ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಭ ಮೇಳ ಏಪ್ರಿಲ್ 1ರಿಂದ ಆರಂಭ: 30 ದಿನ ಮಾತ್ರ ಆಚರಣೆ

|
Google Oneindia Kannada News

ಡೆಹರಾಡೂನ್, ಫೆಬ್ರವರಿ 18: ಕೋವಿಡ್ ಸಾಂಕ್ರಾಮಿಕದ ನಡುವೆಯೇ ಉತ್ತರಾಖಂಡ ಸರ್ಕಾರವು ಕುಂಭ ಮೇಳ ಆಯೋಜಿಸುತ್ತಿದ್ದು, ಈ ಬಾರಿಯ ಕುಂಭ ಮೇಳ ಕೇವಲ 30 ದಿನ ನಡೆಯಲಿದೆ.

ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಏಪ್ರಿಲ್ 1 ರಿಂದ ಏಪ್ರಿಲ್ 30ರವರೆಗೆ 30 ದಿನಗಳ ಕಾಲ ಮಾತ್ರ ಕುಂಭ ಮೇಳ ನಡೆಯಲಿದ್ದು, ಮಾರ್ಚ್ ಅಂತ್ಯದ ವೇಳೆಗೆ ಈ ಸಂಬಂಧ ಸೂಚನೆ ಹೊರಡಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್ ತಿಳಿಸಿದ್ದಾರೆ.

ಕುಂಭಮೇಳ 2021; ಕೇಂದ್ರದಿಂದ ಭಕ್ತರಿಗೆ ಕಟ್ಟುನಿಟ್ಟಿನ ಆದೇಶಕುಂಭಮೇಳ 2021; ಕೇಂದ್ರದಿಂದ ಭಕ್ತರಿಗೆ ಕಟ್ಟುನಿಟ್ಟಿನ ಆದೇಶ

ಕುಂಭ ಮೇಳ ಈ ಹಿಂದಿನಂತೆ ಸುದೀರ್ಘ ಸಮಯ ನಡೆದರೆ ರಾಜ್ಯವು ಕೋವಿಡ್ ವೈರಸ್‌ನ ಹಾಟ್‌ಸ್ಪಾಟ್ ಆಗುವ ಅಪಾಯವಿದೆ ಎಂಬ ಭಯದಿಂದ ಈ ಆಚರಣೆಯ ದಿನಗಳನ್ನು ಕಡಿಮೆ ಮಾಡಲಾಗಿದೆ.

Kumbh Mela 2021 Will Begin On April 1, Limited To 30 Days Amid Covid-19 Scare

ಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಭಕ್ತಾದಿಗಳು ಪಾಸ್‌ಗಳನ್ನು ಪಡೆದುಕೊಳ್ಳುವುದು ಕಡ್ಡಾಯವಾಗಲಿದೆ ಎಂದು ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿ. ರವಿಶಂಕರ್ ತಿಳಿಸಿದ್ದಾರೆ.

'ಕುಂಭ ಮೇಳದಲ್ಲಿ ಭಾಗವಹಿಸಲು ಭಕ್ತರಿಗೆ ಪಾಸ್‌ಗಳು ಬೇಕಾಗುತ್ತದೆ. ಭಕ್ತರ ಕೋವಿಡ್ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ, ವೈದ್ಯಕೀಯ ಪ್ರಮಾಣಪತ್ರ ಮತ್ತು ಗುರುತಿನ ಪತ್ರ ಸಲ್ಲಿಸಿದ ಬಳಿಕವಷ್ಟೇ ಪಾಸ್ ನೀಡಲಾಗುತ್ತದೆ. ಪಾಸ್‌ಗಳಿಲ್ಲದವರಿಗೆ ಪ್ರವೇಶ ನೀಡುವುದಿಲ್ಲ' ಎಂದು ಅವರು ಹೇಳಿದ್ದಾರೆ.

ಕುಂಭಮೇಳ 2021: ಹರಿದ್ವಾರದ ಗಂಗಾ ನದಿಯಲ್ಲಿ 7 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರುಕುಂಭಮೇಳ 2021: ಹರಿದ್ವಾರದ ಗಂಗಾ ನದಿಯಲ್ಲಿ 7 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರು

ಕುಂಭ ಮೇಳದಲ್ಲಿ ಭದ್ರತೆಗೆ ನಿಯೋಜಿಸಲಾಗುವ ಪೊಲೀಸ್ ಸಿಬ್ಬಂದಿಯ ಸುರಕ್ಷತೆ ಖಾತರಿಗೆ 7,000 ಡೋಸ್‌ಗಳಷ್ಟು ಕೋವಿಡ್ ಲಸಿಕೆಗೆ ಜಿಲ್ಲಾಡಳಿತ ಬೇಡಿಕೆ ಇರಿಸಿದೆ. ಜನರ ಗುಂಪಿನ ಮೇಲೆ ನಿಗಾ ಇರಿಸಲು ಗಂಗಾ ಘಾಟ್‌ನಲ್ಲಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹರಿದ್ವಾರ, ಉಜ್ಜಯಿನಿ, ಪ್ರಯಾಗ್‌ರಾಜ್ ಮತ್ತು ನಾಸಿಕ್‌ನಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಕುಂಭ ಮೇಳ ಜಾತ್ರೆ ನಡೆಯಲಿದೆ. ಹರಿದ್ವಾರ ಮತ್ತು ಪ್ರಯಾಗ್‌ರಾಜ್‌ನಲ್ಲಿ ಪ್ರತಿ ಆರು ವರ್ಷಕ್ಕೊಮ್ಮೆ ಅರ್ಧ ಕುಂಭ ಮೇಳ ನಡೆಯುತ್ತದೆ. ಪ್ರಯಾಗ್‌ರಾಜ್‌ನಲ್ಲಿ ಪ್ರತಿ 12 ವರ್ಷಕ್ಕೆ ಒಮ್ಮೆ ಪೂರ್ಣ ಕುಂಭ ಮೇಳೆ ನಡೆಯುತ್ತದೆ. ಹಾಗೆಯೇ 144 ವರ್ಷಕ್ಕೆ ಒಮ್ಮೆ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ನಡೆಯುತ್ತದೆ.

English summary
Kumbh Mela 2021 will begin on April 1, limited to 30 days amid covid-19 scare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X