ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಹೊಸ ಹೆಜ್ಜೆ: 55 ರು. ಗೆ ಎಲ್‌ಇಡಿ ಬಲ್ಬ್

|
Google Oneindia Kannada News

ನವದೆಹಲಿ, ಏಪ್ರಿಲ್, 01: ವಿದ್ಯುತ್ ನ ಸರಿಯಾದ ಉಪಯೋಗಕ್ಕೆ ಮುಂದಾಗಿರುವ ಸರ್ಕಾರಗಳು ಎಲ್ ಇಡಿ ಬಲ್ಬ್ ದರವನ್ನು ಮತ್ತಷ್ಟು ಕಡಿಮೆ ಮಾಡಿವೆ.

ಸರ್ಕಾರ ವಿತರಿಸುವ ಎಲ್‌ಇಡಿ ಬಲ್ಬ್‌ಗಳ ಬೆಲೆಯನ್ನು 85 ರು. ನಿಂದ 55 ರೂ.ಗೆ ಇಳಿಸಲಾಗಿದೆ. ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯೆಲ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. 20 ತಿಂಗಳ ಹಿಂದೆ ಇದೇ ಸಾಮರ್ಥ್ಯದ (7 ರಿಂದ 9 ವ್ಯಾಟ್) ಬಲ್ಬಗ ಗೆ 310 ರೂ ಇತ್ತು.[ಎಲ್ ಇಡಿ ಬಲ್ಬ್ ಬಳಕೆಯಿಂದ ಒದಗುವ 9 ಅನುಕೂಲಗಳು]

led

ಕೇಂದ್ರ ಸರ್ಕಾರ ಈಗಾಗಲೇ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು 9 ಕೋಟಿ ಬಲ್ಬ್ ವಿತರಣೆ ಮಾಡಿದೆ. ಎಲ್ ಇಡಿ ಮೇಲೆ ಭಾರತದ ಷೇರು ಪ್ರಮಾಣವೂ ಹೆಚ್ಚಿಗೆ ಆಗಿದೆ. ಶೇ. 0.1 ರಿಂದ ಶೇ. 12 ಕ್ಕೆ ಏರಿಕೆಯಾಗಿದೆ. ಒಟ್ಟು 15 ಕೋಟಿ ಬಲ್ಬ್ ವಿತರಣೆ ಗುರಿಯನ್ನು ಹೊಂದಿದ್ದು ಪರಿಣಾಮ 4.5 ಸಾವಿರ ಕೋಟಿ ದೇಶದ ಬೊಕ್ಕಸಕ್ಕೆ ಉಳಿಯುತ್ತದೆ ಎಂದು ಕೇಂದ್ರ ಸಚಿವ ಘೋಯಲ್ ತಿಳಿಸಿದ್ದಾರೆ.["ಕರ್ನಾಟಕದಲ್ಲಿ ಇನ್ಮುಂದೆ ಎಲ್‌ಇಡಿ ಬಳಕೆ ಕಡ್ಡಾಯ"]

ಅಲ್ಲದೇ ವಿದ್ಯುತ್ ಲಭ್ಯತೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಮೊಬೈಲ್ ಅಪ್ಲಿಕೇಶನ್ ವೊಂದನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

English summary
The procurement cost of LED bulbs has fallen further to Rs 54.90 per unit from Rs 64.41 under Domestic Efficient Lighting Programme of the government, which will further reduce the retail price to around Rs 85. "I am delighted to announce that LED bulb procurement price has dropped to Rs 54.90. It is 83 per cent reduction from Rs 310 just 20 months back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X