ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ ಕೆ ಅಡ್ವಾಣಿ ಹಾಗೂ ರಾಮದೇವ್ ಗೆ ಪದ್ಮ ಪ್ರಶಸ್ತಿ?

By Mahesh
|
Google Oneindia Kannada News

ನವದೆಹಲಿ, ಜ.6: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿದ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರಿಗೆ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ನೀಡಲು ಮೋದಿ ಸರ್ಕಾರ ಮುಂದಾಗಿದೆ. ಇದರ ಜೊತೆಗೆ ಯೋಗ ಗುರು ಬಾಬಾ ರಾಮದೇವ್ ಅವರಿಗೆ ಪದ್ಮಶ್ರೀ ಸಿಕ್ಕರೂ ಅಚ್ಚರಿಪಡಬೇಕಾಗಿಲ್ಲ.

ಭಾರತರತ್ನ ಪ್ರಶಸ್ತಿ ಬಳಿಕ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಪದ್ಮವಿಭೂಷಣ ಪ್ರಶಸ್ತಿಗೆ ಅಡ್ವಾಣಿ ಅವರನ್ನು ಪರಿಗಣಿಸಲು ಬಿಜೆಪಿ ತೀರ್ಮಾನಿಸಿದೆ. ಅಡ್ವಾಣಿ ಜೊತೆಗೆ ಯೋಗಗುರು ಬಾಬಾ ರಾಮ್‌ದೇವ್ ಹೆಸರಾಂತ ಯೋಗ ಪಂಡಿತ ಡೇವಿಡ್ ಫ್ರಾಲೆ ಹಾಗೂ ಬಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರಿಗೆ ಈ ಪ್ರಶಸ್ತಿ ನೀಡಲು ಸರ್ಕಾರ ಮುಂದೆ ಬಂದಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

87 ವರ್ಷದ ಹಿರಿಯ ನಾಯಕ ಅಡ್ವಾಣಿ ಅವರು ಭಾರತದ ಸಂಸತ್‌ಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ನೀಡಲು ಸಮ್ಮತಿಸಿದ್ದು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ.

L K Advani, Ramdev may get Padma awards

2002-04ರ ವೇಳೆ ಎನ್‌ಡಿಎ ಅವಧಿಯಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ ಸಂಪುಟದಲ್ಲಿ ಗೃಹ ಸಚಿವರ ಜೊತೆಗೆ ಉಪಪ್ರಧಾನಿಯಾಗಿಯೂ ಕಾರ್ಯನಿರ್ವಹಿಸಿದ್ದರು. ರಾಮ ಜನ್ಮ ಭೂಮಿ, ರಥ ಯಾತ್ರೆ ಸೇರಿದಂತೆ ಸಂಸತ್‌ಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅಡ್ವಾಣಿಗೆ ಈ ಪ್ರಶಸ್ತಿ ನೀಡಬೇಕೆಂಬುದು ಮೋದಿ ಸರ್ಕಾರ ಬಯಸಿದೆ.

ಯೋಗಾಭ್ಯಾಸದ ಮೂಲಕ ವಿಶ್ವದಾದ್ಯಂತ ಯೋಗವನ್ನು ಪರಿಚಯ ಮಾಡುತ್ತಿರುವಂತಹ ಹಾಗೂ ಹೆಸರಾಂತ ಆಟಗಾರ್ತಿ ಸೈನಾ ನೆಹ್ವಾಲ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲು ಆಯ್ಕೆ ಸಮಿತಿ ಶಿಫಾರಸ್ಸು ಮಾಡಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಸೈನಾ ಅವರಿಗೆ ಪದ್ಮ ಶ್ರೀ ಲಭಿಸಿ ಐದು ವರ್ಷವಾಗಿಲ್ಲ. ಅದರೂ ವಿಶೇಷ ರೀತಿ ಪರಿಗಣಿಸಿ ಶಿಫಾರಸ್ಸು ಕಳಿಸಲಾಗಿದೆ ಎಂದು ಕ್ರೀಡಾ ಸಚಿವಾಲಯ ಹೇಳಿದೆ.

English summary
Former deputy PM L K Advani may soon be honoured with the Padma Vibhushan, the second highest civilian award in the country, after former PM Atal Bihari Vajpayee was selected for the Bharat Ratna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X