ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಮದ್ಯ ಸೇವನೆಗಿದ್ದ ಕನಿಷ್ಠ ವಯೋಮಿತಿ ಏರಿಕೆ

By Sachhidananda Acharya
|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 7: ಕೇರಳ ಸರಕಾರ ಮದ್ಯ ಸೇವನೆಯ ಕನಿಷ್ಠ ವಯೋಮಿತಿಯನ್ನು 21ರಿಂದ 23 ವರ್ಷಕ್ಕೆ ಏರಿಕೆ ಮಾಡಿದೆ. ಇಂದು ರಾಜ್ಯ ಸಂಪುಟ ಸಭೆಯಲ್ಲಿ ಅಬಕಾರಿ ಕಾಯಿದೆಗೆ ತಿದ್ದುಪಡಿ ತರುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಈ ಹಿಂದಿನ ಯುಡಿಎಫ್ ಸರಕಾರ ಬಾರ್ ಗಳ ಸಂಖ್ಯೆ ಕಡಿತಗೊಳಿಸಿ ಮತ್ತು ಸರಕಾರಿ ಮದ್ಯದಂಗಡಿಗಳನ್ನು ಮುಚ್ಚುವ ಮೂಲಕ ಸಮಾಜದಲ್ಲಿ ಕನಿಷ್ಟ ಮದ್ಯ ಸರಬರಾಜು ಇರುವಂತೆ ನೋಡಿಕೊಂಡಿತ್ತು.

Legal drinking age raised to 23 years in Kerala

ಆದರೆ ಅಧಿಕಾರಕ್ಕೆ ಬಂದ ಎಲ್.ಡಿ.ಎಫ್ ಸರಕಾರ ಮದ್ಯದಂಗಡಿಗಳ ಸ್ಥಾಪನೆಗಿದ್ದ ನಿಯಮಗಳನ್ನು ಸಡಿಲಗೊಳಿಸಿತ್ತು. ಧಾರ್ಮಿಕ ಕ್ಷೇತ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಕೇವಲ 50 ಮೀಟರ್ ದೂರದಲ್ಲಿ ಮದ್ಯದಂಗಡಿ ಸ್ಥಾಪನೆಗೆ ಅನುವು ಮಾಡಿಕೊಟ್ಟಿತ್ತು. ಇದಕ್ಕೆ ವಿರೋಧ ಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.

ಇದಾದ ಬೆನ್ನಿಗೆ ಇದೀಗ ಸರಕಾರ ಮದ್ಯ ಸೇವನೆಯ ಕನಿಷ್ಠ ವಯೋಮಿತಿಯನ್ನು 23 ವರ್ಷಕ್ಕೆ ಏರಿಕೆ ಮಾಡುವ ತೀರ್ಮಾನ ತೆಗೆದುಕೊಂಡಿದೆ.

ಹಾಗೆ ನೋಡಿದರೆ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಮದ್ಯ ಸೇವನೆಯ ಕನಿಷ್ಟ ವಯೋಮಿತಿಯನ್ನು 25 ವರ್ಷಕ್ಕೆ ಏರಿಸಲಾಗಿದೆ. ಆದರೆ ಇದರಿಂದ ಹೇಳಿಕೊಳ್ಳುವಂತಹ ಬದಲಾವಣೆಗಳು ಸಮಾಜದಲ್ಲಿ ನಡೆದಿಲ್ಲ.

ಅಂದಹಾಗೆ ಕರ್ನಾಟಕದಲ್ಲಿ ಮದ್ಯ ಸೇವನೆಯ ಮಿತಿಯನ್ನು 21 ವರ್ಷಕ್ಕೆ ನಿಗದಿಪಡಿಸಲಾಗಿದೆ.

English summary
The Kerala government has raised the legal drinking age from 21 to 23 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X