ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂ. 2,500 ಕೋಟಿಗೆ ಶಿವಾಜಿ ಪ್ರತಿಮೆಯ ಗುತ್ತಿಗೆ ಪಡೆದ ಎಲ್&ಟಿ

By Sachhidananda Acharya
|
Google Oneindia Kannada News

ಮುಂಬೈ, ಮಾರ್ಚ್ 2: ಮರಾಠ ದೊರೆ ಶಿವಾಜಿ ಮಹಾರಾಜ ಪ್ರತಿಮೆ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. 210 ಮೀಟರ್ ಎತ್ತರದ ಶಿವಾಜಿ ಪ್ರತಿಮೆ ನಿರ್ಮಾಣದ ಗುತ್ತಿಗೆಯನ್ನು ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಎಲ್ ಆ್ಯಂಡ್ ಟಿ' ಪಡೆದುಕೊಂಡಿದೆ.

ರೂ. 2500 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಎಲ್ ಆ್ಯಂಡ್ ಟಿ ಪಡೆದುಕೊಂಡಿದ್ದು, ಇದಕ್ಕೆ ಗುರುವಾರ ಮಹಾರಾಷ್ಟ್ರ ಸರಕಾರ ಅಂಗೀಕಾರ ನೀಡಿದೆ.

ಮಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಮಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ

಻ಅರಬ್ಬೀ ಸಮುದ್ರದಲ್ಲಿ ಬೃಹತ್ ಶಿವಾಜಿ ಪ್ರತಿಮೆ ನಿರ್ಮಿಸಲಾಗುವುದು ಎಂದು 8 ವರ್ಷಗಳ ಹಿಂದೆಯೇ ಮಹಾರಾಷ್ಟ್ರ ಸರಕಾರ ಘೋಷಿಸಿತ್ತು. ಆದರೆ ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ.

ಟೆಂಡರ್ ಪಡೆಯಲು 3 ಕಂಪನಿಗಳ ಆಸಕ್ತಿ

ಟೆಂಡರ್ ಪಡೆಯಲು 3 ಕಂಪನಿಗಳ ಆಸಕ್ತಿ

ಈ ಪ್ರತಿಮೆ ನಿರ್ಮಾಣಕ್ಕಾಗಿ ಇತ್ತೀಚೆಗೆ ಮಹಾರಾಷ್ಟ್ರ ಸರಕಾರ ಟೆಂಡರ್ ಕರೆದಿತ್ತು. ಇದನ್ನು ಪಡೆದುಕೊಳ್ಳಲು ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್, ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಮತ್ತು ಎಲ್ ಆ್ಯಂಡ್ ಟಿ ಮುಂದೆ ಬಂದಿದ್ದವು. ಇದೀಗ ಎಲ್ ಆ್ಯಂಡ್ ಟಿ ಇದರ ಗುತ್ತಿಗೆಯನ್ನು ಪಡೆದುಕೊಂಡಿದೆ.

2500 ಕೋಟಿ ರೂ. ಗೆ ಗುತ್ತಿಗೆ

2500 ಕೋಟಿ ರೂ. ಗೆ ಗುತ್ತಿಗೆ

ಈ ಹಿಂದೆ 3,826 ಕೋಟಿ ರೂಪಾಯಿಗೆ ಈ ಯೋಜನೆಯನ್ನು 'ಎಲ್ ಆ್ಯಂಡ್ ಟಿ' ಕೇಳಿತ್ತು. ಆದರೆ ಇಷ್ಟು ಮೊತ್ತಕ್ಕೆ ಗುತ್ತಿಗೆ ನೀಡಲು ಸರಕಾರ ನಿರಾಕರಿಸಿತ್ತು. ಇದೀಗ ರೂ. 2,500 ಕೋಟಿಗೆ ಯೋಜನೆಯ ಗುತ್ತಿಗೆ ನೀಡಲಾಗಿದೆ.

3,600 ಕೋಟಿ ರೂ. ಯೋಜನೆ

3,600 ಕೋಟಿ ರೂ. ಯೋಜನೆ

ಒಟ್ಟಾರೆ 3,600 ಕೋಟಿ ರೂಪಾಯಿಗಳ ಯೋಜನೆ ಇದಾಗಿದೆ. ಇದರಲ್ಲಿ 1,100 ಕೋಟಿ ರೂಪಾಯಿಗಳನ್ನು ಎರಡನೇ ಹಂತದ ಯೋಜನೆಗೆ ಬಳಸಲಾಗುತ್ತದೆ. ತಾಂತ್ರಿಕ ಕಾರಣಗಳಿಗೆ ರಿಲಾಯನ್ಸ್ ಗುತ್ತಿಗೆ ಕಳೆದುಕೊಂಡಿದ್ದರೆ, ಆಫ್ಕಾನ್ಸ್ ಬರೋಬ್ಬರಿ ರೂ. 4779 ಕೋರಿ ರೂಪಾಯಿ ಬಿಡ್ ಮಾಡಿತ್ತು.

6.8 ಹೆಕ್ಟೇರ್ ಜಾಗದಲ್ಲಿ ಸ್ಮಾರಕ

6.8 ಹೆಕ್ಟೇರ್ ಜಾಗದಲ್ಲಿ ಸ್ಮಾರಕ

ಯೋಜನೆ ಅನ್ವಯ ಮುಂಬೈನ ಮಲಬಾರ್ ಹಿಲ್ ಸಮೀಪ ಅರಬ್ಬೀ ಸಮುದ್ರದಲ್ಲಿ 6.8 ಹೆಕ್ಟೇರ್ ಜಾಗ ಸೃಷ್ಟಿಸಿ ಅಲ್ಲಿ ಪ್ರತಿಮೆ ಸ್ಥಾಪನೆ ಮಾಡಬೇಕಾಗಿದೆ. ಆರಂಭದಲ್ಲಿ 192 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಆದರೆ ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧನ ಪ್ರತಿಮೆ ಮೀರಿಸಲು ಎತ್ತರವನ್ನು 210 ಅಡಿಗೆ ಏರಿಕೆ ಮಾಡಲಾಗಿದೆ.

ಅಪ್ರತಿಮ ಶಿವಾಜಿ ಸ್ಮಾರಕ

ಅಪ್ರತಿಮ ಶಿವಾಜಿ ಸ್ಮಾರಕ

ಈ ಶಿವಾಜಿ ಸ್ಮಾರಕದಲ್ಲಿ ದೇವಸ್ಥಾನ, ವಸ್ತು ಸಂಗ್ರಹಾಲಯ, ಆಸ್ಪತ್ರೆ ಮತ್ರು ರಾಯಗಢ ಕೋಟೆ ಮಾದರಿಯ ಪ್ರವೇಶ ದ್ವಾರ ಮತ್ತು ಶಿವಾಜಿಯ ಜೀವನದ ಮುಖ್ಯ ಘಟ್ಟಗಳನ್ನು ತೋರಿಸುವ ಥಿಯೇಟರ್ ನಿರ್ಮಾಣವಾಗಲಿದೆ.

ಸ್ಮಾರಕದ ಇನ್ನೊಂದು ವಿಶೇಷವೆಂದರೆ 180 ಮೀಟರ್ ಎತ್ತರದವರೆಗೆ ಸ್ಮಾರಕದಲ್ಲಿ ಲಿಫ್ಟ್ ಕೂಡ ಅಳವಡಿಸಲಾಗುತ್ತದೆ.

'ಶಿವಾಜಿ ಶೌರ್ಯ,ಸಾಹಸ,ಹೋರಾಟ,ಆದರ್ಶ ಆಡಳಿತದ ಪ್ರತೀಕ''ಶಿವಾಜಿ ಶೌರ್ಯ,ಸಾಹಸ,ಹೋರಾಟ,ಆದರ್ಶ ಆಡಳಿತದ ಪ್ರತೀಕ'

English summary
The 210-metre-high statue of the Maratha warrior king Shivaji has moved closer to reality with the state government finally awarding the contract to build the much-delayed memorial in the Arabian Sea to engineering major Larsen & Toubro (L&T).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X