ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಮಹಾಶ್ವೇತಾ ದೇವಿ ಇನ್ನಿಲ್ಲ

By Mahesh
|
Google Oneindia Kannada News

ಕೋಲ್ಕತ್ತಾ, ಜುಲೈ 28: ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಸಾಮಾಜಿಕ ಕಾರ್ಯಕರ್ತೆ ಮಹಾಶ್ವೇತಾ ದೇವಿ ಅವರು ಗುರುವಾರ ನಿಧನರಾಗಿದ್ದಾರೆ. 90

ವರ್ಷ ವಯಸ್ಸಿನ ಹಿರಿಯ ಸಾಧಕಿಗೆ ಜುಲೈ 23ರಂದು ಹೃದಯಾಘಾತವಾಗಿತ್ತು. ಕೋಲ್ಕತ್ತಾದ ಬೆಲ್ಲೆ ವ್ಯೂ ಕ್ಲಿನಿಕ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಿಡ್ನಿ ವೈಫಲ್ಯದಿಂದ ಬಳಲಿದ ನಂತರ ಚೇತರಿಕೆ ಕಾಣದೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Kolkata: Eminent writer Mahasweta Devi passes away

ಮಹಾಶ್ವೇತಾ ದೇವಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಅಲ್ಲದೆ ಮ್ಯಾಗ್ಸೆಸ್ಸೆ, ಸಾಹಿತ್ಯ ಅಕಾಡೆಮಿ, ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ದೇವಿ ಅವರಿಗೆ ಲಭಿಸಿತ್ತು.

ಹಜಾರ್ ಚೌರಾಶಿರ್ ಮಾ, ಬ್ರೆಸ್ಟ್ ಸ್ಟೋರಿಸ್, ಟಿನ್ ಕೊರಿರ್ ಸಾಧ್ ಸೇರಿದಂತೆ ಅನೇಕ ಕೃತಿಗಳು ಜನಪ್ರಿಯತೆ ಗಳಿಸಿದ್ದಲ್ಲದೆ, ಸಿನಿಮಾಗಳಿಗೂ ಕಥೆ ಒದಗಿಸಿತ್ತು. ಬುಡಕಟ್ಟು ಜನಾಂಗದ ಏಳಿಗೆಗಾಗಿ ಕೂಡಾ ಮಹಾಶ್ವೇತಾ ದೇವಿ ಶ್ರಮಿಸಿದ್ದರು.

ಮಹಾಶ್ವೇತಾ ದೇವಿ ಅವರ ನಿಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

English summary
Kolkata: Ramon Magsaysay, Jnanpith award winner, social activist Mahasweta Devi passed away at Bellevue city nursing home on Thursday, following prolonged illness due to old age. She was 90.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X