ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮಗಳು

|
Google Oneindia Kannada News

ನವದೆಹಲಿ, ಮೇ 11: ಕಾಂಗ್ರೆಸ್‌ನ ವಂಶಾಡಳಿತ ಮನಸ್ಥಿತಿಯನ್ನು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗಳು ಮಹಿಮಾ ಶಾಸ್ತ್ರಿ ಪ್ರಶ್ನಿಸಿದ್ದಾರೆ.

ತಮ್ಮ ತಂದೆ ಪ್ರಧಾನಿಯ ಮಗನಾಗಿದ್ದರೂ ಅತ್ಯಂತ ಸರಳ ಬದುಕು ನಡೆಸಿದ್ದರು. ಅವರು ಎಂದಿಗೂ ವೈಯಕ್ತಿಕ ಐಷಾರಾಮಿತನಕ್ಕೆ ರಾಜ್ಯದ ಸವಲತ್ತುಗಳನ್ನು ಬಳಸಿಕೊಳ್ಳಲಿಲ್ಲ ಎಂದಿದ್ದಾರೆ.

ದ್ವೀಪಕ್ಕೆ ತೆರಳಲು ರಾಜೀವ್ ಕುಟುಂಬ ಐಎನ್‌ಎಸ್ ವಿರಾಟ್ ಬಳಸಿದ್ದು ಸತ್ಯವೇ, ಸುಳ್ಳೇ?ದ್ವೀಪಕ್ಕೆ ತೆರಳಲು ರಾಜೀವ್ ಕುಟುಂಬ ಐಎನ್‌ಎಸ್ ವಿರಾಟ್ ಬಳಸಿದ್ದು ಸತ್ಯವೇ, ಸುಳ್ಳೇ?

ಟೈಮ್ಸ್ ನೌ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಮಹಿಮಾ ಶಾಸ್ತ್ರಿ, ಸರ್ಕಾರದ ಸವಲತ್ತನ್ನು ತಮ್ಮ ಕುಟುಂಬದವರು ಬಳಸಿಕೊಳ್ಳುವುದಕ್ಕೆ ತಾತ ಲಾಲ್ ಬಹದ್ದೂರ್ ಶಾಸ್ತ್ರಿ ಎಂದಿಗೂ ಒಪ್ಪಿರಲಿಲ್ಲ ಎಂದು ಹೇಳಿದ್ದಾರೆ.

ಮರೆತುಹೋದ ಶಾಸ್ತ್ರಿಯನ್ನು ನೆನಪಿಸಿದ ಅಣ್ಣಾ ಹಜಾರೆಮರೆತುಹೋದ ಶಾಸ್ತ್ರಿಯನ್ನು ನೆನಪಿಸಿದ ಅಣ್ಣಾ ಹಜಾರೆ

lal bahadur shastri granddaughter mahima shastri on misuse of state resources congress dynasti

ರಾಜೀವ್ ಗಾಂಧಿ ಅವರ ಕುಟುಂಬ ರಜೆ ದಿನಗಳನ್ನು ಕಳೆಯಲು ಪ್ರಯಾಣಿಸುವ ಸಲುವಾಗಿ ನೌಕಾಪಡೆಯ ಹಡಗನ್ನು ಬಳಸಿಕೊಂಡಿತ್ತು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

'ಪ್ರಾಮಾಣಿಕ ಪ್ರಧಾನಿ' ಶಾಸ್ತ್ರಿಗೆ ಸಾಲ ನೀಡಿದ್ದ ಪಿಎನ್ ಬಿ! 'ಪ್ರಾಮಾಣಿಕ ಪ್ರಧಾನಿ' ಶಾಸ್ತ್ರಿಗೆ ಸಾಲ ನೀಡಿದ್ದ ಪಿಎನ್ ಬಿ!

ನನ್ನ ಎಲ್ಲ ಚಿಕ್ಕಪ್ಪ-ದೊಡ್ಡಪ್ಪ ಮತ್ತು ಅಪ್ಪ ಶಾಲೆಗೆ ತೆರಳಲು ಪ್ರಧಾನಿಯ ಕಾರನ್ನು ಬಳಸಿಕೊಂಡಿಸಿದ್ದರು. ಆದರೆ, ಇದರಿಂದ ತೀವ್ರ ಬೇಸರಗೊಂಡಿದ್ದ ಬಾಬೂಜಿ (ಲಾಲ್ ಬಹದ್ದೂರ್ ಶಾಸ್ತ್ರಿ) ಕಾರ್‌ನ ಪೆಟ್ರೋಲ್ ವೆಚ್ಚವನ್ನು ಲೆಕ್ಕಹಾಕಿ ಅದನ್ನು ದೇಶಕ್ಕೆ ಮರು ಪಾವತಿ ಮಾಡಿದ್ದರು. ಅವರು ಹೊಂದಿದ್ದ ಸರಳತೆ ಮತ್ತು ಪ್ರಾಮಾಣಿಕತೆ ಆ ರೀತಿಯದು ಎಂದು ನೆನಪಿಸಿಕೊಂಡರು.

'ಐಎನ್‌ಎಸ್ ವಿರಾಟ್‌ನಲ್ಲಿ ರಜೆಯ ಮೋಜು ಅನುಭವಿಸಿದ್ದ ರಾಜೀವ್ ಕುಟುಂಬ: ಮೋದಿ 'ಐಎನ್‌ಎಸ್ ವಿರಾಟ್‌ನಲ್ಲಿ ರಜೆಯ ಮೋಜು ಅನುಭವಿಸಿದ್ದ ರಾಜೀವ್ ಕುಟುಂಬ: ಮೋದಿ

ವೈಯಕ್ತಿಕ ಜೀವನ ಮತ್ತು ಸರ್ಕಾರಿ ಉದ್ಯೋಗಿಯಾಗಿ ನಿಮ್ಮ ಕೆಲಸ ಎರಡೂ ಬೇರೆ ಬೇರೆಯದು. ಅದನ್ನು ನೀವು ನಿಮ್ಮ ಖಾಸಗಿ ಕೆಲಸಕ್ಕೆ ಬಳಸಿಕೊಳ್ಳಬಾರದು ಎಂದರು.

English summary
Granddaughter of former Prime Minister Lal Bahadur Shastri, Mahima Shastri slammed Congress on using state resources for personal luxury.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X