ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತರ ಕಂದಮ್ಮಗಳಿಗಾಗಿ ಅಮೃತ ಧಾರೆಯೆರೆದ ಮಮತಾಮಯಿಗಳು

By Prasad
|
Google Oneindia Kannada News

ಸೂರತ್, ಆಗಸ್ಟ್ 06 : ತಾಯಿ ತನ್ನ ಮಗುವಿನ ಸ್ತನ್ಯಪಾನ ಮಾಡಿಸಿ ಅಮೃತ ಸಮಾನವಾದ ಹಾಲನ್ನು ಊಡಿಸುವುದರಲ್ಲಿ ವಿಶಿಷ್ಟ ಸುಖವನ್ನು ಅನುಭವಿಸುತ್ತಾಳೆ. ಇದು ಮಗುವಿಗೂ ಮತ್ತು ತಾಯಿಯ ಆರೋಗ್ಯಕ್ಕೂ ಒಳ್ಳೆಯದು.

ಆದರೆ, ತಾಯಿಯ ಹಾಲಿಗೆ ಗತಿಯಿಲ್ಲದೆ ಪೌಷ್ಟಿಕಾಂಶಗಳಿಂದ ವಂಚಿತರಾಗುತ್ತಿರುವ ಮಕ್ಕಳಿಗೆಂದೇ ತಾಯಂದಿರು ಬಂದು ತಮ್ಮ ಎದೆಹಾಲನ್ನು ದಾನವಾಗಿ ನೀಡಿದ್ದು ಭಾರೀ ಪ್ರಶಂಸೆಗೊಳಗಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಇದಕ್ಕಿಂತ ಇನ್ನೇನು ಬೇಕು?

ಅನಾಥ ಶಿಶುವಿಗೆ ಎದೆ ಹಾಲುಣಿಸಿ ಮಾನವೀಯತೆ ತೋರಿದ ಮಹಿಳಾ ಕಾನ್‌ಸ್ಟೆಬಲ್ಅನಾಥ ಶಿಶುವಿಗೆ ಎದೆ ಹಾಲುಣಿಸಿ ಮಾನವೀಯತೆ ತೋರಿದ ಮಹಿಳಾ ಕಾನ್‌ಸ್ಟೆಬಲ್

ಸೂರತ್ ನಲ್ಲಿ ಭಾನುವಾರ 21ನೇ ತಾಯಂದಿರ ಹಾಲು ದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಒಟ್ಟು 130ಕ್ಕೂ ಹೆಚ್ಚು ತಾಯಂದಿರು ಬಂದು 7 ಲೀಟರ್ ಗೂ ಹೆಚ್ಚು ಹಾಲನ್ನು ದಾನ ಮಾಡಿ ತಾಯಿಯ ಮಮತೆಯನ್ನು ಇತರ ಮಕ್ಕಳಿಗಾಗಿ ಮೆರೆದಿದ್ದಾರೆ. ಈ ತಾಯಂದಿರು ಎಂದಿಗೂ ಸುಖವಾಗಿರಲಿ.

Lactating women donate milk for the infants in Surat

ಸೂರತ್ ಪೀಡಿಯಾಟ್ರಿಕ್ ಅಸೋಸಿಯೇಷನ್, ಯಶೋಧಾ ಮಿಲ್ಕ್ ಬ್ಯಾಂಕ್ ಮತ್ತು ಕಛ್ ಯಾದವ ಪಟೀದಾರ್ ಸಮಾಜ ಮಹಿಳಾ ಮಂಡಳದ ವತಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ಶಿಬಿರದ ವಿಶೇಷವೇನೆಂದರೆ, 25 ವರ್ಷಗಳ ನಂತರ ತಾಯಿಯಾಗಿರುವ ಸುಖ ಅನುಭವಿಸುತ್ತಿರುವ ಮಹಿಳೆಯೊಬ್ಬರು ಬಂದು ಹಾಲನ್ನು ದಾನ ಮಾಡಿದ್ದು. ತಮ್ಮ ಮಕ್ಕಳಿಗೆ ಹಾಲೂಡಿಸಿದರೆ ಎಲ್ಲಿ ತಮ್ಮ ಸೌಂದರ್ಯ ಹಾಳಾಗುತ್ತದೋ ಎಂದು ಚಿಂತಿಸುವ ಅಮ್ಮಂದಿರ ನಡುವೆ ಈ ಮಹಿಳೆ ಆದರ್ಶಪ್ರಾಯವಾಗಿದ್ದಾರೆ.

ಮಂಗಳಮುಖಿಯಿಂದಲೇ ತನ್ನ ಮಗುವಿಗೆ ಅಮೃತಧಾರೆ! ಮಂಗಳಮುಖಿಯಿಂದಲೇ ತನ್ನ ಮಗುವಿಗೆ ಅಮೃತಧಾರೆ!

ಹಲವರು ದೂರದೂರಿಂದ ಬಂದಿದ್ದರೆ, ಕೇವಲ 9 ದಿನಗಳ ಹಿಂದೆ ಮಗುವಿಗೆ ಜನುಮ ನೀಡಿರುವ ತಾಯಿಯೊಬ್ಬರು ಕೂಡ ಹಾಲು ದಾನ ಮಾಡಿದ್ದಾರೆ. ಇನ್ನೂ ಕೆಲವರು ತಮ್ಮ ಮನೆಯಲ್ಲಿರುವ ಕೆಲಸ ಕಾರ್ಯಗಳನ್ನೆಲ್ಲ ಬದಿಗೊತ್ತಿ, ಇತರರ ಮಕ್ಕಳು ಸುಖವಾಗಿರಲೆಂದು ಬಂದಿದ್ದು ನೋಡುಗರ ಹೃದಯ ತುಂಬುವಂತಿತ್ತು.

ಇತ್ತೀಚೆಗೆ ಅನಾಥ ಶಿಶುವೊಂದಕ್ಕೆ ಕರ್ನಾಟಕ ಕಾನ್‌ಸ್ಟೇಬಲ್ ಒಬ್ಬರು ಸ್ತನ್ಯಪಾನ ಮಾಡಿಸಿ ಮಾನವೀಯತೆ ಮೆರೆದಿದ್ದರು. ಇಂಥ ಎಷ್ಟೋ ಮಕ್ಕಳು ತಾಯಿಯ ಹಾಲು ಸಿಗದೆ ಅನಾರೋಗ್ಯಕ್ಕೆ ಈಡಾಗುತ್ತಿವೆ, ಪೌಷ್ಟಿಕತೆಯಿಂದ ವಂಚಿತವಾಗುತ್ತಿವೆ. ಈ ನಿಟ್ಟಿನಲ್ಲಿ ಹಾಲು ದಾನ ಮಾಡುವ ಶಿಬಿರ ಮಹತ್ವದ್ದು ಮತ್ತು ದೇಶದ ಎಲ್ಲೆಡೆ ಜರುಗಬೇಕು.

ಇಂಥದು ಭಾರತದಲ್ಲಿ ಮಾತ್ರ ಸಾಧ್ಯ. ಇಂಥ ಸುದ್ದಿ ಓದಲು ನಿಜಕ್ಕೂ ಖುಷಿಯಾಗುತ್ತದೆ ಎಂದು ಒಬ್ಬರು ಕೊಂಡಾಡಿದ್ದರೆ, ಹೀಗೆ ಹಾಲನ್ನು ಅನ್ಯ ಮಕ್ಕಳಿಗೆ ದಾನ ಮಾಡಿ ಆ ತಾಯಿ ಎಷ್ಟು ಖುಷಿ ಅನುಭವಿಸಿದ್ದಾರೋ ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಇಂಥ ಕಾರ್ಯಕ್ರಮಗಳಿಂದಾಗಿಯೇ ಗುಜರಾತ್ ಪ್ರಗತಿಯ ಹಾದಿಯಲ್ಲಿದೆ. ಹಾಲು ದಾನ ಮಾಡಿದ ತಾಯಂದಿರಿಗೆ ನನ್ನ ಹ್ಯಾಟ್ಸ್ ಆಫ್ ಎಂದು ನಬೀನ್ ಪಾತ್ರೋ ಎಂಬುವವರು ಟ್ವೀಟ್ ಮಾಡಿದ್ದಾರೆ. ಮಾನವೀಯತೆ ತೋರಿದ್ದಕ್ಕೆ, ತಾಯ್ತನ ಮೆರೆದಿದ್ದಕ್ಕೆ ಎಲ್ಲ ಅಮ್ಮಂದಿರಿಗೂ ನನ್ನ ಸೆಲ್ಯೂಟ್ ಎಂದು ರುವಾಲಿ ಎಂಬುವವರು ಪ್ರಶಂಸಿಸಿದ್ದಾರೆ.

English summary
A milk donation camp was held in Surat city on Sunday for the infants who do not get mothers' milk. More than 130 lactating women participated in the camp and donated milk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X