ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಚೆನ್ನಾಗಿ ನೋಡಿಕೊಳ್ತಿದೆ ಎಂಬ ಜಾಧವ್ ರ ಮತ್ತೊಂದು ವಿಡಿಯೋ

|
Google Oneindia Kannada News

ನವದೆಹಲಿ, ಜನವರಿ 4: "ನಾನು ಇಲ್ಲಿ ಚೆನ್ನಾಗಿದ್ದೇನೆ, ಅವರು ನನಗೆ ತೊಂದರೆ ಮಾಡಿಲ್ಲ. ನನ್ನ ಆರೋಗ್ಯದ ಬಗ್ಗೆ ಅಮ್ಮನಿಗೆ ಸಮಾಧಾನವಿದೆ" ಎಂದು ಪಾಕ್ ನಲ್ಲಿ ಬಂದಿಯಾಗಿರುವ ಭಾರತೀಯ ನೌಕಾಸೇನೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಮಾತನಾಡಿರುವ ಹೊಸ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಭಾರತಕ್ಕೆ ಮುಜುಗರ ಆಗುವಂಥ ಪ್ರಯತ್ನಗಳನ್ನು ಪಾಕಿಸ್ತಾನ ಮಾಡುತ್ತಲೇ ಇರುತ್ತದೆ. ಇದೀಗ ಈ ಹೊಸ ವಿಡಿಯೋವೊಂದನ್ನು ಪಾಕ್ ಬಿಡುಗಡೆ ಮಾಡಿದೆ. ಅದರಲ್ಲಿ ಕುಲಭೂಷಣ್ ಜಾಧವ್ ಮಾತನಾಡಿದ್ದಾರೆ ಎಂಬುದು ಪಾಕಿಸ್ತಾನದ ವಾದ. ಈಚೆಗೆಷ್ಟೇ ಆತನ ತಾಯಿ ಹಾಗೂ ಪತ್ನಿ ಭೇಟಿ ಮಾಡಿದ್ದರು. ಅದಾಗಿ ಕೆಲ ದಿನಕ್ಕೆ ವಿಡಿಯೋ ಬಿಡುಗಡೆ ಮಾಡಿದೆ.

ಕುಲಭೂಷಣ್ ಜಾಧವ್ ರನ್ನು ಭೇಟಿ ಮಾಡಿದ ತಾಯಿ, ಪತ್ನಿಕುಲಭೂಷಣ್ ಜಾಧವ್ ರನ್ನು ಭೇಟಿ ಮಾಡಿದ ತಾಯಿ, ಪತ್ನಿ

ಈವರೆಗೆ ಜಾಧವ್ ರ ಕುಟುಂಬದಿಂದ ಯಾವ ಹೇಳಿಕೆ ಬಂದಿಲ್ಲ. ಇನ್ನು ವಿಡಿಯೋದ ಸಾಚಾತನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ನೌಕಾಸೇನೆ ಅಧಿಕಾರಿಯೊಬ್ಬರು ಮಾಧ್ಯಮದ ಜತೆ ಮಾತನಾಡಿ, ಕುಟುಂಬದವರು ಭೇಟಿ ಮಾಡಿದ ಸಂದರ್ಭದಲ್ಲಿ ಜಾಧವ್ ಗೆ ಗಾಯಗಳಾಗಿದ್ದು ಗೋಚರಿಸಿದ್ದವು. ಇದೀಗ ಪಾಕಿಸ್ತಾನವು ಜಾಧವ್ ಮೇಲೆ ಒತ್ತಡ ತಂದು ವಿಡಿಯೋ ಮಾಡಿದಂತಿದೆ. ಇದು ಆ ದೇಶದ ಹಳೆಯ ಆಟ ಎಂದು ಟೀಕಿಸಿದ್ದಾರೆ.

Kulbhushan Jadhav 'Thanks' Pakistan in New Video Released

ಜಾಧವ್ ರ ಮತ್ತೊಬ್ಬ ಸ್ನೇಹಿತ ಮಾತನಾಡಿ, ಪಾಕ್ ಬಿಡುಗಡೆ ಮಾಡಿದ ಕೊನೆ ವಿಡಿಯೋ ನೋಡಿ. ಅದರಲ್ಲಿ ಜಾಧವ್ ರೋಬೋಟ್ ನಂತಿದ್ದಾರೆ. ಯಾವುದೇ ಭಾವನೆಗಳನ್ನು ವ್ಯಕ್ತಪಡಿಸಿಲ್ಲ. ತಮಗೆ ಬೇಕಾದಂತೆ ಹೇಳಿಕೆ ಕೊಡಿಸಿದ್ದಾರೆ ಎಂಬುದನ್ನು ಇದಕ್ಕಿಂತ ಸ್ಪಷ್ಟವಾಗಿ ಹೇಳಬೇಕೆ? ಈಗಿನ ವಿಡಿಯೋ ಕೂಡ ಅದೇ ರೀತಿ ಇದೆ ಎಂದು ಆರೋಪಿಸಿದ್ದಾರೆ.

ಇದಕ್ಕೂ ಹಿಂದೆ ಹೇಳಿಕೆ ನೀಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಜಾಧವ್ ಅವರ ಮೇಲೆ ಬಹಳ ಒತ್ತಡ ಇರುವಂತೆ ಗೋಚರಿಸುತ್ತಿದ್ದು, ಬೆದರಿಕೆ ವಾತಾವರಣ ಕಂಡುಬರುತ್ತಿದೆ. ಆತನ ಹೇಳಿಕೆ ಹೇಳಿಕೊಟ್ಟು ಕಲಿಸಿದಂತಿದ್ದು, ಮಾಡದ ತಪ್ಪು ಆತನೇ ಮಾಡಿದಂತೆ ಬಿಂಬಿಸುವ ಪ್ರಯತ್ನದಂತಿದೆ. ಜಾಧವ್ ಕಾಣಿಸುತ್ತಿರುವ ರೀತಿಯಲ್ಲೇ ಆರೋಗ್ಯ ಹಾಗೂ ದೈಹಿಕ ಕ್ಷಮತೆ ಬಗ್ಗೆ ಹಲವು ಪ್ರಶ್ನೆಗಳು ಏಳುತ್ತದೆ ಎಂದಿತ್ತು.

ಇನ್ನೂ ಮುಂದುವರಿದು, ಜಾಧವ್ ತಾಯಿ ಹೇಳುವಂತೆ ಆತನ ವರ್ತನೆ ಹಾಗೂ ನಡವಳಿಕೆ ಭಿನ್ನವಾಗಿತ್ತು. ಆತ ತನ್ನಿಚ್ಛೆ ಪ್ರಕಾರ ಮಾತನಾಡುತ್ತಿರುಲಿಲ್ಲ. ಕೆನ್ನೆ ಒಳಗೆ ಹೋಗಿತ್ತು. ಆತನ ಮೇಲೆ ವಿಪರೀತ ಒತ್ತಡ ಇರುವಂತೆ ಕಂಡುಬರುತ್ತಿತ್ತು ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.

English summary
The Pakistan Foreign Office released a new video of Kulbhushan Jadhav on Thursday where he can be purportedly seen thanking the Pakistan government for allowing him to meet his mother and wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X