ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ನಾಗರಿಕರಿಗೆ ಟೂರಿಸ್ಟ್ ವೀಸಾ ನಿರಾಕರಿಸಿದ ಭಾರತ- ಕಾರಣವೇನು?

|
Google Oneindia Kannada News

ನವದೆಹಲಿ, ಏ. 25: ಚೀನಿ ನಾಗರಿಕರಿಗೆ ನೀಡಲಾಗಿದ್ದ ಪ್ರವಾಸಿ ವೀಸಾವನ್ನು ಭಾರತ ರದ್ದು ಮಾಡಿದೆ ಎಂದು ಜಾಗತಿಕ ವಿಮಾನ ಸಂಘಟನೆ ಐಎಟಿಎ ಹೇಳಿದೆ. ಏಪ್ರಿಲ್ 20ರಂದು ಐಎಟಿಎ (International Air Transport Association) ಈ ವಿಚಾರವನ್ನು ತನ್ನ ವ್ಯಾಪ್ತಿಯ ಎಲ್ಲಾ ಏರ್‌ಲೈನ್ ಸಂಸ್ಥೆಗಳಿಗೂ ತಿಳಿಸಿದೆ. "ಚೀನಾದ ನಾಗರಿಕರಿಗೆ ನೀಡಲಾಗಿದ್ದ ಟೂರಿಸ್ಟ್ ವೀಸಾ ಇನ್ಮುಂದೆ ಸಿಂಧುವಾಗಿರುವುದಿಲ್ಲ" ಎಂದು ಐಎಟಿಎ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಭೂತಾನ್, ಭಾರತ, ಮಾಲ್ಡೀವ್ಸ್ ಮತ್ತು ನೇಪಾಳ ದೇಶದ ನಾಗರಿಕರು ಭಾರತ ಪ್ರವೇಶಿಸಲು ಅನುಮತಿ ಇದೆ. ಹಾಗೆಯೇ, ಭಾರತದಿಂದ ವಸತಿ ಅನುಮತಿ ಪಡೆದವರು; ಭಾರತದಿಂದ ವೀಸಾ ಅಥವಾ ಇ-ವೀಸಾ ಪಡೆದವರು, ಓಸಿಐ ಕಾರ್ಡ್ (Overseas Citizen of India Card) ಪಡೆದಿರುವವರು, ಪಿಐಒ (Person of Indian Origin) ಕಾರ್ಡ್ ಪಡೆದ ವ್ಯಕ್ತಿಗಳ ಜೊತೆಗೆ ಬರುವವರು ಮತ್ತು ಡಿಪ್ಲೊಮಾಟಿಕ್ ಪಾಸ್‌ಪೋರ್ಡ್ ಹೊಂದಿರುವವರು ಭಾರತಕ್ಕೆ ಬರಲು ಅನುಮತಿ ಇದೆ ಎಂದು ಎಐಟಿಎ ನೀಡಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.

Breaking; ಕೋವಿಡ್; ಲಾಕ್‌ಡೌನ್‌ ನಿಯಮ ಕಠಿಣಗೊಳಿಸಿದ ಶಾಂಘೈ Breaking; ಕೋವಿಡ್; ಲಾಕ್‌ಡೌನ್‌ ನಿಯಮ ಕಠಿಣಗೊಳಿಸಿದ ಶಾಂಘೈ

ಚೀನೀಯರಿಗೆ ಯಾಕೆ ನಿರ್ಬಂಧ?
ಚೀನೀಯರ ಟೂರಿಸ್ಟ್ ವೀಸಾವನ್ನು ಭಾರತ ರದ್ದು ಮಾಡಲು ಕಾರಣ ಇದೆ. ಇದು ಏಟಿಗೆ ಎದಿರೇಟಿನ ಕ್ರಮ. ಚೀನಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಚೀನಾ ಪ್ರವೇಶ ನಿರ್ಬಂಧಿಸಿದೆ. ಈ ನಿರ್ಬಂಧವನ್ನು ತೆರವುಗೊಳಿಸಬೇಕೆಂದು ಭಾರತ ಪದೇ ಪದೇ ಮಾಡಿಕೊಂಡ ಮನವಿಗೆ ಚೀನಾ ಕಿವಿಗೊಡುತ್ತಿಲ್ಲ. ಹೀಗಾಗಿ, ಭಾರತ ಚೀನೀ ನಾಗರಿಕರ ಟೂರಿಸ್ಟ್ ವೀಸಾ ರದ್ದು ಮಾಡುವ ನಿರ್ಧಾರಕ್ಕೆ ಬಂದಿದೆ.

India suspends Tourist visa for Chinese, Know Why

ಚೀನಾದ ವಿವಿಗಳಲ್ಲಿ ಸುಮಾರು 22 ಸಾವಿರದಷ್ಟು ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಚೀನಾದಲ್ಲಿ ಈಗ ಬಿಗಿ ಕೋವಿಡ್ ನಿಯಮಗಳಿರುವುದರಿಂದ ವಿದೇಶಗಳಿಂದ ಬರುವವರನ್ನು ಅಷ್ಟು ಸುಲಭಕ್ಕೆ ಒಳಗೆ ಬಿಡುತ್ತಿಲ್ಲ. ಚೀನಾದ ವಿವಿಗಳಲ್ಲಿ ಭೌತಿಕ ತರಗತಿ ಶುರುವಾಗಿರುವುದರಿಂದ ಭಾರತೀಯ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ.

India suspends Tourist visa for Chinese, Know Why

ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗುವುದನ್ನು ತಪ್ಪಿಸಲು ಚೀನಾ ಪರಿಹಾರಾತ್ಮಕ ನಿರ್ಧಾರ ತಳೆಯುವಂತೆ ಭಾರತ ಒತ್ತಾಯ ಮಾಡುತ್ತದೆ ಎಂದು ಮಾರ್ಚ್ 17ರಂದೇ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದರು. ಅದಕ್ಕೂ ಬಹಳ ಹಿಂದಿನಿಂದಲೇ ಈ ವಿಚಾರದಲ್ಲಿ ಚೀನಾಗೆ ಭಾರತ ಪದೇ ಪದೇ ಮನವಿ ಮಾಡಿತ್ತು. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವ್ಯಾಂಗ್ ಯಿ ಅವರನ್ನ ತಜಿಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ಭೇಟಿ ಮಾಡಿದಾಗ ಈ ವಿಚಾರದ ಬಗ್ಗೆ ಮಾತನಾಡಿದ್ದರು. ಆ ನಂತರ, ಈ ಬಗ್ಗೆ ಸಕಾರಾತ್ಮಕವಾಗಿ ಪರಿಶೀಲನೆ ನಡೆಸುತ್ತಿರುವುದಾಗಿ ಚೀನಾದ ವಿದೇಶಾಂಗ ಇಲಾಖೆ ವಕ್ತಾರರು ಫೆಬ್ರವರಿ ೮ರಂದು ಹೇಳಿಕೆ ಕೊಟ್ಟಿದ್ದರು. ಆದರೆ, ನಿರ್ಧಾರ ಮಾತ್ರ ಬಂದಿರಲಿಲ್ಲ.

ರಷ್ಯಾದ Su-35S ಮತ್ತು ಫ್ರಾನ್ಸ್‌ನ ರಫೇಲ್ ಪೈಕಿ ಯಾವುದು ಬೆಟರ್? ರಷ್ಯಾದ Su-35S ಮತ್ತು ಫ್ರಾನ್ಸ್‌ನ ರಫೇಲ್ ಪೈಕಿ ಯಾವುದು ಬೆಟರ್?

"ಇವತ್ತಿನವರೆಗೆ ಚೀನಾದ ಅಧಿಕಾರಿಗಳು ಭಾರತೀಯ ವಿದ್ಯಾರ್ಥಿಗಳ ಮರಳುವಿಕೆಗೆ ಏನೂ ಕ್ರಮ ಕೈಗೊಂಡಿಲ್ಲ. ನಮ್ಮ ವಿದ್ಯಾರ್ಥಿಗಳ ಹಿತಾಸಕ್ತಿ ದೃಷ್ಟಿಯಿಂದ ನಿಲುವು ತೆಗೆದುಕೊಳ್ಳಬೇಕು. ಇವರು ಚೀನಾದಲ್ಲಿ ತರಗತಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ ಮಾಡಬೇಕು ಎಂದು ಚೀನಾಗೆ ನಾವು ಒತ್ತಾಯ ಮಾಡುವುದನ್ನು ಮುಂದುವರಿಸುತ್ತೇವೆ" ಎಂದು ಮಾರ್ಚ್ 17ರಂದು ಬಾಗ್ಚಿ ಹೇಳಿದ್ದರು.

ಆದರೆ, ಇನ್ನೂವರೆಗೆ ಚೀನಾ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಭೌತಿಕ ತರಗತಿ ಶುರುವಾದರೂ ಚೀನಾಗೆ ಹೋಗಲು ಸಾಧ್ಯವಾಗದೇ ಭಾರತೀಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಕಷ್ಟಕ್ಕೆ ಸಿಲುಕಿದ್ದಾರೆ. ಈಗ ಭಾರತ ಚೀನೀ ನಾಗರಿಕರ ಟೂರಿಸ್ಟ್ ವೀಸಾ ರದ್ದು ಮಾಡಿ ಏಟಿಗೆ ತಿರುಗೇಟು ಕೊಟ್ಟಿರುವುದರಿಂದ ಚೀನಾ ಎಚ್ಚೆತ್ತುಕೊಂಡು ಭಾರತೀಯ ವಿದ್ಯಾರ್ಥಿಗಳಿಗೆ ಬರಲು ಅನುಮತಿ ನೀಡುತ್ತದಾ ಕಾದುನೋಡಬೇಕು.

English summary
India has suspended its tourist visas issued to Chinese nationals, said International air transport body in its circular issued last week. India's measure is considered as tit-for-tat against China for not allowing Indian students to enter China for studies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X