ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಾರತದಲ್ಲಿ ಕಾರು ತಯಾರಿಸಲ್ಲ'- ಎಲಾನ್ ಮಸ್ಕ್ ನಿಷ್ಠುರವಾಗಿ ಹೇಳಿದ್ದು ಯಾಕೆ?

|
Google Oneindia Kannada News

ನವದೆಹಲಿ, ಮೇ 28: ವಿಶ್ವದ ಉದ್ಯಮ ಸಾಹಸಿ ಹಾಗೂ ಅತಿಶ್ರೀಮಂತ ವ್ಯಕ್ತಿ ಎನಿಸಿರುವ ಎಲಾನ್ ಮಸ್ಕ್ ಭಾರತದಲ್ಲಿ ಟೆಸ್ಲಾ ಕಾರುಗಳನ್ನು ತಯಾರಿಸುವುದಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ತನ್ನ ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ಸರ್ವಿಸ್‌ಗೆ ಅವಕಾಶ ನೀಡುವವರೆಗೂ ಭಾರತದಲ್ಲಿ ಕಾರುಗಳ ತಯಾರಿಕೆ ಸಾಧ್ಯ ಇಲ್ಲ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಆಮದು ಕಾರುಗಳಿಗೆ ದುಬಾರಿ ಸುಂಕ ವಿಧಿಸಲಾಗುತ್ತದೆ. ಟೆಸ್ಲಾ ಕಾರುಗಳಿಗೂ ಅದೇ ಮಾದರಿಯಲ್ಲಿ ದುಬಾರಿ ತೆರಿಗೆ ಹಾಕಲಾಗುತ್ತಿದೆ. ಈ ತೆರಿಗೆಯಿಂದ ವಿನಾಯಿತಿ ನೀಡಬೇಕೆಂದು ಇಲಾನ್ ಮಸ್ಕ್ ಕೆಲ ಬಾರಿ ಮನವಿ ಮಾಡಿದ್ದರು. ಆದರೆ, ಭಾರತ ಸರಕಾರ ಇದಕ್ಕೆ ಒಪ್ಪಿಲ್ಲ. ಭಾರತದಲ್ಲಿ ನೀವು ವಾಹನ ತಯಾರಿಸಿದರೆ ತೆರಿಗೆ ರಹಿತವಾಗಿ ಮಾರಾಟ ಮಾಡಬಹುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.

ರಷ್ಯಾದಲ್ಲಿ ಸಿಲುಕಿಕೊಂಡಿದೆ ಭಾರತೀಯ ತೈಲ ಕಂಪನಿಗಳ ಕೋಟಿ ಕೋಟಿ ಹಣರಷ್ಯಾದಲ್ಲಿ ಸಿಲುಕಿಕೊಂಡಿದೆ ಭಾರತೀಯ ತೈಲ ಕಂಪನಿಗಳ ಕೋಟಿ ಕೋಟಿ ಹಣ

"ಚೀನಾದಲ್ಲಿ ತಯಾರಿಸಿದ ಟೆಸ್ಲಾ ಕಾರುಗಳನ್ನು ಮಸ್ಕ್ ಅವರು ಭಾರತದಲ್ಲಿ ಮಾರಲು ಬಂದರೆ ಅದು ಭಾರತಕ್ಕೆ ಸರಿಹೋಗುವುದಿಲ್ಲ" ಎಂದು ಗಡ್ಕರಿ ಕಡ್ಡಿತುಂಡು ಮಾಡಿದಂತೆ ಸ್ಪಷ್ಟವಾಗಿ ತಿಳಿಸಿದ್ದರು.

Know Why Elon Musk Said No To Manufacture Tesla Cars In India

ಈ ವಿಚಾರದ ಬಗ್ಗೆ ಟ್ವೀಟಿಗರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಎಲಾನ್ ಮಸ್ಕ್ ತಮ್ಮ ಕಾರುಗಳ ಮಾರಾಟಕ್ಕೆ ಅವಕಾಶ ಇಲ್ಲದಿರುವ ಕಡೆ ತಯಾರಿಕಾ ಘಟಕ ಸ್ಥಾಪಿಸುವುದಿಲ್ಲ ಎಂದಿದ್ಧಾರೆ.

"ಕಾರುಗಳನ್ನು ಮೊದಲು ಮಾರಾಟ ಮಾಡಿ ಸರ್ವಿಸ್ ಮಾಡಲು ಎಲ್ಲಿ ಅವಕಾಶ ಕೊಡುವುದಿಲ್ಲವೋ ಅಲ್ಲಿ ಟೆಸ್ಲಾ ತಯಾರಿಕಾ ಘಟಕ ಸ್ಥಾಪನೆ ಮಾಡುವುದಿಲ್ಲ" ಎಂದು ಶುಕ್ರವಾರ ರಾತ್ರಿ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.

Know Why Elon Musk Said No To Manufacture Tesla Cars In India

ಭಾರತದಲ್ಲಿ ಆಮದು ಕಾರುಗಳಿಗೆ ದುಬಾರಿ ತೆರಿಗೆ ಇದೆ. 40 ಸಾವಿರ ಡಾಲರ್ (ಸುಮಾರು 30 ಲಕ್ಷ ರೂಪಾಯಿ) ಗಿಂತ ಹೆಚ್ಚು ಬೆಲೆಯ ಕಾರನ್ನು ಆಮದು ಮಾಡಿಕೊಂಡರೆ ಶೇ 100ರಷ್ಟು ತೆರಿಗೆ ಹಾಕಲಾಗುತ್ತದೆ. ಅಂದರೆ 30 ಲಕ್ಷ ರೂ ಮೂಲ ಬೆಲೆಯ ಕಾರು ಭಾರತಕ್ಕೆ ಆಮದಾಗಿ ಬಂದರೆ 60 ಲಕ್ಷ ರೂ ಆಗಿಹೋಗುತ್ತದೆ. ಇನ್ನು, 30 ಲಕ್ಷ ರೂಗಿಂತ ಕಡಿಮೆ ಬೆಲೆಯ ಕಾರುಗಳಿಗೆ ಶೇ. 60ರಷ್ಟು ಆಮದು ಸುಂಕ ಹೇರಲಾಗುತ್ತದೆ. ಹೀಗಾಗಿ, ಟೆಸ್ಲಾದ ಎಲೆಕ್ಟ್ರಿಕ್ ಕಾರುಗಳಿಗೆ ಭಾರತದಲ್ಲಿ ಮಾರುಕಟ್ಟೆ ಇಲ್ಲದಂತಾಗಿದೆ. ಇದು ಎಲಾನ್ ಮಸ್ಕ್ ಅವರಿಗೆ ಕಣ್ಣುರಿ ತಂದಿದೆ. ಹೀಗಾಗಿ, ಮೊದಲು ಮಾರಲು ಬಿಡಿ ಆನಂತರ ಇಲ್ಲಿಯೇ ತಯಾರಿಸುತ್ತೇವೆ ಎಂದು ಮಸ್ಕ್ ಜಗ್ಗಿದ್ದಾರೆ.

ಕರ್ನಾಟಕಕ್ಕೆ ಬರುತ್ತಾ ಓಲಾ ಎಲೆಕ್ಟ್ರಿಕ್ ಕಾರು ತಯಾರಿಕಾ ಘಟಕ?ಕರ್ನಾಟಕಕ್ಕೆ ಬರುತ್ತಾ ಓಲಾ ಎಲೆಕ್ಟ್ರಿಕ್ ಕಾರು ತಯಾರಿಕಾ ಘಟಕ?

ಟೆಸ್ಲಾ ಭಾರತ ತಂಡಕ್ಕೆ ಬೇರೆ ಹೊಣೆ:
ಎಲಾನ್ ಮಸ್ಕ್ ಭಾರತದಲ್ಲಿ ಟೆಸ್ಲಾ ಕಾರು ತಯಾರಿಸುವ ಅಥವಾ ಮಾರಾಟ ಮಾಡುವ ನಿರೀಕ್ಷೆಯನ್ನೇ ಬಿಟ್ಟಂತೆ ಕಾಣುತ್ತಿದೆ. ಟೆಸ್ಲಾ ಮಾರಾಟಕ್ಕೆಂದು ಭಾರತದಲ್ಲಿ ನೇಮಕಾತಿ ಮಾಡಿಕೊಂಡಿದ್ದ ಉದ್ಯೋಗಿಗಳನ್ನು ಈಗ ಮಧ್ಯಪ್ರಾಚ್ಯ ಹಾಗೂ ವಿಸ್ತೃತ ಏಷ್ಯನ್ ಪೆಸಿಫಿಕ್ ಮಾರುಕಟ್ಟೆಗಳತ್ತ ಗಮನಹರಿಸಲು ಬಿಟ್ಟಿದ್ದಾರೆ. ಇದು ಭಾರತ ಸರಕಾರಕ್ಕೆ ಮಸ್ಕ್ ಕೊಟ್ಟಿರುವ ಪ್ರತಿಸವಾಲು ಎನ್ನಲಡ್ಡಿ ಇಲ್ಲ.

(ಒನ್ಇಂಡಿಯಾ ಸುದ್ದಿ)

English summary
Elon Musk has said that Tesla will not manufacture cars in India unless it is allowed to sell and provide service to its electric vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X