ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬಾರಿ ವಜ್ರ 'ಕೊಹಿನೂರು' ಏನಿದರ ತಕರಾರು

By Mahesh
|
Google Oneindia Kannada News

ನವದೆಹಲಿ, ಏಪ್ರಿಲ್ 20: ಇಂಗ್ಲೆಂಡ್ ಕೈ ಸೇರಿರುವ ಕೊಹಿನೂರು ವಜ್ರ ಭಾರತಕ್ಕೆ ವಾಪಸ್ ಬರುವುದೋ ಇಲ್ಲವೋ ಕಾಲವೇ ಉತ್ತರಿಸಬೇಕು. ಸದ್ಯಕ್ಕೆ ಕೊಹಿನೂರು ವಜ್ರ ಕುರಿತಂತೆ ಇರುವ ವಿವಾದದ ಬಗ್ಗೆ ವಿವರಣೆ ಇಲ್ಲಿದೆ...

ಮಹಾರಾಜ ರಣಜಿತ್ ಸಿಂಗ್ ರಿಂದ ಈಸ್ಟ್ ಇಂಡಿಯಾ ಕಂಪನಿಗೆ ಬಳುವಳಿಯಾಗಿ ಸಿಕ್ಕ ಕೊಹಿನೂರ್ ವಜ್ರ ಬ್ರಿಟಿಷರ ರಾಣಿಯ ಕಿರೀಟವನ್ನೇರಿತು. [ಕೊಹಿನೂರು ವಜ್ರ ಮೋದಿ ಕೈಗೆ ಕೊಟ್ಟು ಬಿಡಿ: ಯುಕೆ ಸಂಸದ]

* ಮಧ್ಯಯುಗದ ಕಾಲದಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರು ಗಣಿಯಲ್ಲಿ ದೊರೆತಿದ್ದ ಕೊಹಿನೂರ್ ವಜ್ರವು ಜಗತ್ತಿನ ಅತಿ ದೊಡ್ಡ ವಜ್ರ ಎಂದು ಪರಿಗಣಿಸಲಾಗಿದೆ.
* ಕಾಕಾತೀಯ ಅರಸರ ಆರಾಧ್ಯ ದೇವತೆಯ ಕಣ್ಣಿನಂತೆ ಈ ಕೊಹಿನೂರು ವಜ್ರವನ್ನು ಭಕ್ತದಿಂದ ಕಾಣಲಾಗುತ್ತಿತ್ತು.
* ಸಿಖ್ ದೊರೆ ಮಹಾರಾಜ ರಣಜಿತ್ ಸಿಂಗ್ ಪಾಲಾದ ಈ ವಜ್ರ ನಂತರ ಬ್ರಿಟಿಷರ ಕೈಸೇರಿತು. ಸದ್ಯ ಅದು ರಾಣಿ ಎರಡನೇ ಎಲಿಝಬೆತ್ ಕಿರೀಟದಲ್ಲಿದೆ. [ಭಾರತ-ಪಾಕ್ ಮಧ್ಯೆ ಗಡಿ ರೇಖೆ ಎಳೆದವರು ಯಾರು?]
* ಸುಮಾರು 150 ವರ್ಷಗಳ ಕಾಲ ಈ ವಜ್ರವನ್ನು ತಮ್ಮ ಸುಪರ್ದಿಯಲ್ಲಿ ಬ್ರಿಟಿಷರು ಕಾಯ್ದುಕೊಂಡು ಬಂದಿದ್ದಾರೆ.
* 105 ಕ್ಯಾರೆಟ್ ತೂಗುವ ಈ ದುಬಾರಿ ಕಲ್ಲು (ವಜ್ರ) ಅರಸ ಕೈ ಸೇರುವುದಕ್ಕೂ 800 ವರ್ಷ ಗಳ ಮುಂಚೆ ದೊರೆತಿದ್ದು ಎನ್ನಲಾಗಿದೆ.
* ಟವರ್ ಆಫ್ ಲಂಡನ್ ನಲ್ಲಿ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿರುವ ಈ ವಜ್ರದ ಬೆಲೆ ಸುಮಾರು 100 ಮಿಲಿಯನ್ ಯುರೋಸ್ ಎಂದು ಅಂದಾಜಿಸಲಾಗಿದೆ.

Kohinoor: All you need to know about the legendary diamond

* ಬ್ರಿಟಿಷರು ವಜ್ರವನ್ನು ತೆಗೆದುಕೊಂಡು ಹೋದ ಮೇಲೆ ಮತ್ತೆ ಹಿಂತಿರುಗಿಸುವ ಪ್ರಯತ್ನ ಎಂದಿಗೂ ಮಾಡಿಲ್ಲ.
* 1947ರಿಂದಲೂ ವಜ್ರ ವಾಪಸ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.
* ಕೊಹಿನೂರ್ (Koh-i-noor) ವಜ್ರ ನಮಗೆ ಸೇರಿದ್ದು ಎಂದು ಭಾರತವಷ್ಟೆ ಅಲ್ಲದೆ, ಪಾಕಿಸ್ತಾನ, ತಾಲಿಬಾನ್ ಆಕ್ರಮಿತ ಅಫ್ಘಾನಿಸ್ತಾನ, ಇರಾನ್ ಕೂಡಾ ಇದು ನಮ್ಮ ಆಸ್ತಿ ಎಂದು ವಾದ ಮಾಡುತ್ತಿವೆ.
* ಬ್ರಿಟನ್ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಹಿನೂರು ವಜ್ರ ಮೋದಿ ಕೈಗೆ ಕೊಟ್ಟು ಬಿಡಿ: ಯುಕೆ ಸಂಸದ ಕೀತ್ ವಾಜ್ ಆಗ್ರಹಿಸಿದ್ದು ಭಾರಿ ಸುದ್ದಿಯಾಗಿತ್ತು.
* ಇದಾದ ಬಳಿಕ ಇತ್ತೀಚೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಭಾರತದ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಆದೇಶಿಸಿತ್ತು.
* ಮೊದಲಿಗೆ ಇದು ಭಾರತದಿಂದ ಕದ್ದ ಮಾಲಲ್ಲ, ಬ್ರಿಟಿಷರಿಗೆ ಬಳುವಳಿಯಾಗಿ ನೀಡಿದ್ದು ಎಂದು ಸರ್ಕಾರ ಹೇಳಿತ್ತು. ಈಗ ಕೊಹಿನೂರು ವಜ್ರವನ್ನು ಭಾರತಕ್ಕೆ ವಾಪಸ್ ತರುವ ಬಗ್ಗೆ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಹೇಳಿದೆ.
* ಆದರೆ, 1972ರ Antiquities and Art Treasure Act ಗೆ ತಿದ್ದುಪಡಿಯಾಗದ ಕಾರಣ ಭಾರತೀಯ ಸರ್ವೇಕ್ಷಣ ಇಲಾಖೆ(ಎಎಸ್ ಐ) ಯಾವುದೇ ನಿಯಮ ಅನುಸರಿಸಿದರೂ ಸದ್ಯಕ್ಕಂತೂ ಕೊಹಿನೂರು ವಜ್ರವನ್ನು ವಾಪಸ್ ತರುವುದು ಕಷ್ಟಸಾಧ್ಯ. ಒಂದು ವೇಳೆ ಕೊಹಿನೂರು ವಜ್ರ ಕದ್ದ ಮಾಲು ಎಂದು ಸಾಬೀತಾದರೆ ಸುಲಭವಾಗಿ ಭಾರತದ ಪಾಲಾಗಲಿದೆ.
English summary
Kohinoor is one of the most valuable diamonds in the world. There are many countries that have tried to claim the Kohinoor, including Pakistan, the Taliban regime in Afghanistan.Here are some important facts you need to know about it
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X