ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

26/11 ಮಾದರಿ ಉಗ್ರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಕಟ್ಟೆಚ್ಚರ!

20 ರಿಂದ 25 ಲಷ್ಕರ್ ಉಗ್ರರು ದೇಶದೊಳಗೆ ನುಸುಳಿದ್ದು 26/11 ಮಾದರಿಯಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಕಟ್ಟೆಚ್ಚರ

|
Google Oneindia Kannada News

ನವದೆಹಲಿ, ಮೇ 30: ಸುಮಾರು 20 ರಿಂದ 25 ಲಷ್ಕರ್ ಉಗ್ರರು ದೇಶದೊಳಗೆ ನುಸುಳಿದ್ದು 26/11 ಮಾದರಿಯಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಕಟ್ಟೆಚ್ಚರ ನೀಡಿದೆ.

ಪಾಕಿಸ್ತಾನದ ಗಡಿಗೆ ಹೊಂದಿರುವ ನಗರಗಳು, ಮೆಟ್ರೋ ಸಿಟಿ, ವಿಮಾನ ನಿಲ್ದಾಣ, ಜನನಿಬಿಡ ರೈಲ್ವೇ ನಿಲ್ದಾಣಗಳನ್ನು ಗುರಿಯಾಗಿರಿಸಿಕೊಂಡು ಲಷ್ಕರ್ -ಇ-ತೊಯಿಬಾ ಉಗ್ರರು ದಾಳಿ ಮಾಡುವ ಸಾಧ್ಯತೆಯಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಲ್ಲಾ ರಾಜ್ಯಗಳಿಗೆ ಸಂದೇಶ ರವಾನಿಸಿದೆ.

20-25 Lashkar terrorists enter India, may carry out 26/11-like attack: Intel inputs

ಗುಪ್ತಚರ ಇಲಾಖೆಯ ಎಚ್ಚರಿಕೆಯ ಬೆನ್ನಲ್ಲೇ, ದೇಶದ ಎಲ್ಲಾ ವಿಮಾನ ನಿಲ್ದಾಣ, ಪ್ರಮುಖ ರೈಲ್ವೇ ನಿಲ್ದಾಣ, ಪಾಕಿಸ್ತಾನದ ಗಡಿಯಲ್ಲಿರುವ ರಾಜ್ಯಗಳಲ್ಲಿ ಹೈಎಲರ್ಟ್ ಘೋಷಿಸಲಾಗಿದೆ.

ಜೊತೆಗೆ, ಜನನಿಬಿಡ ಪ್ರವಾಸಿ ಸ್ಥಳಗಳಲ್ಲೂ ಭದ್ರತೆ ಹೆಚ್ಚಿಸಬೇಕೆದು ಕೇಂದ್ರ ಗೃಹಸಚಿವಾಲಯ ಎಲ್ಲಾ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ತಿಳಿಸಿದೆ.

ಕದನವಿರಾಮ ಉಲ್ಲಂಘನೆ, ಗಡಿನುಸುಳುವಿಕೆಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಹಿಜ್ಬುಲ್ ಕಮಾಂಡರ್ ಸಬ್ಜಾರ್ ಭಟ್ ಎನ್ಕೌಂಟರ್ ನಲ್ಲಿ ಬಲಿಯಾದ ನಂತರ, ಪ್ರತೀಕಾರವಾಗಿ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

English summary
As many as 20 to 25 LeT terrorists have entered India and may carry out attacks like 26/11 in states bordering Pakistan, metro cities, railway stations say intel inputs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X