ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್‌ಗೆ ಗೌರವ ಸಲ್ಲಿಸಿದ ಮೋದಿ, ಸೋನಿಯಾ, ರಾಹುಲ್

|
Google Oneindia Kannada News

ನವದೆಹಲಿ, ಆಗಸ್ಟ್, 20: ಮಾಜಿ ಪ್ರಧಾನಿ ರಾಜೀವ್ ಗಾಂಧಿ 71 ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲ ನಾಯಕರು ಗುರುವಾರ ಗೌರವ ಸಲ್ಲಿಕೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ರಾಜೀವ್ ಗಾಂಧಿ ಅವರಿಗೆ ಟ್ವಿಟ್ಟರ್ ವಂದನೆ ಸಲ್ಲಿಸಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಬರ್ಟ್ ವಾದ್ರಾ, ಪ್ರಿಯಾಂಕಾ ವಾದ್ರಾ ನವದೆಹಲಿಯಲ್ಲಿರುವ ರಾಜೀವ್ ಸಮಾಧಿಗೆ ನಮನ ಸಲ್ಲಿಕೆ ಮಾಡಿದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹ ರಾಜೀವ್ ಗಾಂಧಿ ಅವರಿಗೆ ಗೌರವ ಸಲ್ಲಿಸಿದರು.

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು ನಾಯಕರ ಈ ನಡೆ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ. ಗುರುವಾರದ ಘಟನಾವಳಿಗಳ ಸುತ್ತ ಒಂದು ಚಿತ್ರನೋಟ(ಪಿಟಿಐ ಚಿತ್ರಗಳು)

ರಾಜೀವ್ ಗಾಂಧಿಗೆ ನಮನ

ರಾಜೀವ್ ಗಾಂಧಿಗೆ ನಮನ

ಕಾಂಗ್ರೆಸ್ ಅಧ್ಯಕ್ಷೆ, ರಾಜೀವ್ ಗಾಂಧಿ ಪತ್ನಿ ಸೋನಿಯಾ ಗಾಂಧಿ, ಮಗ ರಾಹುಲ್ ಗಾಂಧಿ, ಅಳಿಯ ರಾಬರ್ಟ್ ವಾದ್ರಾ, ಮಗಳು ಪ್ರಿಯಾಂಕಾ ವಾದ್ರಾ ನವದೆಹಲಿಯಲ್ಲಿರುವ ರಾಜೀವ್ ಸಮಾಧಿಗೆ ನಮನ ಸಲ್ಲಿಕೆ ಮಾಡಿದರು.

ಪ್ರಣಬ್ ಮುಖರ್ಜಿ

ಪ್ರಣಬ್ ಮುಖರ್ಜಿ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮದಿನದ ಹಿನ್ನೆಲೆಯಲ್ಲಿ ಗೌರವ ಸಲ್ಲಿಕೆ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.

ನರೇಂದ್ರ ಮೋದಿ ಟ್ವೀಟ್

ಟ್ವೀಟ್ ಮೂಲಕ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ.

ತಂದೆಗೆ ನಮನ

ತಂದೆಗೆ ನಮನ

ತಂದೆ ರಾಜೀವ್ ಗಾಂಧಿ ಅವರ ಸಮಾಧಿಗೆ ನಮನ ಸಲ್ಲಿಕೆ ಮಾಡಿದ ರಾಹುಲ್ ಗಾಂಧಿ. ಟ್ವಿಟರ್ ನಲ್ಲೂ ಸಹ #RememberingRajiv ಗುರುವಾರ ಮುಂಜಾನೆಯಿಂದಲೇ ಟ್ರೆಂಡಿಂಗ್ ನಲ್ಲಿದೆ.

ಒಂದೇ ವೇದಿಕೆಯಲ್ಲಿ

ಒಂದೇ ವೇದಿಕೆಯಲ್ಲಿ

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಶಕ್ತಿ ಪ್ರದರ್ಶನ ಮಾಡಿದ್ದು ಹೀಗೆ.

ಮಾವ-ಸೊಸೆ

ಮಾವ-ಸೊಸೆ

ರಾಜೀವ್ ಗಾಂಧಿ ಜನ್ಮದಿನದ ಕಾರ್ಯಕ್ರಮದಲ್ಲಿ ಮಾವ ರಾಹುಲ್ ಗಾಂಧಿ ಜತೆ ಕಾಣಿಸಿಕೊಂಡ ಪ್ರಿಯಾಂಕಾ ವಾದ್ರಾ ಮಗಳು ಮಿರಾಯಾ.

ಸೋನಿಯಾ-ಸುಮಿತ್ರಾ

ಸೋನಿಯಾ-ಸುಮಿತ್ರಾ

ರಾಜೀವ್ ಗಾಂಧಿ ನಮನ ಕಾರ್ಯಕ್ರಮಕ್ಕೆ ಆಗಮಿಸಿದ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ಬರಮಾಡಿಕೊಂಡ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ.

English summary
Prime Minister Narendra Modi today paid tributes to former Prime Minister Rajiv Gandhi on his birth anniversary. President Pranab Mukherjee led the nation in paying homage to former Prime Minister Rajiv Gandhi on his 71st birth anniversary on Thursday. Congress President and Rajiv Gandhi's wife Sonia Gandhi, son Rahul Gandhi, daughter Priyanka Gandhi, son-in-law Robert Vadra and granddaughter Miraya Vadra paid tribute to Rajiv at his memorial, Vir Bhumi, in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X