ರೈಲ್ವೇ ಇಲಾಖೆಯಿಂದಲೇ ಹಾಲು ತರಿಸಿಕೊಂಡು ಕುಡಿದ ಕಂದಮ್ಮ!

Subscribe to Oneindia Kannada

ಬೆಂಗಳೂರು, ಮಾರ್ಚ್ 16: ಈ ಘಟನೆ ನಡೆದಿದ್ದು ಮಾರ್ಚ್ 12ರಂದು. ರೈಲ್ವೇ ಬೋಗಿಯಲ್ಲಿದ್ದ ಮಗುವೊಂದಕ್ಕೆ ತುರ್ತಾಗಿ ಹಾಲು ಬೇಕಾಗಿರುತ್ತದೆ. ತಕ್ಷಣ ಮಹಿಳೆಯೊಬ್ಬರು ಇದನ್ನು ಟ್ವೀಟ್ ಮೂಲಕ ಕೊಂಕಣ್ ರೈಲ್ವೇ ಗಮನಕ್ಕೆ ತರುತ್ತಾರೆ. ಕ್ಷಣಾರ್ಧದಲ್ಲಿ ರೈಲ್ವೇ ಇಲಾಖೆಯಿಂದ ಉತ್ತರ ಬರುತ್ತದೆ. ಅದಾಗಿ ಕೆಲವೇ ಸಮಯದಲ್ಲಿ ರೈಲು ನಿಂತು ಮಗುವಿಗೆ ಇಲಾಖೆಯ ಕಡೆಯಿಂದ ಹಾಲು ತಂದು ಕೊಡಲಾಗುತ್ತದೆ.

ಅಚ್ಚರಿಯಾಗಬೇಡಿ ಇಷ್ಟೆಲ್ಲಾ ನಡೆದಿದ್ದು ಭಾರತದಲ್ಲೇ. ಪುಟ್ಟ ಕಂದಮ್ಮನಿಗೆ ಹಾಲು ತಂದು ಕೊಟ್ಟಿದ್ದೂ ನಮ್ಮದೇ ರೈಲ್ವೇ ಇಲಾಖೆ. ಭಾರತದ ರೈಲ್ವೇ ಇಲಾಖೆ ಯಾವಾಗ ಇಷ್ಟೆಲ್ಲಾ ಮುಂದುವರಿದಿದ್ದು ಎಂದು ಕೇಳುವ ಮೊದಲು ಈ ಸ್ಟೋರಿ ಓದಿ.[ಇವಿಎಂ ತಿರುಚುವ 'ಆರೋಪ'ಕ್ಕೆ EC ಮಸಿ]

ಸಮಸ್ಯೆ ತಿಳಿಸಿದ ಪ್ರಯಾಣಿಕೆ

ಮಾರ್ಚ್ 12ರಂದು ಅನಘಾ ನಿಕಮ್ ಮೆಗ್ದಾಮ್ ಎನ್ನುವ ಪ್ರಯಾಣಿಕರೊಬ್ಬರು ಸಹ ಪ್ರಯಾಣಿಕರ ಮಗುವೊಂದಕ್ಕೆ ಹಾಲು ಬೇಕು ಎಂದು ಕೊಂಕಣ್ ರೈಲ್ವೇಯ ಟ್ವಿಟ್ಟರಿಗೆ ಟ್ವೀಟ್ ಕಳುಹಿಸುತ್ತಾರೆ. ಅವರ ಬೋಗಿಯಲ್ಲೇ ಇದ್ದ ಮಗುವೊಂದಕ್ಕೆ ತುರ್ತಾಗಿ ಹಾಲು ಬೇಕಾಗಿರುತ್ತದೆ. ಆದರೆ ಏನು ಮಾಡಬೇಕು? ಎಲ್ಲಿ ಹಾಲು ಸಿಗುತ್ತದೆ? ಎಂಬ ಮಾಹಿತಿ ಮಗುವಿನ ಪೋಷಕರಿಗೆ ತಿಳಿದಿರುವುದಿಲ್ಲ. ಪೋಷಕರು ಹಪ್ಪಾ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿರುವುದಾಗಿಯೂ ಅನಘಾ ಟ್ವಿಟ್ಟರಿನಲ್ಲೇ ಮಾಹಿತಿ ನೀಡುತ್ತಾರೆ.

ಪ್ರತಿಕ್ರಿಯೆ

ಅನಘಾ ಟ್ವೀಟ್ ಮಾಡುತ್ತಿದ್ದಂತೆ ಕೊಂಕಣ್ ರೈಲ್ವೇ ಕಡೆಯಿಂದ ಪ್ರತಿಕ್ರಿಯೆ ಬರುತ್ತದೆ. ನಿಮ್ಮ ಟಿಕೆಟಿನ ವಿವರಗಳನ್ನು ತಿಳಿಸಿ ಎಂದು ಅದರಲ್ಲಿ ಹೇಳಲಾಗಿರುತ್ತದೆ.[ಮುಸ್ಲಿಂ ಹಾಡುಗಾರ್ತಿಗೆ ಫತ್ವಾ ಹೊರಡಿಸಿಯೇ ಇರಲಿಲ್ಲ!]

ಟಿಕೆಟ್ ಶೇರ್

ತಕ್ಷಣ ಬೋಯಿಯಲ್ಲಿದ್ದ ಯುವತಿ ಪೋಷಕರ ಟಿಕೆಟ್ ಫೋಟೋ ತೆಗೆದು ಅದನ್ನು ಮತ್ತೆ ಕೊಂಕಣ್ ರೈಲ್ವೇಗೆ ಟ್ವೀಟ್ ಮಾಡುತ್ತಾರೆ.

ಹಾಲು ರೆಡಿ

ಇದಕ್ಕೆ ಉತ್ತರ ನೀಡಿದ ಕೊಂಕಣ್ ರೈಲ್ವೇ ಕಡೆಯಿಂದ ಕೊಲಾದ್ (ಮುಂದಿನ) ಸ್ಟೇಷನಿನಲ್ಲಿ ಹಾಲು ಸಿದ್ದವಾಗಿದೆ. ಬೋಗಿಯಿಂದ ಇಳಿದು ತೆಗೆದುಕೊಳ್ಳಿ ಎಂಬ ಪ್ರತಿಕ್ರಿಯೆ ಬರುತ್ತದೆ. ಅದರಂತೆ ಕೊಲಾದ್ ರೈಲ್ವೇ ನಿಲ್ದಾಣದಲ್ಲಿ ರೈಲು ನಿಲ್ಲುತ್ತದೆ. ಪೋಷಕರು ಇಳಿದು ಹಾಲು ತೆಗೆದುಕೊಳ್ಳುತ್ತಾರೆ. ಪುಟ್ಟ ಕಂದಮ್ಮ ಹಾಲು ಕುಡಿದು ಹಸಿವು ನೀಗಿಸಿಕೊಳ್ಳುತ್ತದೆ.

ಧನ್ಯವಾದಗಳು

ಆಪತ್ಬಾಂಧವನಂತೆ ಬಂದ ಕೊಂಕಣ್ ರೈಲ್ವೇಗೆ ನಂತರ ಮಹಿಳೆ ಧನ್ಯವಾದಗಳನ್ನು ತಿಳಿಸಿ ಟ್ವೀಟ್ ಮಾಡಿದರು. "ಕಾರ್ತಿಕಿ (ಮಗು) ತುಂಬಾ ಅದೃಷ್ಟವಂತೆ. ಆಕೆ ಹಪ್ಪಾ ಎಕ್ಸ್ ಪ್ರೆಸ್ ರೈಲಿನಲ್ಲೇ ಹಾಲು ಪಡೆದರು. ಕೊಂಕಣ್ ರೈಲ್ವೇಗೆ ಧನ್ಯವಾದಗಳು," ಎಂದು ಟ್ವೀಟ್ ಮಾಡಿದರು. ಹೀಗೆ ರೈಲ್ವೇ ಇಲಾಖೆ ಮಾನವೀಯತೆ ಮೆರೆದು ತನ್ನ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This was happened on march 12. In a very interesting case Konkan Railway arranged milk for a small baby, which is hungry in Express train after receiving a tweet from passenger.
Please Wait while comments are loading...