ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರಾಗ್ತಾರೆ ಮುಂದಿನ ಸಿಡಿಎಸ್? ಸುಳಿವು ಕೊಡದ ಸರಕಾರ

|
Google Oneindia Kannada News

ನವದೆಹಲಿ, ಮೇ 7: ಕಳೆದ ಐದು ತಿಂಗಳಿನಿಂದ ಖಾಲಿ ಬಿದ್ದಿರುವ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ (CDS- Chief of Defence Staff) ಸ್ಥಾನ ಯಾರಿಗೆ ಸಿಗಬಹುದು ಎಂಬುದು ಯಕ್ಷ ಪ್ರಶ್ನೆಯಾದಂತಿದೆ. ಈ ನಿಟ್ಟಿನಲ್ಲಿ ಸರಕಾರದ ವತಿಯಿಂದ ಅಥವಾ ಸೇನಾ ಪಡೆಗಳ ವತಿಯಿಂದ ಯಾವ ಪ್ರಕ್ರಿಯೆಯೂ ಆರಂಭಗೊಂಡಂತಿಲ್ಲ. ಹಿಂದೆ ಸಿಡಿಎಸ್ ಆಗಿದ್ದ ಜನರಲ್ ಬಿಪಿನ್ ರಾವತ್ ಕಳೆದ ಡಿಸೆಂಬರ್ ತಿಂಗಳಲ್ಲಿ ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ದುರಂತಕ್ಕೆ ಬಲಿಯಾಗಿದ್ದರು. ಆಗಿನಿಂದಲೂ ನೂತನ ಸಿಡಿಎಸ್ ನೇಮಕವಾಗಿಲ್ಲ.

ಭೂ ಸೇನೆಯ ಮುಖ್ಯಸ್ಥ ಸ್ಥಾನದಿಂದ ನಿವೃತ್ತರಾಗಿದ್ದ ಜನರಲ್ ಎಂ ಎಂ ನರವಣೆ ಅವರು ನೂತನ ಸಿಡಿಎಸ್ ಆಗಬಹುದು ಎಂಬ ಎಣಿಕೆ ಇತ್ತು. ಆ ನಿರೀಕ್ಷೆಯೂ ಸುಳ್ಳಾಯಿತು. ಸಿಡಿಎಸ್ ಸ್ಥಾನವನ್ನು ಭರಿಸಲು ಸರಕಾರ ಮುಂದಾಗಲಿ ಎಂದು ಭಾರತೀಯ ಸೇನಾಪಡೆಗಳು ನಿರೀಕ್ಷಿಸುತ್ತಿವೆ.

ಬಿ. ಎಸ್. ರಾಜು ಅಧಿಕಾರ ಸ್ವೀಕಾರ; ಹುಟ್ಟೂರು ಅಜ್ಜಂಪುರದಲ್ಲಿ ಸಂಭ್ರಮ ಬಿ. ಎಸ್. ರಾಜು ಅಧಿಕಾರ ಸ್ವೀಕಾರ; ಹುಟ್ಟೂರು ಅಜ್ಜಂಪುರದಲ್ಲಿ ಸಂಭ್ರಮ

 ಸಿಡಿಎಸ್ ಸ್ಥಾನ ಯಾಕೆ?

ಸಿಡಿಎಸ್ ಸ್ಥಾನ ಯಾಕೆ?

ಭಾರತದ ಮಿಲಿಟರಿಯಲ್ಲಿ ಮೂರು ಸೇನಾ ಪಡೆಗಳಿವೆ. ಭೂಸೇನೆ, ವಾಯುಸೇನೆ ಮತ್ತು ನೌಕಾ ಸೇನೆಗಳಿವೆ. ಯುದ್ಧಸಂದರ್ಭದಲ್ಲಿ ಈ ಮೂರೂ ಪಡೆಗಳ ನಡುವೆ ಸಮನ್ವಯತೆ ಬಹಳಷ್ಟು ಇರಬೇಕಾಗುತ್ತದೆ. ಇಲ್ಲದಿದ್ದರೆ ಇಡೀ ಸೇನೆಗೆ ಹಿನ್ನಡೆಯಾಗಬಹುದು. ಇದು ಕಾರ್ಗಿಲ್ ಯುದ್ಧ ಸೇರಿದಂತೆ ಕೆಲ ಸಂದರ್ಭದಲ್ಲಿ ಭಾರತಕ್ಕೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಮೂರು ಸೇನಾ ಪಡೆಗಳ ನಡುವೆ ಸಮನ್ವಯತೆ ಸಾಧಿಸಲು ಒಬ್ಬ ಮುಖ್ಯಸ್ಥ ಸ್ಥಾನವನ್ನು ಕೆಲ ವರ್ಷಗಳ ಹಿಂದೆ ಸೃಷ್ಟಿಸಲಾಯಿತು. ಅದೇ ಸಿಡಿಎಸ್. ಅಂದರೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್.

 ಸೇನಾ ಸಿಬ್ಬಂದಿ ಮುಖ್ಯಸ್ಥ ಸ್ಥಾನ.

ಸೇನಾ ಸಿಬ್ಬಂದಿ ಮುಖ್ಯಸ್ಥ ಸ್ಥಾನ.

ಹಾಗೆಯೇ, ಯುದ್ಧ ವ್ಯೂಹಗಳಲ್ಲಿ ಆಗಿರುವ ಬದಲಾವಣೆ, ಭದ್ರತಾ ವ್ಯವಸ್ಥೆಯಲ್ಲಿನ ಬದಲಾವಣೆ, ರಾಷ್ಟ್ರೀಯ ಭದ್ರತಾ ಪರಿಸ್ಥಿತಿಯ ಸವಾಲುಗಳು ಇವೆಲ್ಲವನ್ನೂ ನಿಭಾಯಿಸಲೆಂದೇ ಸಿಡಿಎಸ್ ಹುದ್ದೆ ಸೃಷ್ಟಿಸಲಾಗಿದೆ. ಸೇನಾ ಸಿಬ್ಬಂದಿಗೆ ತರಬೇತಿ, ಶಸ್ತ್ರಾಸ್ತ್ರಗಳ ಖರೀದಿ, ಸಿಬ್ಬಂದಿ ನೇಮಕಾತಿ, ನಿಯೋಜನೆ ಇತ್ಯಾದಿ ಕೆಲಸಗಳಲ್ಲಿ ಮೂರು ಸೇನಾ ಪಡೆಗಳ ನಡುವೆ ಸಮನ್ವಯತೆ ಸಾಧಿಸುತ್ತಾರೆ ಸಿಡಿಎಸ್. ಸಿಡಿಎಸ್ ಆದವರು ಪ್ರಧಾನಿಗೆ ಮಿಲಿಟರಿ ಸಲಹೆಗಾರರಾಗಿಯೂ ಜವಾಬ್ದಾರಿ ಹೊರುತ್ತಾರೆ.

 ಮೊತ್ತಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್

ಮೊತ್ತಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್

ಜನರಲ್ ಬಿಪಿನ್ ರಾವತ್ 2020, ಜನವರಿ 1ರಂದು ಮೊತ್ತಮೊದಲ ಸಿಡಿಎಸ್ ಆದಾಗ ಮಿಲಿಟರಿ ವ್ಯವಹಾರಗಳ ಇಲಾಖೆಯನ್ನೂ (DMA- Department of Military Affairs) ಹೊಸದಾಗಿ ರಚಿಸಲಾಗಿತ್ತು. ಈ ಇಲಾಖೆಗೆ ರಾವತ್ ಅವರೇ ಕಾರ್ಯದರ್ಶಿ ಆಗಿದ್ದರು. ಇದೀಗ ಬಿಪಿನ್ ರಾವತ್ ವಿಧಿವಶರಾಗಿರುವುದರಿಂದ ಸಿಡಿಎಸ್ ಮತ್ತು ಡಿಎಂಎ ಈ ಎರಡೂ ಸ್ಥಾನಗಳೂ ಖಾಲಿ ಇವೆ.

ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಸಿಡಿಎಸ್ ಮತ್ತು ಡಿಎಂಎ ಈ ಎರಡು ಸ್ಥಾನಗಳನ್ನು ಒಬ್ಬರೇ ವ್ಯಕ್ತಿಗೆ ವಹಿಸುವ ಬದಲು ಇಬ್ಬರಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ. ಸಿಡಿಎಸ್ ಸ್ಥಾನವನ್ನು ಒಬ್ಬರು ನಿಭಾಯಿಸಿದರೆ, ಮಿಲಿಟರಿ ವ್ಯವಹಾರ ಕಾರ್ಯದರ್ಶಿ ಹುದ್ದೆ ಮತ್ತೊಬ್ಬರ ಹೊಣೆಯಾಗಿರುತ್ತದೆ.

 ಭೂಸೇನೆಯ ಮುಖ್ಯಸ್ಥರಾಗಿ ಇತ್ತೀಚೆಗಷ್ಟೇ ಜನರಲ್ ಮನೋಜ್

ಭೂಸೇನೆಯ ಮುಖ್ಯಸ್ಥರಾಗಿ ಇತ್ತೀಚೆಗಷ್ಟೇ ಜನರಲ್ ಮನೋಜ್

ಮಿಲಿಟರಿ ಅಫೇರ್ಸ್ ಡಿಪಾರ್ಟ್ಮೆಂಟ್ ಭೂ ದಳ, ನೌಕಾ ದಳ ಮತ್ತು ವಾಯು ದಳಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನ ನೋಡಿಕೊಳ್ಳುತ್ತದೆ. ಮಿಲಿಟರಿ ಸೇವೆಗಳ ಖರೀದಿ ಪ್ರಕ್ರಿಯೆಯನ್ನು ಅದು ನಿಭಾಯಿಸುತ್ತದೆ. ಈ ಮೂರು ಸೇನೆಗಳ ಯುದ್ಧ ಕಾರ್ಯಾಚರಣೆಯಲ್ಲಿ ಡಿಎಂಎ ಪಾತ್ರ ನೇರವಾಗಿ ಇರುವುದಿಲ್ಲ.

ಭಾರತದ ಮೂರು ಸೇನಾ ದಳಗಳ ಪೈಕಿ ಭೂಸೇನೆಯ ಮುಖ್ಯಸ್ಥರಾಗಿ ಇತ್ತೀಚೆಗಷ್ಟೇ ಜನರಲ್ ಮನೋಜ್ ಪಾಂಡೆ ಆಯ್ಕೆಯಾಗಿದ್ದಾರೆ. ವಾಯುಪಡೆಯ ಮುಖ್ಯಸ್ಥರಾಗಿ ಮಾರ್ಷಲ್ ವಿವೇಕ್ ರಾಮ್ ಚೌಧರಿ ಇದ್ದಾರೆ. ನೌಕಾಪಡೆಯ ಮುಖ್ಯಸ್ಥರಾಗಿ ಅಡ್ಮಿರಲ್ ಆರ್ ಹರಿಕುಮಾರ್ ಅವರಿದ್ದಾರೆ. ಈ ಮೂವರಲ್ಲಿ ಒಬ್ಬರನ್ನು ಸಿಡಿಎಸ್ ಸ್ಥಾನಕ್ಕೆ ಬಡ್ತಿ ಕೊಡಲಾಗುತ್ತದಾ ಅಥವಾ ಬೇರೆಯವರನ್ನು ಆ ಸ್ಥಾನಕ್ಕೆ ಕರೆತರಲಾಗುತ್ತದಾ ಎಂಬುದು ಸ್ಪಷ್ಟವಾಗಿಲ್ಲ. ಸರಕಾರ ಈ ನಿಟ್ಟಿನಲ್ಲಿ ಯಾವ ಸುಳಿವನ್ನೂ ನೀಡಿಲ್ಲ. ಸರಕಾರದಿಂದ ಅನಿರೀಕ್ಷಿತ ನಿರ್ಧಾರ ಬಂದರೆ ಅಚ್ಚರಿ ಏನಿಲ್ಲ.

(ಒನ್ಇಂಡಿಯಾ ಸುದ್ದಿ)

English summary
The post of Chief of Defence Staff lies vacant for the last five months with no sign of immediate appointment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X