ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲಪ್ರದೇಶದಲ್ಲಿ ಭೂಕುಸಿತ, ವಾಹನಗಳ ಸಂಚಾರ ಸ್ಥಗಿತ

|
Google Oneindia Kannada News

ಕಿನ್ನೌರ್, ಜನವರಿ 04: ಹಿಮಾಚಲಪ್ರದೇಶದ ಕಿನ್ನೌರ್-ಕಾಜಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ವಿವಿಧ ಗ್ರಾಮಗಳಲ್ಲಿ ಭೂಕುಸಿತ ಉಂಟಾಗಿದೆ. ಈ ರಸ್ತೆ ಲಾಹೌಲ್-ಸ್ಪಿತಿ ಜಿಲ್ಲೆಯ ಸಂಪರ್ಕ ಒದಗಿಸಲಿದೆ. ಭೂಕುಸಿತ ಹಾಗೂ ಹಿಮಪಾತದಿಂದಾಗಿ ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ.

ಭೂಕುಸಿತ ಸ್ಥಳದಿಂದ ಎರಡೂ ಬದಿ ರಸ್ತೆಯಲ್ಲಿ ಅಸಂಖ್ಯ ವಾಹನಗಳು ಸಾಲುಗಟ್ಟಿ ನಿಂತಿಎ, ಗಡಿ ರಸ್ತೆ ಸಂಘಟನೆ ಸಿಬ್ಬಂದಿ ಪರಿಸ್ಥಿತಿ ತಹಬದಿಗೆ ತರಲು ಹರಸಾಹಸ ಪಡುತ್ತಿದ್ದಾರೆ.

Landslide In Himachal’s Kinnaur Leaves Hundreds Of People Stranded

ಇನ್ನು ಹಿಮಾಚಲ ಪ್ರದೇಶ ಕಂಗ್ರಾ ಜಿಲ್ಲೆಯ ಪಾಂಗ್ ಅಣೆಕಟ್ಟು ಪ್ರದೇಶದಲ್ಲಿ 1400ಕ್ಕೂ ಹೆಚ್ಚು ವಲಸೆ ಹಕ್ಕಿಗಳು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ರಕ್ಷಿತಾರಣ್ಯ ಪ್ರದೇಶದಲ್ಲಿ ಎಲ್ಲಾ ಪ್ರವಾಸಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸ್ಥಳೀಯಾಡಳಿತ ಸೂಚಿಸಿದೆ.

ಈ ಪಕ್ಷಿಗಳ ಸಾವಿಗೆ ಕಾರಣಪತ್ತೆ ಮಾಡುವ ನಿಟ್ಟಿನಲ್ಲಿ ವನ್ಯ ವಿಭಾಗದ ಅಧಿಕಾರಿಗಳು, ಸತತ್ ಹಕ್ಕಿಗಳಿಂದ ಮಾದರಿಗಳನ್ನು ಪರೀಕ್ಷೆಗೆಂದು ಭೋಪಾಲ್‌ನಲ್ಲಿರುವ ಪ್ರಾಣಿ ರೋಗ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

ವಿಕೋಪ ನಿರ್ವಹಣೆ ಕಾಯ್ದೆ 2005ರ ಅನ್ವಯ ಕಂಗ್ರಾ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಪ್ರಜಾಪತಿ ಆದೇಶ ಹೊರಡಿಸಿ, ಮುಂದಿನ ಆದೇಶದ ವರೆಗೆ ಪಾಂಗ್ ಸರೋವರದ ಒಂದು ಕಿ.ಮೀ ಸರಹದ್ದಿನಲ್ಲಿ ಯಾವುದೇ ಜನ ಸಂಚಾರ ಅಥವಾ ಸಾಕುಪ್ರಾಣಿಗಳನ್ನು ಮೇಯಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪಕ್ಷಿಗಳ ಸಾವಿಗೆ ವಾತಾವರಣ ಕಾರಣವೇ ಎಂದು ಪರೀಕ್ಷಿಸಲಾಗುತ್ತಿದೆ.

English summary
Hundreds of people have been left stranded after a landslide at Malling Nullah near Naco in Kinnaur district blocked the Kinnaur-Kaza national highway on Monday, a district official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X