ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಇಸ್ರೋದಿಂದ ಮೊತ್ತ ಮೊದಲ 'ಖಾಸಗಿ ಉಪಗ್ರಹ' ಉಡಾವಣೆ

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ISRO: First Private Sector Satellite IRNSS- 1H Launch Today | Oneindia Kannada

ಬೆಂಗಳೂರು,ಆಗಸ್ಟ್ 31: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಉಡಾವಣೆ ಮಾಡಲಿರುವ 'ಐಆರ್‌ಎನ್‌ಎಸ್‌ಎಸ್‌-1ಎಚ್' ಉಪಗ್ರಹ ಮೊದಲ ಖಾಸಗಿ ಉಪಗ್ರಹವಾಗಿದೆ.

ಈ ಉಪಗ್ರಹವನ್ನು ಖಾಸಗಿ ಕಂಪನಿ ಮತ್ತು ಇಸ್ರೋ ಜಂಟಿಯಾಗಿ ತಯಾರಿಸಿದೆ. ಈ ಹಿಂದೆ ಇಸ್ರೋ ಉಪಗ್ರಹಗಳಿಗೆ ಬೇಕಾದ ಬಿಡಿಭಾಗಗಳನ್ನು ಮಾತ್ರ ಖಾಸಗಿ ಕಂಪೆನಿಗಳಿಗೆ ಆರ್ಡರ್ ನೀಡಿ ಪಡೆದುಕೊಳ್ಳುತ್ತಿತ್ತು.

 ಇಂದು ಇಸ್ರೋದಿಂದ ಮಹತ್ವದ 'ಬದಲಿ' ಉಪಗ್ರಹ ಉಡಾವಣೆ ಇಂದು ಇಸ್ರೋದಿಂದ ಮಹತ್ವದ 'ಬದಲಿ' ಉಪಗ್ರಹ ಉಡಾವಣೆ

ಆದರೆ ಇದೇ ಮೊದಲ ಬಾರಿಗೆ 'ಐಆರ್‌ಎನ್‌ಎಸ್‌ಎಸ್‌-1ಎಚ್' ಉಪಗ್ರಹವನ್ನು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ತಯಾರಿಸಲಾಗಿದೆ. ವಿಶೇಷ ಎಂದರೆ ಈ ಕಂಪನಿ ಬೆಂಗಳೂರು ಮೂಲದ್ದಾಗಿದೆ.

ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಸಹಭಾಗಿತ್ವ

ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಸಹಭಾಗಿತ್ವ

ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಕಂಪೆನಿಯೊಂದಿಗೆ ಇಸ್ರೋ ಈ ಉಪಗ್ರಹದ ಜೋಡಣೆ, ರಚನೆ ಮತ್ತು ಉಪಗ್ರಹದ ಪರೀಕ್ಷೆಯನ್ನು ನಡೆಸಿದೆ.

70 ಎಂಜಿನಿಯರ್ ಗಳ ಜತೆ ಉಪಗ್ರಹ ತಯಾರಿ

70 ಎಂಜಿನಿಯರ್ ಗಳ ಜತೆ ಉಪಗ್ರಹ ತಯಾರಿ

'ಐಆರ್‌ಎನ್‌ಎಸ್‌ಎಸ್‌-1ಎಚ್' ಉಪಗ್ರಹ ತಯಾರಿಗೆ ಇಸ್ರೋ ಖಾಸಗಿ ಕಂಪೆನಿಯ 70 ಎಂಜಿನಿಯರ್ ಗಳ ನೆರವು ಪಡೆದಿತ್ತು. 70 ಎಂಜಿನಿಯರ್ ಗಳ ತಂಡದೊಂದಿಗೆ ಈ ಉಪಗ್ರಹದ ಜೋಡಣೆ ಮತ್ತು ಪರೀಕ್ಷೆ ನಡೆಸಿತ್ತು. ಇದಲ್ಲದೆ ಇನ್ನೂ ಒಂದು ಉಪಗ್ರಹವನ್ನು ಇದೇ ತಂಡದೊಂದಿಗೆ ಇಸ್ರೋ ತಯಾರಿಸಲಿದೆ.

ಖಾಸಗಿ ಕಂಪೆನಿಗಳ ಜತೆ ಇಸ್ರೋ

ಖಾಸಗಿ ಕಂಪೆನಿಗಳ ಜತೆ ಇಸ್ರೋ

ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಖಾಸಗಿ ಕಂಪನಿಗಳ ಜತೆ ಸೇರಿ ರಾಕೆಟ್ ಮತ್ತು ಉಪಗ್ರಹಗಳನ್ನು ನಿರ್ಮಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ.

ಸಂಜೆ 6.59ಕ್ಕೆ 'ಬದಲಿ' ಉಪಗ್ರಹ ಉಡಾವಣೆ

ಸಂಜೆ 6.59ಕ್ಕೆ 'ಬದಲಿ' ಉಪಗ್ರಹ ಉಡಾವಣೆ

'ಐಆರ್‌ಎನ್‌ಎಸ್‌ಎಸ್‌-1ಎಚ್' ಈ ಹಿಂದೆ ಉಡಾವಣೆಯಾಗಿದ್ದ 'ಐಆರ್‌ಎನ್‌ಎಸ್‌ಎಸ್‌-1ಎ' ಉಪಗ್ರಹಕ್ಕೆ ಬದಲಿಯಾಗಿ ಉಡಾವಣೆ ಮಾಡಲಾಗುತ್ತಿದೆ. 'ಐಆರ್‌ಎನ್‌ಎಸ್‌ಎಸ್‌-1ಎ' ಻ಅಟೋಮಿಕ್ ಕ್ಲಾಕ್ ವಿಫಲಗೊಂಡ ಹಿನ್ನಲೆಯಲ್ಲಿ ಈ ಉಡಾವಣೆ ಮಾಡಲಾಗುತ್ತಿದೆ.

ಸಂಜೆ 6.59 ನಿಮಿಷಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ-ಸಿ39 ರಾಕೆಟ್ 'ಐಆರ್‌ಎನ್‌ಎಸ್‌ಎಸ್‌-1ಎಚ್' ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಲಿದೆ.

English summary
ISRO is set to launch the IRNSS-1H satellite, the first satellite jointly assembled by the space agency and a private consortium on Thursday. Private firms had so far only built components and systems for India's satellites and rockets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X