• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Explained: ಕುಂಭಮೇಳಕ್ಕೆ ಹೋಗುವ ಮೊದಲು ಈ ನಿಯಮಗಳನ್ನು ಓದಿ

|
Google Oneindia Kannada News

ನವದೆಹಲಿ, ಮಾರ್ಚ್ 24: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ಪ್ರಮಾಣ ಹೆಚ್ಚುತ್ತಿದೆ. ಉತ್ತರಾಖಂಡ್ ಕುಂಭಮೇಳ ಸಂದರ್ಭದಲ್ಲಿ COVID-19 ಹರಡುವುದನ್ನು ನಿಯಂತ್ರಿಸಲು ಕಠಿಣ ಕ್ರಮಗಳ ಅಗತ್ಯತೆಯ ಬಗ್ಗೆ ಉನ್ನತ ಮಟ್ಟದ ತಂಡವು ಮಾರ್ಗಸೂಚಿಗಳನ್ನು ನೀಡಿದೆ.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ನಿರ್ದೇಶಕರ ನೇತೃತ್ವದ ಕೇಂದ್ರ ತಂಡ ಮಾರ್ಚ್ 16-17 ರಂದು ಉತ್ತರಾಖಂಡಕ್ಕೆ ಭೇಟಿ ನೀಡಿತು. ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಪರಿಶೀಲಿಸಲು ಆರೋಗ್ಯ ಸಚಿವಾಲಯ ತಿಳಿಸಿದೆ.

ಕುಂಭಮೇಳಕ್ಕೆ ಹೋಗಲು ಕೊವಿಡ್-19 ನೆಗಟಿವ್ ವರದಿ ಬೇಕಿಲ್ಲ: ಸಿಎಂ ಆದೇಶಕುಂಭಮೇಳಕ್ಕೆ ಹೋಗಲು ಕೊವಿಡ್-19 ನೆಗಟಿವ್ ವರದಿ ಬೇಕಿಲ್ಲ: ಸಿಎಂ ಆದೇಶ

ಉತ್ತರಾಖಂಡ್ ರಾಜ್ಯದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತಾದಿಗಳು ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ. ಏಪ್ರಿಲ್ 1ರಿಂದ ಆರಂಭವಾಗುವ ಕುಂಭಮೇಳಕ್ಕೆ ಆಗಮಿಸುವ ಪ್ರವಾಸಿಗರಿಗೆ ಕೊರೊನಾವೈರಸ್ ನೆಗಟಿವ್ ವರದಿ ಕಡ್ಡಾಯವಿಲ್ಲ ಸರ್ಕಾರ ಆದೇಶಿಸಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಕುಂಭ ಮೇಳೆ ಎಂದರೇನು. ಯಾವು ರೀತಿಯ ಕೊವಿಡ್-19 ಶಿಷ್ಟಾಚಾರಗಳ ಪಾಲನೆ ಕಡ್ಡಾಯವಾಗಿರುತ್ತದೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಏನಿದು ಕುಂಭ ಮೇಳದ ಆಚರಣೆ?

ಏನಿದು ಕುಂಭ ಮೇಳದ ಆಚರಣೆ?

ಹರಿದ್ವಾರ, ನಾಸಿಕ್, ಪ್ರಯಾಗ್ ರಾಜ್ ಮತ್ತು ಉಜ್ಜೈನಿ ಕ್ಷೇತ್ರಗಳಲ್ಲಿ ಪ್ರತಿ 12 ವರ್ಷಗಳಿಗೆ ಒಮ್ಮೆ ಈ ಕುಂಭ ಮೇಳವನ್ನು ಆಚರಿಸಲಾಗುತ್ತದೆ. 2021ನೇ ಸಾಲಿನಲ್ಲಿ ನಡೆಯುತ್ತಿರುವ ಕುಂಭ ಮೇಳವು 12 ವರ್ಷದ ಬದಲಿಗೆ 11ನೇ ವರ್ಷಕ್ಕೆ ನಡೆಯುತ್ತಿದೆ. ಈ ಕುಂಭದ ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಗುರು ಈ ಚಕ್ರವನ್ನು 11 ವರ್ಷಗಳಲ್ಲಿ ಪೂರ್ಣಗೊಳಿಸುತ್ತಾನೆ. 2021ರಲ್ಲಿ ಅಕ್ವೇರಿಯಸ್ ಚಿಹ್ನೆಯನ್ನು ಪ್ರವೇಶಿಸುತ್ತಾನೆ. 2022 ರಲ್ಲಿ ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುವ ಹೊತ್ತಿಗೆ, ಗುರುವು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಗುರುವು ಅಕ್ವೇರಿಯಸ್ ಮತ್ತು 2021ರಲ್ಲಿ ಮೇಷ ರಾಶಿಯಲ್ಲಿ ಇರುತ್ತಾನೆ. ಆದ್ದರಿಂದ, 2021ರಲ್ಲಿ ಕುಂಭಮೇಳವನ್ನು ಆಯೋಜಿಸಲಾಗುವುದು ಎಂದು ಅಧಿಕೃತ ವೆಬ್‌ಸೈಟ್ ತಿಳಿಸಿದೆ.

ಕುಂಭ ಮೇಳ ಆಚರಿಸುವುದು ಏಕೆ?

ಕುಂಭ ಮೇಳ ಆಚರಿಸುವುದು ಏಕೆ?

ಒಂದು ವಿಶ್ವಾಸದ ಪ್ರಕಾರ, ದೇವರು ಮತ್ತು ರಾಕ್ಷಸರ ನಡುವಿನ ಯುದ್ಧವೊಂದು ನಡೆಯಿತು. ಈ ವೇಳೆ ಮಡಕೆಯಲ್ಲಿದ್ದ ಅಮೃತವು ಪ್ರಯಾಗರಾಜ್, ಉಜ್ಜಯಿನಿ, ಹರಿದ್ವಾರ್ ಮತ್ತು ನಾಸಿಕ್ ಎಂಬ ನಾಲ್ಕು ಸ್ಥಳಗಳಲ್ಲಿ ಬಿದ್ದಿತು. ಈ ಹಿನ್ನೆಲೆ ನಾಲ್ಕೂ ಸ್ಥಳಗಳಲ್ಲಿ ಕುಂಭ ಮೇಳವನ್ನು ನಡೆಸಲಾಗುತ್ತದೆ. ಈ ಪವಿತ್ರ ನದಿಗಳಲ್ಲಿ ಮುಳುಗಿದರೆ ಅವರ ಎಲ್ಲಾ ಪಾಪಗಳು ತೊಳೆಯುತ್ತವೆ ಎಂಬ ನಂಬಿಕೆ ಇದೆ.

ಮೂರೂವರೆ ತಿಂಗಳ ಬದಲಿಗೆ 48 ದಿನ ಕುಂಭ ಮೇಳ

ಮೂರೂವರೆ ತಿಂಗಳ ಬದಲಿಗೆ 48 ದಿನ ಕುಂಭ ಮೇಳ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ಹಿನ್ನೆಲೆ ಉತ್ತರಾಖಂಡ್ ಹರಿದ್ವಾರದಲ್ಲಿ ಮೂರೂವರೆ ತಿಂಗಳು ನಡೆಯುವ ಕುಂಭ ಮೇಳವನ್ನು 48 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಜನವರಿ 14 ರಂದು ಕುಂಭಮೇಳ ಪ್ರಾರಂಭವಾದರೆ, ಮೊದಲ ಶಾಹಿ ಸ್ನಾನ್ (ನದಿಯಲ್ಲಿ ಪವಿತ್ರ ಅದ್ದು) ಮಾರ್ಚ್ 11ರ ಮಹಾ ಶಿವರಾತ್ರಿಯಂದು ನಡೆಯಿತು.

- ಏಪ್ರಿಲ್ 12ರಂದು ಸೋಮವತಿ ಅಮವಾಸ್ಯೆ ಪುಣ್ಯಸ್ನಾನ

- ಏಪ್ರಿಲ್ 14ರಂದು ಬೈಸಖಿ ಪುಣ್ಯಸ್ನಾನ

- ಏಪ್ರಿಲ್ 27ರಂದು ಚೈತ್ರ ಪೂರ್ಣಮಾ ಪುಣ್ಯಸ್ನಾನ

- ಅಂತಿಮವಾಗಿ ಹರಿದ್ವಾರದಲ್ಲಿ ಕುಂಭ ಮೇಳದ ದಿನ ಶಾಹಿ ಸ್ನಾನದ ಮೂಲಕ ಅಂತ್ಯಗೊಳ್ಳಲಿ

ಕುಂಭ ಮೇಳಕ್ಕೆ ಕೊರೊನಾವೈರಸ್ ಮಾರ್ಗಸೂಚಿ

ಕುಂಭ ಮೇಳಕ್ಕೆ ಕೊರೊನಾವೈರಸ್ ಮಾರ್ಗಸೂಚಿ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ಆತಂಕದ ನಡುವೆ ಕುಂಭ ಮೇಳಕ್ಕೆ ತೆರಳುವ ಭಕ್ತಾಧಿಗಳಿಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಮತ್ತು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಪ್ರತಿಯೊಬ್ಬ ಪ್ರವಾಸಿಗರು ಈ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಸರ್ಕಾರ ಜಾರಿಗೊಳಿಸಿದ ಮಾರ್ಗಸೂಚಿಗಳಲ್ಲಿ ಏನಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

- ಕುಂಭ ಮೇಳಕ್ಕೆ ತೆರಳುವ ಭಕ್ತಾಧಿಗಳು ಮತ್ತು ಪ್ರವಾಸಿಗರು 72 ಗಂಟೆಗಳಿಗೂ ಮೊದಲು ಕೊವಿಡ್-19 ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿಯನ್ನು ತೆಗೆದುಕೊಂಡ ಹೋಗಿರಬೇಕು

- ಭಕ್ತಾಧಿಗಳು ಮತ್ತು ಪ್ರವಾಸಿಗರು ತಮ್ಮ ಹತ್ತಿರದ ಆರೋಗ್ಯ ಕೇಂದ್ರದಿಂದ ವೈದ್ಯಕೀಯ ಪ್ರಮಾಣಪತ್ರವನ್ನು ಹೊಂದಿರಬೇಕು

- ಕುಂಭ ಮೇಳಕ್ಕೆ ಸಂಬಂಧಿಸಿದ ಅಧಿಕೃತ ವೆಬ್ ಸೈಟ್ ಮೂಲಕ ಹೆಸರು ನೋಂದಾಯಿಸಿದ ಪ್ರವಾಸಿಗರು ಮತ್ತು ಭಕ್ತಾಧಿಗಳು ಅಗತ್ಯವಾದ ಈ-ಪಾಸ್, ಈ-ಪರ್ಮಿಟ್ ಜೊತೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ

- ಮುಖಕ್ಕೆ ಮಾಸ್ಕ್ ಮತ್ತು ಮುಖ ಕವಚ ಧರಿಸುವುದು ಕಡ್ಡಾಯ

- ಎಲ್ಲ ಪ್ರವಾಸಿಗರು ಉತ್ತರಾಖಂಡ್ ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಹೆಸರು ನೋಂದಾಯಿಸಬೇಕು

- 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು, ವೃದ್ಧರು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಗರ್ಭಿಣಿಯರು, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವವರು ಕುಂಭ ಮೇಳದಿಂದ ಅಂತರ ಕಾಯ್ದುಕೊಳ್ಳಬೇಕು

- ಪ್ರತಿಯೊಂದು ಹಂತದಲ್ಲಿ ಪ್ರತಿಯೊಬ್ಬ ಪ್ರವಾಸಿಗರ ನಡುವೆ 6 ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ

- ಪ್ರತಿಯೊಬ್ಬ ಪ್ರವಾಸಿಗರು ಮತ್ತು ಭಕ್ತಾಧಿಗಳು ಆರೋಗ್ಯ ಸೇತು ಅಪ್ಲಿಕೇಶನ್ ಹೊಂದಿರಬೇಕು

English summary
Kumbh Mela 2021: Important Dates, COVID-19 Guidelines And All You Need To Know In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X