೊ ಪಾಗಲ್‌ ಹೈ(1997), ಗದ್ದರ್ ಏಕ್ ಪ್ರೇಮ್ ಕಥಾ (2001), ವಿಶ್ವರೂಪಂ(2013) ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು. ಕಮಲ್ ಹಾಸನ್ ಅಭಿನಯದ ವಿಶ್ವರೂಪಂ ಚಿತ್ರದ ನೃತ್ಯ ಸಂಯೋಜನೆಗೆ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಬಿರ್ಜು ಗಾಯಕರೂ ಹೌದು

ಬಿರ್ಜು ಗಾಯಕರೂ ಹೌದು

ನೃತ್ಯ ಕಲೆಯತ್ತ ಮೊದಲ ಒಲವಿದ್ದರೂ ಅವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನೂ ಸಹ ಚೆನ್ನಾಗಿ ಬಲ್ಲವರಾಗಿದ್ದರು. ಅವರು ಹೆಸರಾಂತ ಗಾಯಕರೂ ಹೌದು. ಕಥಕ್‌ ನೃತ್ಯ-ನಾಟಕಗಳನ್ನು ನವೀನ ಶೈಲಿಯಲ್ಲಿ ಸಂಯೋಜಿಸುವುದರ ಮೂಲಕ ಕಥಕ್‌ ನೃತ್ಯಕಲೆ ಮತ್ತು ಶೈಲಿಯನ್ನು ಇನ್ನಷ್ಟು ಉತ್ತುಂಗಕ್ಕೆ ಒಯ್ದರು. ವಿಶ್ವದ ಹಲವೆಡೆ ಅವರು ಪ್ರವಾಸ ಮಾಡಿ, ಸಾವಿರಾರು ನೃತ್ಯಪ್ರದರ್ಶನಗಳನ್ನು ನೀಡಿದ್ದಾರೆ. ಜೊತೆಗೆ, ಕಥಕ್‌ ಕಲಿಯುವ ಆಸಕ್ತರಿಗಾಗಿ ನೂರಕ್ಕೂ ಹೆಚ್ಚು ನೃತ್ಯಕಮ್ಮಟ,ಕಾರ್ಯಾಗಾರಗಳನ್ನು ನಡೆಸಿದ್ದಾರೆ.

ಕಥಕ್‌ ದಿಗ್ಗಜನಿಗೆ ಶ್ರದ್ಧಾಂಜಲಿ

ಕಥಕ್‌ ದಿಗ್ಗಜ ಶ್ರದ್ಧಾಂಜಲಿ ಸಲ್ಲಿಸಿದ ಮೊದಲ ಕಲಾವಿದರಲ್ಲಿ ಒಬ್ಬರಾದ ಅದ್ನಾನ್ ಸಾಮಿ ಟ್ವೀಟ್‌ ಮಾಡಿ, "ಲೆಜೆಂಡರಿ ಕಥಕ್ ಡ್ಯಾನ್ಸರ್ ಪಂಡಿತ್ ಬಿರ್ಜು ಮಹಾರಾಜ್ ಜಿ ಅವರ ನಿಧನದ ಸುದ್ದಿಯಿಂದ ತುಂಬಾ ದುಃಖವಾಗಿದೆ. ನಾವು ಅಪ್ರತಿಮ ನಿಧಿಯನ್ನು ಕಳೆದುಕೊಂಡಿದ್ದೇವೆ. ಪ್ರದರ್ಶನ ಕಲೆಯ ಕ್ಷೇತ್ರ. ಅವರು ತಮ್ಮ ಪ್ರತಿಭೆಯ ಮೂಲಕ ಅನೇಕ ತಲೆಮಾರುಗಳ ಮೇಲೆ ಪ್ರಭಾವ ಬೀರಿದ್ದಾರೆ. ಅವರು ಶಾಂತಿಯಿಂದ ವಿಶ್ರಾಂತಿ ಪಡೆಯಲಿ." ಎಂದಿದ್ದಾರೆ. ಚಿತ್ರದಲ್ಲಿಕಥಕ್ ಮಾಂತ್ರಿಕ ಪಂಡಿತ್ ಬಿರ್ಜು ಮಹಾರಾಜ್ ಅವರ ಮೊಮ್ಮಗಳು ರಾಗಿಣಿ ಮಹಾರಾಜ್

   Virat Kohli ಕ್ಯಾಪ್ಟೆನ್ಸಿ ನಿರ್ಗಮನದ ಹಿಂದೆಯೇ ಟೀಮ್ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ICC | Oneindia Kannada
   English summary
   Legendary Kathak dancer Birju Maharaj has passed away, news agency ANI reported on Monday, citing his relative. He was 83.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X