ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡೋಲ್ಲ : ಮೋದಿ

|
Google Oneindia Kannada News

ನವದೆಹಲಿ, ಆ. 31 : ಪ್ರತಿಪಕ್ಷಗಳು ಮತ್ತು ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ತಿದ್ದುಪಡಿ ಕಾಯ್ದೆಯ ಸುಗ್ರೀವಾಜ್ಞೆಯ ವಾಯಿದೆ ಸೋಮವಾರಕ್ಕೆ ಅಂತ್ಯಗೊಳ್ಳಲಿದ್ದು, ಹೊಸದಾಗಿ ಸುಗ್ರೀವಾಜ್ಞೆ ಹೊರಡಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ 'ಮನ್‌ ಕೀ ಬಾತ್‌' ರೇಡಿಯೋ ಭಾಷಣದಲ್ಲಿ ಭೂಸ್ವಾಧೀನ ಕಾಯ್ದೆ ಬಗ್ಗೆ ಮಾತನಾಡಿದ್ದಾರೆ. ಭೂಸ್ವಾಧೀನ ಕಾಯ್ದೆ ಸುಗ್ರೀವಾಜ್ಞೆಯ ಅವಧಿ ಸೋಮವಾರಕ್ಕೆ ಅಂತ್ಯಗೊಳ್ಳಲಿದೆ. ಪುನಃ ಸುಗ್ರೀವಾಜ್ಞೆಯನ್ನು ಹೊರಡಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. [ಭೂಸ್ವಾಧೀನ ಕಾಯ್ದೆ ರೈತ ವಿರೋಧಿಯಲ್ಲ : ಮೋದಿ]

narendra modi

ಸರ್ಕಾರದ ಈ ನಿರ್ಧಾರದಿಂದ ಪ್ರತಿಪಕ್ಷಗಳು ಹಾಗೂ ರೈತ ಸಂಘಟನೆಗಳ ಹೋರಾಟ ಯಶಸ್ವಿಯಾದಂತಾಗಿದೆ. ಪುನಃ ಸುಗ್ರೀವಾಜ್ಞೆ ಹೊರಡಿಸುವುದಿಲ್ಲ ಎಂದು ಹೇಳುವ ಮೂಲಕ ಭೂಸ್ವಾಧೀನ ಮಸೂದೆ ವಿಚಾರದಲ್ಲಿ ಕೇಂದ್ರ ಸರ್ಕಾರ ಯೂ-ಟರ್ನ್ ತೆಗೆದುಕೊಂಡಂತಾಗಿದೆ. [ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಕೈಬಿಡದಿದ್ದರೆ ಹೋರಾಟ]

2013ರ ಸುಗ್ರೀವಾಜ್ಞೆ : ಭೂಸ್ವಾಧೀನ ಕಾಯ್ದೆಗೆ ಹಲವು ತಿದ್ದುಪಡಿ ತರುವ ಸಲುವಾಗಿ ಎನ್‌ಡಿಎ ಸರ್ಕಾರ 2013ರಲ್ಲಿ ಸುಗ್ರೀವಾಜ್ಞೆ ಹೊರಡಿಸಿತ್ತು. ಈಗ ಸುಗ್ರೀವಾಜ್ಞೆ ಅವಧಿ ಮುಕ್ತಾಯಗೊಂಡರೂ ಹೊಸದಾಗಿ ಸುಗ್ರೀವಾಜ್ಞೆ ಹೊರಡಿಸುವುದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.

ಭೂ ಸ್ವಾಧೀನ ಹೇಗೆ : ಭೂಸ್ವಾಧೀನ ಕಾಯ್ದೆ ತಿದ್ದುಪಡಿಯ ಸುಗ್ರೀವಾಜ್ಞೆಯನ್ನು ಸರ್ಕಾರ ಪುನಃ ಹೊರಡಿಸುವುದಿಲ್ಲ. ಆದ್ದರಿಂದ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಜಾರಿಯಲ್ಲಿದ್ದ ಕಾನೂನುಗಳ ಅನ್ವಯವೇ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ.

ಹಿಂದಿನ ಕಾನೂನಿನಂತೆ ಭೂಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ ಶೇ.80 ರೈತರ ಸಮ್ಮತಿ ಹಾಗೂ ಸಾಮಾಜಿಕ ಪರಿಣಾಮದ ಅಧ್ಯಯನವನ್ನು ಕಡ್ಡಾಯವಾಗಿ ಕೈಗೊಂಡು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗುತ್ತದೆ. 2013ರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಇದುವರೆಗೂ 3 ಬಾರಿ ಸುಗ್ರೀವಾಜ್ಞೆ ಹೊರಡಿಸಿತ್ತು. ಮಸೂದೆಗೆ ಸಂಸತ್‌ನ ಅಂಗೀಕಾರ ಪಡೆಯಲು ಸರ್ಕಾರ ವಿಫಲವಾಗಿತ್ತು.

ಮನ್ ಕೀ ಬಾತ್ ಕೇಳಿ..

English summary
Prime Minister Narendra Modi in his monthly radio address 'Mann Ki Baat' on Sunday said, land acquisition ordinance will not be reissued on Monday. The ordinance, first issued in December 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X