ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಷ್ಟು ಬೇಗ ಭಾರತ ಬಿಡುವುದು ಸುರಕ್ಷಿತ; ನಾಗರಿಕರಿಗೆ ಅಮೆರಿಕ ಎಚ್ಚರಿಕೆ

|
Google Oneindia Kannada News

ನವದೆಹಲಿ, ಏಪ್ರಿಲ್ 29: ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಯಾರೂ ಭಾರತಕ್ಕೆ ಹೋಗದಂತೆ ಹಾಗೂ ಭಾರತದಲ್ಲಿರುವವರು ಆದಷ್ಟು ಬೇಗ ದೇಶಕ್ಕೆ ಮರಳುವಂತೆ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಹೀಗೆ ಮಾಡುವುದು ಸುರಕ್ಷಿತ ಎಂದು ಹೇಳಿದೆ.

ಕೊರೊನಾದಿಂದಾಗಿ ಭಾರತದಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಗಂಭೀರವಾಗಿ ತಗ್ಗುತ್ತಿದ್ದು, ನಾಗರಿಕರು ಬೇಗ ಮರಳುವುದು ಉತ್ತಮ ಎಂದು ಹೇಳಿದೆ.

ದೇಶದಲ್ಲಿ ಮತ್ತೆ ಕೊರೊನಾ ಸ್ಫೋಟ 3.70 ಲಕ್ಷ ಕೊರೊನಾ ಸೋಂಕಿತರು ಪತ್ತೆ, 3645 ಮಂದಿ ಸಾವು ದೇಶದಲ್ಲಿ ಮತ್ತೆ ಕೊರೊನಾ ಸ್ಫೋಟ 3.70 ಲಕ್ಷ ಕೊರೊನಾ ಸೋಂಕಿತರು ಪತ್ತೆ, 3645 ಮಂದಿ ಸಾವು

ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕ ಆರೋಗ್ಯ ಇಲಾಖೆ, ಭಾರತವನ್ನು ಬಿಟ್ಟು ಬರಲು ಇಚ್ಛಿಸುವ ನಾಗರಿಕರು ಈಗಿರುವ ವಾಣಿಜ್ಯ ಸಾರಿಗೆ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸದ್ಯಕ್ಕೆ ಭಾರತದಿಂದ ಅಮೆರಿಕಕ್ಕೆ ದಿನನಿತ್ಯ ನೇರ ವಿಮಾನವಿದೆ. ಪ್ಯಾರಿಸ್ ಹಾಗೂ ಫ್ರಾಂಕ್‌ಫರ್ಟ್‌ನಿಂದ ಆಗಮಿಸುವ ವಿಮಾನಗಳೂ ಲಭ್ಯವಿವೆ ಎಂದು ತಿಳಿಸಿದೆ.

Leave India As Soon As Possible US Tells Its Citizens

ಭಾರತದಲ್ಲಿ ದಾಖಲೆ ಮಟ್ಟದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಹಲವೆಡೆ ಪರೀಕ್ಷಾ ಮಟ್ಟವೂ ಕುಸಿದಿದೆ. ಆಸ್ಪತ್ರೆಗಳಲ್ಲಿ ಆಮ್ಲಜನಕ, ಹಾಸಿಗೆ, ಔಷಧಗಳ ಕೊರತೆ ಅಧಿಕವಾಗಿದೆ ಎಂದು ಅಮೆರಿಕ ರಾಯಭಾರಿ ಎಚ್ಚರಿಕೆ ನೀಡಿದೆ.

ಹಲವು ರಾಷ್ಟ್ರಗಳು ಈಗಾಗಲೇ ಭಾರತದ ವಿಮಾನ ಸಂಪರ್ಕವನ್ನು ಕಡಿತಗೊಳಿಸಿವೆ.

ಭಾರತದಲ್ಲಿ ಮತ್ತೆ ಕೊರೊನಾ ಸ್ಫೋಟವಾಗಿದ್ದು, ಗುರುವಾರ 3,79,257 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 3645 ಮಂದಿ ಸಾವನ್ನಪ್ಪಿದ್ದಾರೆ, 2,69,507 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 1,83,76,524 ಕೊರೊನಾ ಸೋಂಕಿತರಿದ್ದಾರೆ, ಇದುವರೆಗೆ 1,50,86,878 ಮಂದಿ ಗುಣಮುಖರಾಗಿದ್ದಾರೆ. 30,84,814 ಪ್ರಕರಣಗಳು ಸಕ್ರಿಯವಾಗಿವೆ.

English summary
US government advised its citizens not to travel to India or to leave as soon as it is safe to do so,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X