ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ನಾಲ್ವರು ಕೊವಿಡ್-19 ಸೋಂಕಿತರಲ್ಲಿ ಒಬ್ಬರು ಭಾರತೀಯರು!

|
Google Oneindia Kannada News

ನವದೆಹಲಿ, ಆಗಸ್ಟ್.25: ಕಳೆದ ಒಂದು ವಾರದಲ್ಲಿ ಜಗತ್ತಿನಲ್ಲಿ ಪತ್ತೆಯಾದ ನಾಲ್ವರು ನೊವೆಲ್ ಕೊರೊನಾವೈರಸ್ ಸೋಂಕಿತರಲ್ಲಿ ಒಬ್ಬರು ಭಾರತೀಯರೇ ಆಗಿದ್ದರು ಎಂಬ ವಿಚಾರ ಅಂಕಿ-ಅಂಶಗಳ ಸಮೇತ ಸಾಬೀತಾಗಿದೆ.

Recommended Video

Chris Gayle went to a party with Usain Bolt, who has now tested Corona Positive | Oneindia Kannada

ವಿಶ್ವದಾದ್ಯಂತ ಕಳೆದ ಎಂಟು ದಿನಗಳಲ್ಲಿ ದೃಢಪಟ್ಟಿರುವ ಒಟ್ಟು ಕೊವಿಡ್-19 ಪ್ರಕರಣಗಳಲ್ಲಿ ಶೇ.26.20ರಷ್ಟು ಪ್ರಕರಣಗಳು ಭಾರತದಲ್ಲೇ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಇನ್ನು, ಒಟ್ಟು ಸಾವಿನ ಪ್ರಮಾಣದಲ್ಲಿ ಶೇ.16.90ರಷ್ಟು ಜನರು ಭಾರತೀಯರೇ ಆಗಿದ್ದಾರೆ.

24 ಗಂಟೆಗಳಲ್ಲೇ 60975 ಜನಕ್ಕೆ ಕೊವಿಡ್-19 ಸೋಂಕು, 848 ಮಂದಿ ಸಾವು!24 ಗಂಟೆಗಳಲ್ಲೇ 60975 ಜನಕ್ಕೆ ಕೊವಿಡ್-19 ಸೋಂಕು, 848 ಮಂದಿ ಸಾವು!

ವಿಶ್ವದಲ್ಲಿ 2,38,11,693 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮಹಾಮಾರಿಗೆ ಇದುವರೆಗೂ ಜಗತ್ತಿನಲ್ಲಿ 8,17,005 ಜನರು ಪ್ರಾಣ ಬಿಟ್ಟಿದ್ದಾರೆ. ಇದುವರೆಗೂ 1,63,60,536 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಸೋಮವಾರ ದೇಶದಲ್ಲಿ 59041 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಇದು ಕಳೆದ ಏಳು ದಿನಗಳಲ್ಲೇ ಪತ್ತೆಯಾದ ಅತ್ಯಂತ ಕಡಿಮೆ ಪ್ರಕರಣಗಳು ಎಂದು ಗುರುತಿಸಲಾಗಿದೆ. ಆಗಸ್ಟ್.21ರ ಶುಕ್ರವಾರ ಅತಿಹೆಚ್ಚು ಅಂದರೆ 10.30 ಲಕ್ಷ ಜನರನ್ನು ಕೊವಿಡ್-19 ತಪಾಸಣೆಗೊಳಪಡಿಸಲಾಗಿತ್ತು.

ಭಾರತದಲ್ಲಿ ಒಂದೇ ವಾರ 4.5 ಲಕ್ಷ ಜನರಿಗೆ ಕೊವಿಡ್-19

ಭಾರತದಲ್ಲಿ ಒಂದೇ ವಾರ 4.5 ಲಕ್ಷ ಜನರಿಗೆ ಕೊವಿಡ್-19

ಭಾರತದಲ್ಲಿ ಕಳೆದ ಒಂದು ವಾರದಲ್ಲೇ ಬರೋಬ್ಬರಿ 4.5 ಲಕ್ಷ ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಇದು ವಿಶ್ವದಲ್ಲೇ ದೃಢಪಟ್ಟಿರುವ ಒಟ್ಟು ಸೋಂಕಿತ ಪ್ರಕರಣಗಳ ಶೇ.26.20ರಷ್ಟಾಗುತ್ತದೆ.

ವಿಶ್ವದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಭಾರತದ ಪಾಲು

ವಿಶ್ವದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಭಾರತದ ಪಾಲು

ಈ ಆಗಸ್ಟ್ ತಿಂಗಳ ಮೂರು ವಾರಗಳ ಪೈಕಿ ಯಾವ ವಾರದಲ್ಲಿ ವಿಶ್ವದ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಭಾರತದ ಶೇಕಡಾವಾರು ಪ್ರಮಾಣವು ಎಷ್ಟಿದೆ ಎನ್ನುವುದರ ಕುರಿತು ಒಂದು ಪಟ್ಟಿ ಇಲ್ಲಿದೆ ನೋಡಿ.

ಅವಧಿ ಭಾರತದಲ್ಲಿ ಸೋಂಕಿತರ ಪ್ರಮಾಣ

ಆಗಸ್ಟ್.3-9 ಶೇ.22.70

ಆಗಸ್ಟ್.10-16 ಶೇ.23.90

ಆಗಸ್ಟ್.17-23 ಶೇ.26.20

ಕೊರೊನಾವೈರಸ್ ನಿಂದ ಸಾವನ್ನಪ್ಪಿದವರಲ್ಲಿ ಭಾರತೀಯರೆಷ್ಟು?

ಕೊರೊನಾವೈರಸ್ ನಿಂದ ಸಾವನ್ನಪ್ಪಿದವರಲ್ಲಿ ಭಾರತೀಯರೆಷ್ಟು?

ಭಾರತದಲ್ಲಿ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟ ಪ್ರಕರಣಗಳಿಗಿಂತ ಗುಣಮುಖ ಪ್ರಕರಣಗಳೇ ಹೆಚ್ಚು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೇಳುತ್ತಿದೆ. ಇನ್ನೊಂದು ಕಡೆಯಲ್ಲಿ ವಿಶ್ವದ ಒಟ್ಟು ಸಾವಿನ ಅಂಕಿ-ಸಂಖ್ಯೆಯನ್ನು ಗಮನಿಸಿದಾಗ ಭಾರತದಲ್ಲೂ ಕೊವಿಡ್-19 ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿ ಕ್ರಮೇಣ ಏರಿಕೆ ಕಂಡು ಬರುತ್ತಿದೆ. ಈ ಕುರಿತು ಒಂದು ಪಟ್ಟಿ ಇಲ್ಲಿದೆ ನೋಡಿ.

ಅವಧಿ ಭಾರತದಲ್ಲಿ ಸಾವಿನ ಪ್ರಮಾಣ

ಆಗಸ್ಟ್.3-9 ಶೇ. 15.20

ಆಗಸ್ಟ್.10-16 ಶೇ.16.80

ಆಗಸ್ಟ್.17-23 ಶೇ.16.90

ಭಾರತದಲ್ಲಿ ಒಂದೇ ದಿನ ದೃಢಪಟ್ಟ ಪ್ರಕರಣದ ವಿವರ

ಭಾರತದಲ್ಲಿ ಒಂದೇ ದಿನ ದೃಢಪಟ್ಟ ಪ್ರಕರಣದ ವಿವರ

ದೇಶದಲ್ಲಿ ಕಳೆದ 24 ಗಂಟೆಗಳಲ್ಲೇ 60975 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 848 ಜನರು ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಕೊವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ 58390ಕ್ಕೆ ಏರಿಕೆಯಾಗಿದೆ. ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 3167324ಕ್ಕೆ ಏರಿಕೆಯಾಗಿದೆ. ಈ ಪೈಕಿ 24,04,585 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 7,04,348 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
Last Week Numbers: 26% Cases Found From India In Total Global Coronavirus Cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X