ಇಂದು ಭೂಮಿ ಸಮೀಪ ಹಾದು ಹೋಗಲಿದೆ ಶತಮಾನದ ದೊಡ್ಡ 'ಕ್ಷುದ್ರಗ್ರಹ'
ಮಿಯಾಮಿ, ಸೆಪ್ಟೆಂಬರ್ 1: ಇಂದು ಭೂಮಿಯ ಸಮೀಪದಿಂದ ಶತಮಾನ ಅತ್ಯಂತ ದೊಡ್ಡ ಕ್ಷುದ್ರಗ್ರಹ ಹಾದು ಹೋಗಲಿದೆ. 70 ಲಕ್ಷ ಕಿಲೋ ಮೀಟರ್ ದೂರದಲ್ಲಿ ಈ ಕ್ಷುದ್ರಗ್ರಹ ಹಾದುಹೋಗಲಿದೆ ಎಂದು ನಾಸಾ ತಿಳಿಸಿದೆ.
ಮಂಗಳನ ಅಂಗಳದಿ ಮಂಜಿನ ರಂಗವಲ್ಲಿ: ನಾಸಾ ಕ್ಲಿಕ್ಕಿಸಿದ ಅಪರೂಪದ ಚಿತ್ರ
ಈ ಉಪಗ್ರಹ ಹಾದು ಹೋಗುವುದರಿಂದ ಭೂಮಿಗೆ ಯಾವ ಸಮಸ್ಯೆಯೂ ಇಲ್ಲ ಎಂದೂ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಖಚಿತಪಡಿಸಿದೆ.
1981ರಲ್ಲಿ ಈ ಕ್ಷುದ್ರಗ್ರಹವನ್ನು ಪತ್ತೆಹಚ್ಚಲಾಗಿತ್ತು. ಇದಕ್ಕೆ ಫ್ಲೋರೆನ್ಸ್ ಎಂದು ಹೆಸರಿಡಲಾಗಿದೆ. ಈ ಕ್ಷುದ್ರ ಗ್ರಹ 4.4 ಕಿಲೋ ಮೀಟರ್ ಅಗಲವಿದೆ. ಈಜಿಪ್ಟ್ ನ 30 ಪಿರಮಿಡ್ ಗಳಷ್ಟು ತೂಕವನ್ನು ಇದು ಹೊಂದಿದೆ.
ಹಲವು ಕ್ಷುದ್ರಗ್ರಹಗಳು ಫ್ಲೋರೆನ್ಸ್ ಗಿಂತ ಭೂಮಿಗೆ ಸಮೀಪದಲ್ಲಿ ಹಾದು ಹೋಗಿವೆ. ಆದರೆ ಅವ್ಯಾವುವೂ ಫ್ಲೋರೆನ್ಸ್ ನಷ್ಟು ದೊಡ್ಡದಲ್ಲ ಎಂದು ನಾಸಾ ತಜ್ಞರು ವಿಶ್ಲೇಷಿಸಿದ್ದಾರೆ.
ಈ ಕ್ಷುದ್ರಗ್ರಹವನ್ನು ಕ್ಯಾಲಿಫೋರ್ನಿಯಾ ಮತ್ತು ಪೋರ್ಟೋರಿಕಾದಲ್ಲಿರುವ ರಾಡಾರ್ ಗಳ ಮೂಲಕ ಅಧ್ಯಯನ ನಡೆಸಲು ವಿಜ್ಞಾನಿಗಳು ಸಿದ್ದರಾಗಿದ್ದಾರೆ.
1890ರಲ್ಲಿ ಇದೇ ರೀತಿ ಭೂಮಿ ಸಮೀಪ ಫ್ಲೋರೆನ್ಸ್ ಹಾದು ಹೋಗಿತ್ತು. ಇನ್ನು 2500 ರವರೆಗೆ ಫ್ಲೋರೆನ್ಸ್ ಈ ರೀತಿ ಸಮೀಪದಲ್ಲಿ ಹಾದುಹೋಗುವುದಿಲ್ಲ.