ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿ ಮರುದಿನ ದೇಶದಲ್ಲಿ ಅಪಘಾತಗಳದ್ದೇ ಸರಣಿ

|
Google Oneindia Kannada News

ತಿರುವನಂತಪುರ, ಏಪ್ರಿಲ್, 10: ಯುಗಾದಿ ಮರುದಿನ ದೇಶದಕ್ಕೆ ಕರಾಳ ದಿನ. ಬೆಳಗ್ಗೆ ಕೇರಳದಲ್ಲಿ ಪಟಾಕಿ ಅವಘಡ, ಸಂಸತ್ ಭವನದಲ್ಲಿ ಆಕಸ್ಮಿಕ ಬೆಂಕಿ, ಹೈದರಾಬಾದ್ ನಲ್ಲಿ ಕ್ರೇನ್ ಮುರಿದು ವಿಮಾನ ನೆಲಕ್ಕೆ, ಆಂಧ್ರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಏಳು ಜನ ಬಲಿ. ಉತ್ತರ ಭಾರತದಲ್ಲಿ ಭೂಕಂಪ .. ಸರಣಿ ಸದ್ಯಕ್ಕೆ ಇಲ್ಲಿಗೆ ನಿಂತಿದೆ.

ಕೇರಳದ ಪಟಾಕಿ ಅವಘಡದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ರಧಾನಿ ಸಾಂತ್ವನ ಹೇಳಿದ್ದಾರೆ.[ಪಟಾಕಿ ದುರಂತ: ದೇವರ ನಾಡು ಕೇರಳದ ಮೇಲೆ ಮೂಕಾಂಬಿಕೆಯ ಮುನಿಸು!]

modi

ಕೇರಳ ಸರ್ಕಾರ, ಸೈನ್ಯ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆಯುವ ಯತ್ನ ಮಾಡಲಾಗುತ್ತಿದೆ.[ಕೇರಳ ಪಟಾಕಿ ಅವಘಡದ ಕರಾಳ ಚಿತ್ರಗಳು]

ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಕೇರಳ ಸರ್ಕಾರ ಭರಿಸುತ್ತೇನೆ ಎಂದು ಹೇಳಿದೆ. ಸಾವಿಗೀಡಾದವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ , ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ವಾಯುಸೇನೆಯ ವಿಶೇಷ ವಿಮಾನದ ಮೂಲಕ ತೆರಳಿದ ಪ್ರಧಾನಿ ತಜ್ಞ ವೈದ್ಯರ ತಂಡವನ್ನು ತಮ್ಮ ಜತೆಗೆ ಕರೆದುಕೊಂಡು ಹೋಗಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಸಹ ನೆರವು ಘೋಷಣೆ ಮಾಡಿದ್ದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ತಂಡವನ್ನು ಕಳಿಸಿಕೊಟ್ಟಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.

English summary
An illegal fireworks show in a Hindu temple in Kerala early on Sunday set off a huge fire which left around 110 people dead and over 380 injured, many critically. Hours later, Prime Minister Narendra Modi flew to Kollam district to express grief over the horrific tragedy. Officials said he was accompanied by 15 medical professionals. The gruesome incident occurred around 3:30 am on Sunday, April 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X