ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹಕ್ಕೆ ನಲುಗಿದ್ದ ಕೊಚ್ಚಿ ವಿಮಾನ ನಿಲ್ದಾಣ ಪುನಾರಂಭ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 29: ಭೀಕರ ಮಳೆ ಹಾಗೂ ಪ್ರವಾಹದಿಂದ ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಇಂದು(ಆಗಸ್ಟ್ 29) ಆರಂಭಗೊಳ್ಳಲಿದೆ.

ಖಾಸಗಿ ವಿಮಾನಯಾನ ಸಂಸ್ಥೆಗಳಾದ ಜೆಟ್ ಏರ್‌ವೇಸ್ ಮತ್ತು ಇಂಡಿಗೋ ಕಾರ್ಯಾಚರಣೆಯನ್ನು ಆರಂಭಿಸಲು ನಿರ್ದರಿಸಿವೆ. ಆಗಸ್ಟ್ 14ರಿಂದ ಆಗಸ್ಟ್ 28ರವರೆಗೆ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರವನ್ನು ರದ್ದುಪಡಿಸಲಾಗಿತ್ತು.

ಕೇರಳ ಪ್ರವಾಹ: ಆಗಸ್ಟ್ 26ರವರೆಗೆ ಕೊಚ್ಚಿ ಏರ್‌ಪೋರ್ಟ್‌ ಬಂದ್‌ಕೇರಳ ಪ್ರವಾಹ: ಆಗಸ್ಟ್ 26ರವರೆಗೆ ಕೊಚ್ಚಿ ಏರ್‌ಪೋರ್ಟ್‌ ಬಂದ್‌

ದೇಶದ ಏಳನೇ ಅತಿ ಜನನಿಬಿಡ ನಿಲ್ದಾಣಗಳಲ್ಲಿ ಒಂದಾಗಿರುವ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಗಸ್ಟ್ 8ರಿಂದ ಆಗಸ್ಟ್ 22ವರೆಗೆ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿತ್ತು ಜತೆಗೆ ಮಾರ್ಗವನ್ನು ಬದಲಾಯಿಸಲಾಗಿತ್ತು.

kochi airport resumes service after 15 days

ಇದೀಗ ಪ್ರವಾಹ ಪರಿಹಾರ ಕಾರ್ಯ ಬಹುತೇಕ ಪೂರ್ಣಗೊಳ್ಳುತ್ತಿರುವುದರಿಂದ ವಿಮಾನ ಸಂಚಾರವನ್ನು ಆರಂಭಿಸಲಾಗುತ್ತಿದೆ.ಈ ಮೊದಲು ವಿಮಾನಯಾನ ಪ್ರಾಧಿಕಾರ ಆಗಸ್ಟ್ 18ರವರೆಗೆ ವಿಮಾನ ಸಂಚಾರವನ್ನು ರದ್ದುಗೊಳಿಸಿತ್ತು.

ಅದಾದ ಬಳಿಕ ಆಗಸ್ಟ್ 26ರವರೆಗೆ ವಿಮಾನ ಸಂಚಾರದ ಸ್ಥಗಿತತೆಯನ್ನು ಮುಂದುವರೆಸಿದ್ದರೂ ಪರಿಸ್ಥಿತಿ ಸುಧಾರಿಸದ ಕಾರಣ ಆಗಸ್ಟ್ 29ರವರೆಗೆ ಮತ್ತೆ ವಿಮಾನ ರದ್ದತೆಯನ್ನು ಮುಂದುವರೆಸಲಾಗಿತ್ತು. ಇದೀಗ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಯಥಾಸ್ಥಿತಿಗೆ ಮರಳಿದ್ದರಿಂದ ವಿಮಾನ ಸಂಚಾರವನ್ನು ಆರಂಭಿಸಲಾಗುತ್ತಿದ್ದು ಪೋಲಾರ್ ಫಾರ್ಮ್ ಮುಖಾಂತರ ರನ್ ವೇ ಹಾಗೂ ಟರ್ಮಿನಲ್ ಗಳನ್ನು ಯತಾಸ್ಥಿತಿಗೆ ತರಲಾಗುತ್ತಿದೆ.

ಕೇರಳ ಪ್ರವಾಹ: 6 ಸಾವಿರ ರೈಲ್ವೆ ಟಿಕೆಟ್‌ ಕ್ಯಾನ್ಸಲ್‌ಕೇರಳ ಪ್ರವಾಹ: 6 ಸಾವಿರ ರೈಲ್ವೆ ಟಿಕೆಟ್‌ ಕ್ಯಾನ್ಸಲ್‌

ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ನಾಗರಿಕ ವಿಮಾನ ಯಾನ ಮಹಾನಿರ್ದೇಶಕರು, ಕೊಚ್ಚಿ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರವನ್ನು ಆರಂಭಿಸುವಂತೆ ವಿಮಾನ ಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದು, ತಿರುವನಂತಪುರಂ, ಕೋಯಿಕ್ಕೊಡ್ ಹಾಗೂ ಕೊಯಿಮತ್ತೂರ್ ವಿಮಾನ ನಿಲ್ದಾಣಗಳಿಗೆ ಮಾರ್ಗ ಬದಲಿಸಲಾಗಿದ್ದ ವಿಮಾನಗಳು ಇದೀಗ ಎಂದಿನಂತೆ ಹಾರಾಟ ಆರಂಭಿಸಲಿದೆ.

ಈ ಕುರಿತು ಜೆಟ್ ಏರ್ ವೇಸ್ ಸಂಸ್ಥೆ ಪ್ರಕಟಣೆಯೊಂದನ್ನು ನೀಡಿ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಗಸ್ಟ್ 29ರಂದು ವಿಮಾನ ಸಂಚಾರ ಆರಂಭಗೊಳ್ಳಲಿದೆ ಮೊದಲ ವಿಮಾನ ಮಧ್ಯಾಹ್ನ 2ಗಂಟೆಗೆ ಮೊದಲ ವಿಮಾನ ಹಾರಾಟ ಆರಂಭಿಸಲಿದೆ ಎಂದು ತಿಳಿಸಿದೆ.

ಈ ಮಧ್ಯೆ ಜೆಟ್ ಏರ್ ವೇಸ್ ಸಂಸ್ಥೆ ಪ್ರವಾಹ ಪೀಡಿತ ಕೇರಳ ರಾಜ್ಯಕ್ಕೆ ಸರಕು ಸಾಗಾಟ ಸೇವೆಯನ್ನು ಆರಂಬಿಸಿದ್ದು ಕೇರಳಕ್ಕೆ ಬೇಕಾದ ಪರಿಹಾರ ಸಂತ್ರಸ್ತರ ವಸ್ತುಗಳನ್ನು ಒಳಗೊಂಡ 17ಟನ್ ಗಳ ಪರಿಹಾರ ಸಾಮಗ್ರಿಗಳನ್ನು ಕೂಡ ವಿಮಾನದ ಮೂಲಕ ಸಾಗಾಟ ಮಾಡಲು ಮುಂದಾಗಿದೆ.

English summary
Flood hit Kerala awakening slowly and steadily as kochi International Airport gas resuming its service from Wednesday after 15 days of closure due to heavy rain and flood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X