ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ 'ವಂಶವೃಕ್ಷ' ರಾಜಕಾರಣದ ಫುಲ್ ಲಿಸ್ಟ್ ಕೊಟ್ಟ ಕಾಂಗ್ರೆಸ್

|
Google Oneindia Kannada News

ಬೆಂಗಳೂರು, ಏಪ್ರಿಲ್ 8: ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಾಮಾಜಿಕ ತಾಣದಲ್ಲಿ ಸಮರ ಜೋರಾಗಿ ಸಾಗುತ್ತಿದೆ. ಉಪ ಚುನಾವಣೆ, ಸಿಡಿ ಪ್ರಕರಣ, ಸಾರಿಗೆ ನೌಕರರ ಮುಷ್ಕರ ಮುಂತಾದ ವಿಚಾರದಲ್ಲಿ ಸಾಗುತ್ತಿದ್ದ ಟ್ವೀಟ್ ವಾರ್ ಈಗ ಇನ್ನೊಂದು ವಿಷಯಕ್ಕೆ ತೆರಳಿದೆ.

ಕಾಂಗೆಸ್ಸಿನದ್ದು ವಂಶ ಪಾರಂಪರ್ಯ ರಾಜಕಾರಣ, ನೆಹರೂ ಕುಟುಂಬವೇ ಬಾಸ್ ಎಂದು ಕಾಲೆಳೆಯುತ್ತಿದ್ದ ಬಿಜೆಪಿಗೆ ಭರ್ಜರಿ ತಿರುಗೇಟು ನೀಡಿರುವ ಕಾಂಗ್ರೆಸ್, ಕಮಲ ಪಕ್ಷದಲ್ಲಿನ ಕುಟುಂಬ ರಾಜಕಾರಣದ ಫುಲ್ ಲಿಸ್ಟ್ ಅನ್ನು ಬಹಿರಂಗ ಪಡಿಸಿದೆ.

'ಉತ್ತರಾಧಿಕಾರಿ ಪರಂಪರೆ': ರವಿ ಹೇಳಿಕೆ ಹಿಂದಿನ ಟಾರ್ಗೆಟ್ ಬಿಎಸ್ವೈ?'ಉತ್ತರಾಧಿಕಾರಿ ಪರಂಪರೆ': ರವಿ ಹೇಳಿಕೆ ಹಿಂದಿನ ಟಾರ್ಗೆಟ್ ಬಿಎಸ್ವೈ?

ಕಾಂಗ್ರೆಸ್ಸಿನಲ್ಲಿ ನೆಹರೂ ಕುಟುಂಬ, ಜೆಡಿಎಸ್‌ನಲ್ಲಿ ಗೌಡ್ರ ಕುಟುಂಬ, ಡಿಎಂಕೆಯಲ್ಲಿ ಕರುಣಾನಿಧಿ ಕುಟುಂಬ ಮತ್ತು ಎನ್ಸಿಪಿಯಲ್ಲಿ ಶರದ್ ಪವಾರ್ ಕುಟುಂಬವೇ ಬಾಸ್. ನಮ್ಮದು ಏನಿದ್ದರೂ ಕೇಡರ್ ಬೇಸ್ ಪಕ್ಷ, ಕಾರ್ಯಕರ್ತರೇ ನಮಗೆ ಬಾಸ್ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದ್ದರು.

ಬಿಜೆಪಿಯಲ್ಲಿ ಅಡ್ವಾಣಿ, ಜೋಶಿಗೊಂದು ನ್ಯಾಯ, ಬೇರೆಯವರಿಗೆ ಇನ್ನೊಂದು ನ್ಯಾಯಬಿಜೆಪಿಯಲ್ಲಿ ಅಡ್ವಾಣಿ, ಜೋಶಿಗೊಂದು ನ್ಯಾಯ, ಬೇರೆಯವರಿಗೆ ಇನ್ನೊಂದು ನ್ಯಾಯ

ಇದಕ್ಕೆ, ರಾಜ್ಯ ಮತ್ತು ದೇಶದಲ್ಲಿ ಬಿಜೆಪಿಯ ಕುಟುಂಬ ರಾಜಕಾರಣದ ಬಗ್ಗೆ ಹೆಸರು, ಫೋಟೋ ಸಮೇತ ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದೆ. ಕಾಂಗ್ರೆಸ್ ಟ್ವೀಟ್ ಮಾಡಿರುವ ಪಟ್ಟಿಯಲ್ಲಿ ಬಿಎಸ್ವೈ, ಅಮಿತ್ ಶಾ ಕುಟುಂಬವೂ ಇದೆ.

 ವಂಶಪಾರಂಪರ್ಯ ಆಡಳಿತ ಬಿಜೆಪಿ ಡಿಎನ್ಎ ನಲ್ಲೇ ಇಲ್ಲ, ಸಿ.ಟಿ.ರವಿ

ವಂಶಪಾರಂಪರ್ಯ ಆಡಳಿತ ಬಿಜೆಪಿ ಡಿಎನ್ಎ ನಲ್ಲೇ ಇಲ್ಲ, ಸಿ.ಟಿ.ರವಿ

ವಂಶಪಾರಂಪರ್ಯ ಆಡಳಿತ ಬಿಜೆಪಿ ಡಿಎನ್ಎನಲ್ಲೇ ಇಲ್ಲ ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, "@BSYBJP ಅವರನ್ನು ಕುಗ್ಗಿಸಿ, @BYVijayendra ಅವರನ್ನು ಓಡಿಸುವ ಪ್ರಯತ್ನದಲ್ಲಿ ಸುಳ್ಳೇಕೆ ಹೇಳುತ್ತೀರಿ? ಮಂಗಳಾ ಅಂಗಡಿಯವರನ್ನ ಅಭ್ಯರ್ಥಿಯನ್ನಾಗಿಸಿ ನಮ್ಮಲ್ಲಿ ವಂಶಪಾರಂಪರ್ಯ ಇಲ್ಲವೆಂದು ಹಸಿ ಸುಳ್ಳು ಹೇಳಿದರೆ ನಂಬಲು ಜನ ಮೂರ್ಖರೇ?" ಎಂದು ಪ್ರಶ್ನಿಸಿದೆ.

ನಿಮ್ಮ ಪಕ್ಷದಲ್ಲಿ ವಿಶಾಲವಾಗಿ ಬೆಳೆದು ಹರಡಿಕೊಂಡಿರುವ "ವಂಶವೃಕ್ಷ"

ಮುಂದುವರಿಯುತ್ತಾ, "ವಂಶಪಾರಂಪರ್ಯ ನಮ್ಮ ಪಕ್ಷದ ಡಿಎನ್‌ಎನಲ್ಲೇ ಇಲ್ಲ ಎಂದು ಹಸಿ ಸುಳ್ಳು ಹೇಳಿದ @CTRavi_BJP ಅವರೇ ನಿಮ್ಮ ಪಕ್ಷದಲ್ಲಿ ವಿಶಾಲವಾಗಿ ಬೆಳೆದು ಹರಡಿಕೊಂಡಿರುವ "ವಂಶವೃಕ್ಷ"ವನ್ನು ಸ್ವಲ್ಪ ನೋಡಿಕೊಳ್ಳಿ. ಇವರೆಲ್ಲರ DNA ಬಗ್ಗೆ ನಿಮಗೆ ಅನುಮಾನವಿದೆಯೇ? ಇದ್ದರೆ ಒಮ್ಮೆ ನಿಮ್ಮವರ DNA ಪರೀಕ್ಷೆ ಅಭಿಯಾನ ಹಮ್ಮಿಕೊಳ್ಳಿ! ಇಲ್ಲವೇ ಸುಳ್ಳುಗಳನ್ನ ಬಿಡಿ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

 ಬಿಜೆಪಿ ವಂಶವೃಕ್ಷ ಪಟ್ಟಿ - ರಾಜ್ಯ

ಬಿಜೆಪಿ ವಂಶವೃಕ್ಷ ಪಟ್ಟಿ - ರಾಜ್ಯ

ಎರಡು ಸ್ಲೈಡಿನಲ್ಲಿ ಬಿಜೆಪಿ ವಂಶವೃಕ್ಷದ ಹೆಸರನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಅದರಲ್ಲಿ ಮೊದಲಿಗೆ, ಯಡಿಯೂರಪ್ಪ ಮತ್ತವರ ಕುಟುಂಬ, ಈಶ್ವರಪ್ಪ, ಸಿ.ಎಂ.ಉದಾಸಿ, ಶಶಿಕಲಾ ಜೊಲ್ಲೆ, ಉಮೇಶ್ ಕತ್ತಿ, ರವಿ ಸುಬ್ರಮಣ್ಯ ಮತ್ತು ತೇಜಸ್ವಿ ಸೂರ್ಯ ಮುಂತಾದವರ ಹೆಸರನ್ನು ಫೋಟೋ ಸಮೇತ ಹಾಕಿದೆ.

 ಬಿಜೆಪಿ ವಂಶವೃಕ್ಷ ಪಟ್ಟಿ - ದೇಶ

ಬಿಜೆಪಿ ವಂಶವೃಕ್ಷ ಪಟ್ಟಿ - ದೇಶ

ಇನ್ನೊಂದು ಸ್ಲೈಡಿನಲ್ಲಿ ಅಮಿತ್ ಶಾ ಮತ್ತವರ ಪುತ್ರ, ರಾಜನಾಥ್ ಸಿಂಗ್, ವಸುಂಧರಾ ರಾಜೆ, ಗೋಪಿನಾಥ ಮುಂಡೆ, ರಮಣ್ ಸಿಂಗ್, ದಿ.ಸುಷ್ಮಾ ಸ್ವರಾಜ್ ಕುಟುಂಬ, ಯಶವಂತ್ ಸಿನ್ಹಾ, ಕಲ್ಯಾಣ್ ಸಿಂಗ್, ಧರ್ಮೇಂದ್ರ ಪ್ರಧಾನ್ ಕುಟುಂಬ ಮುಂತಾದವರ ಹೆಸರನ್ನು ಕಾಂಗ್ರೆಸ್ ಟ್ವೀಟ್ ನಲ್ಲಿ ನಮೂದಿಸಿದೆ.

English summary
KPCC And BJP Karnataka Tweet War Continues, Congress Tweeted and shared List Of BJP Family Members In Politics. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X