ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವು ಕಡಿತಕ್ಕೆ 100 ಮಂದಿ ಬಲಿ; ಆಂಧ್ರ ಸರ್ಕಾರದಿಂದ ಸರ್ಪಯಾಗ

By Mahesh
|
Google Oneindia Kannada News

ಅಮರಾವತಿ, ಆಗಸ್ಟ್ 28: ಮುಂಗಾರುಮಳೆಯ ಹೊಡೆತಕ್ಕೆ ಸಿಲುಕಿ ಭಾರಿ ಮಳೆ ಕಂಡಿರುವ ಕೃಷ್ಣ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ100ಕ್ಕೂ ಹೆಚ್ಚು ಮಂದಿ, ಹಾವು ಕಡಿತಕ್ಕೆ ಗುರಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಈ ಹಿನ್ನೆಲೆಯಲ್ಲಿ ಸರ್ಪಯಾಗ ನಡೆಸಲು ಆಂಧ್ರಪ್ರದೇಶದ ಮುಜರಾಯಿ ಇಲಾಖೆ ಮುಂದಾಗಿದೆ. ಮೋಪಿದೇವಿಯಲ್ಲಿರುವ ಪ್ರಸಿದ್ಧ ಸುಬ್ರಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ಸಾಮಾನ್ಯವಾಗಿ ಸಾರ್ವಜನಿಕರು ಸರ್ಪಯಾಗ ಹಾಗೂ ಸರ್ಪದೋಷ ನಿವಾರಣಾ ಪೂಜೆ ನಡೆಸುತ್ತಾರೆ. ಆದರೆ, ಈ ಬಾರಿ ಆಗಸ್ಟ್ 29ರಂದು ಸರ್ಕಾರದ ಮುಜರಾಯಿ ಇಲಾಖೆಯಿಂದ ಸರ್ಪಯಾಗ ನಡೆಸಲು ನಿರ್ಧರಿಸಲಾಗಿದೆ.

ನಾಗದೋಷ, ದೋಷದ ಕಾರಣಗಳು, ಮನೆಗೆ ಹಾವು ಬಂದರೆ ಏನು ಫಲ?ನಾಗದೋಷ, ದೋಷದ ಕಾರಣಗಳು, ಮನೆಗೆ ಹಾವು ಬಂದರೆ ಏನು ಫಲ?

ಮುಜರಾಯಿ ಇಲಾಖೆ ಹಾಗೂ ಕೃಷ್ಣ ಜಿಲ್ಲಾ ಆಡಳಿತದ ವತಿಯಿಂದ ಸರ್ಪಯಾಗ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಬಿ. ಲಕ್ಷ್ಮಿಕಾಂತಮ್ ತಿಳಿಸಿದ್ದಾರೆ. ಭಾರೀ ಮಳೆ ಹಾಗೂ ಕೃಷ್ಣಾ ನದಿ ಉಕ್ಕಿ
ಹರಿದಿದ್ದರಿಂದ ಹಾವುಗಳು ಹೊಲಗಳಲ್ಲಿ ಹಾಗೂ ಗ್ರಾಮಗಳಲ್ಲಿ ಸೇರಿಕೊಂಡಿವೆ.

Know why AP endowments department to conduct Sarpayagam

ಇದರಿಂದಾಗಿ ಜಿಲ್ಲೆಯ ದಿವಿಸೀಮಾ ಪ್ರದೇಶದಲ್ಲಿ ಹಾವುಗಳ ಹಾವಳಿ ಹೆಚ್ಚಾಗಿದೆ. ಆದರೆ, ಸರ್ಕಾರ ಸರ್ಪಯಾಗ ನಡೆಸಲು ಮುಂದಾಗಿರುವುದು ಮೌಢ್ಯ ವಿರೋಧಿಗಳಿಂದ ಟೀಕೆಗೆ ಗುರಿಯಾಗಿದೆ.

ಸರ್ಪ ದೋಷ ಅಂದರೆ ಏನು, ಎಷ್ಟು ಬಗೆ, ಯಾವ ದೋಷಕ್ಕೆ ಏನು ಪರಿಹಾರ?
ಸರ್ಕಾರ ಸರ್ಪಯಾಗ ನಡೆಸುವುದು ಮೌಢ್ಯಕ್ಕೆ ಉತ್ತೇಜನ ನೀಡಿತ್ತದೆ. ಇದು ಜನರ ಕಣ್ಣಿಗೆ ಮಣ್ಣೆರಚಲು ಹಾಗೂ ಸಾರ್ವಜನಿಕರ ಹಣ ಪೋಲು ಮಾಡಲು ಮಾಡಿರುವ ತಂತ್ರ ಎಂದು ಜನ ವಿಜ್ಞಾನ ವೇದಿಕೆ ತಿಳಿಸಿದೆ. ಇಂಥ ಯಾಗಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ವೇದಿಕೆಯ ಅಧ್ಯಕ್ಷ
ಜಂಪಾ ಕೃಷ್ಣ ಕಿಶೋರ್ ತಿಳಿಸಿದ್ದಾರೆ.

ಆದರೆ, ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಜಿಲ್ಲಾಡಳಿತ, ಯಾಗವನ್ನು ಮೌಢ್ಯವೆಂದು ಪರಿಗಣಿಸಬಾರದು. ದೇವಸ್ಥಾನಗಳು ಕಾಲಾನುಕಾಲಕ್ಕೆ ಯಾಗ ಹಾಗೂ ಪೂಜೆಗಳನ್ನು ಕೈಗೊಳ್ಳುತ್ತವೆ. ಇದರಲ್ಲಿ ಸರ್ಪಯಾಗವೂ ಸಹ ಸೇರಿದೆ ಎಂದು ತಿಳಿಸಿದೆ.

English summary
The Andhra Pradesh Endowments Department will conduct a Sarpayagam and Sarpa Dosha Nivarana Pooja - rituals to appease snake gods- at Subramanyeswara Swamy temple in Krishna district’s Mopidevi after over 100 persons have suffered snake bites at Avanigadda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X