ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಟ್ಟಿಂಗ್ ಕಾನೂನು ಬದ್ಧ ಗೊಳಿಸಲು ಕಾನೂನು ಆಯೋಗ ಶಿಫಾರಸು

By Manjunatha
|
Google Oneindia Kannada News

ನವದೆಹಲಿ, ಜುಲೈ 07: ಮ್ಯಾಚ್ ಫಿಕ್ಸಿಂಗ್ ಮತ್ತಿತರ ಕ್ರೀಡಾ ವಂಚನೆಗಳಂತಹಾ ಪ್ರಕರಣ ತಡೆಗಟ್ಟಲು ಕ್ರಿಕೆಟ್ ಸೇರಿದಂತೆ ಕ್ರೀಡೆಗಳಲ್ಲಿ ಬೆಟ್ಟಿಂಗ್ ಕಾನೂನು ಬದ್ಧಗೊಳಿಸುವಂತೆ ಕಾನೂನು ಆಯೋಗ ಶಿಫಾರಸು ಮಾಡಿದೆ.

ಜೂಜಾಟವನ್ನು ಪ್ರತ್ಯಕ್ಷ ಅಥವಾ ಪರೋಕ್ಷ ತೆರಿಗೆ ಒಳಪಡಿಸಿ ಕಾನೂನು ಬದ್ಧಗೊಳಿಸಿದರೆ ಆದಾಯ ಮೂಲವೂ ಆಗುತ್ತದೆ. ಅಲ್ಲದೆ ಈಗ ನಿಯಂತ್ರಣ ಸಾಧ್ಯವಿಲ್ಲದ ಬೆಟ್ಟಿಂಗ್ ದಂಧೆಯ ಮೇಲೆ ನಿಯಂತ್ರಣ ಹೇರಲೂ ಸಹ ಇದು ಸಹಾಯವಾಗಲಿದೆ ಎಂದು ಆಯೋಗವು ಅಭಿಪ್ರಾಯ ಪಟ್ಟಿದೆ.

ಕ್ರೀಡಾಪಟುಗಳ ಆದಾಯಕ್ಕೆ ಕೈ ಹಾಕಿದ ಹರಿಯಾಣ ಸರ್ಕಾರ!ಕ್ರೀಡಾಪಟುಗಳ ಆದಾಯಕ್ಕೆ ಕೈ ಹಾಕಿದ ಹರಿಯಾಣ ಸರ್ಕಾರ!

ಜೂಜಾಟವನ್ನು ಕಾನೂನು ಬದ್ಧಗೊಳಿಸಿದರೆ ವಿದೇಶಿ ಬಂಡವಾಳ ನೇರ ಹೂಡಿಕೆಯನ್ನಾಗಿಯೂ ಬಳಸಿಕೊಳ್ಳಬಹುದು. ನೇರ ನಿಯಂತ್ರಣ ಸಾಧ್ಯವಾಗದ ಇಂತಹಾ ಚಟುವಟಿಕೆಯನ್ನು ಕಾನೂನು ಬದ್ಧಗೊಳಿಸಿ ನಿಯಂತ್ರಿಸಲು ಸಾಧ್ಯ ಎಂದು ವರದಿಯಲ್ಲಿ ಹೇಳಲಾಗಿದೆ.

law commission recommends to legalize betting in sports

ಜೂಜಾಟ ಅಥವಾ ಬೆಟ್ಟಿಂಗ್ ಅನ್ನು ನಗದುರಹಿತಗೊಳಿಸಿ ಕೇವಲ ಡಿಜಿಟಲ್ ರೂಪಕ್ಕೆ ಅವಕಾಶ ಕೊಡಬೇಕು. ಬೆಟ್ಟಿಂಗ್ ದಾರರ ಆಧಾರ್ ಸಂಖ್ಯೆ ಅಥವಾ ಪ್ಯಾನ್ ದಾಖಲೆಗಳನ್ನು ಬಳಸಿಕೊಂಡು ಹಣದ ವಿನಿಯೋಗ ಮತ್ತು ವರ್ಗಾವಣೆಯನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದೆ.

ದುಡ್ಡಿಲ್ಲದೆ ಪರದಾಡುತ್ತಿದ್ದ ಯುವ ಮಹಿಳಾ ಶೂಟರ್‌ಗೆ ಯೋಗಿ ಸರ್ಕಾರ ನೆರವುದುಡ್ಡಿಲ್ಲದೆ ಪರದಾಡುತ್ತಿದ್ದ ಯುವ ಮಹಿಳಾ ಶೂಟರ್‌ಗೆ ಯೋಗಿ ಸರ್ಕಾರ ನೆರವು

ಸಂಸತ್ತಿನಲ್ಲಿ ಮಾದರಿ ಕಾನೂನು ಅಂಗೀಕರಿಸಬಹುದು, ಇದರ ಆಧಾರದಲ್ಲಿ ರಾಜ್ಯಗಳೂ ಸಹ ತಮ್ಮದೇ ಕಾನೂನು ರೂಪಿಸಿಕೊಳ್ಳಬಹುದು. ಸಂವಿಧಾನದ ವಿಧಿ 249 ಮತ್ತು 252 ರ ಅಡಿಯಲ್ಲಿ ಸಂಸತ್ತು ಕಾನೂನು ರೂಪಿಸಬಹುದು. ವಿಧಿ 252ರ ಅಡಿಯಲ್ಲಿ ರೂಪಿಸಿದ ಕಾನೂನನ್ನು ರಾಜ್ಯಗಳು ಅನುಸರಿಸಬಹುದು ಎಂದು ವರದಿಯಲ್ಲಿ ಸೂಚಿಸಲಾಗಿದೆ.

English summary
Law commission recommends to legalize betting in cricket and all other sports to prevent match fixing and many other issue. It said it will be a source of income to the country. but it should done in digital currency and proper Adhara and PAN details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X