ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬಂಧನಕ್ಕೆ ಏನು ಕಾರಣ?

|
Google Oneindia Kannada News

ಅಹಮದಾಬಾದ್, ಏಪ್ರಿಲ್ 21: ಗುಜರಾತ್‌ನ ಪಾಲನ್‌ಪುರದ ಸರ್ಕ್ಯೂಟ್ ಹೌಸ್‌ನಲ್ಲಿ ಸ್ಥಳೀಯಪೊಲೀಸರ ನೆರವಿನಿಂದ ಅಸ್ಸಾಂ ಪೊಲೀಸರು ಮೇವಾನಿರನ್ನು ಬಂಧಿಸಿದ್ದಾರೆ.

2021ರ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ನಂತರ ಅಹಮದಾಬಾದ್‌ಗೆ ಕರೆದೊಯ್ಯಲಾಯಿತು ಮತ್ತು ಇಂದು ಅಸ್ಸಾಂಗೆ ರೈಲಿನ ಮೂಲಕ ಕರೆದೊಯ್ಯಲಾಗುತ್ತದೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಸೇರ್ಪಡೆಗೊಂಡ ಕನ್ಹಯ್ಯ, ಜಿಗ್ನೇಶ್ ಮುಂದೇನು?ಕಾಂಗ್ರೆಸ್ ಸೇರ್ಪಡೆಗೊಂಡ ಕನ್ಹಯ್ಯ, ಜಿಗ್ನೇಶ್ ಮುಂದೇನು?

ದಲಿತ ನಾಯಕ ಮತ್ತು ರಾಜಕೀಯ ಪಕ್ಷದ ರಾಷ್ಟ್ರೀಯ ದಲಿತ ಅಧಿಕಾರ ಮಂಚ್‌ನ ಸಂಚಾಲಕ ಮೇವಾನಿ ಬಂಧನದ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಮೇವಾನಿ ಅವರ ಅಧಿಕೃತ ಖಾತೆಯಿಂದ ಕೆಲವು ಇತ್ತೀಚಿನ ಟ್ವೀಟ್‌ಗಳನ್ನು ಅಧಿಕಾರಿಗಳ ವಿನಂತಿಯ ಕಾರಣ ತಡೆಹಿಡಿಯಲಾಗಿದೆ ಎಂದು ಅವರ ಟ್ವಿಟ್ಟರ್ ಖಾತೆ ತೋರಿಸುತ್ತದೆ.

Know what led Gujarat MLA Jignesh Mevani Arrest by Assam police

ಟ್ವೀಟ್ ಗಳಲ್ಲಿ ಏನಿದೆ?

"ಗೋಡ್ಸೆಯನ್ನು ದೇವರೆಂದು ಪರಿಗಣಿಸುವ" ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಕೋಮು ಘರ್ಷಣೆಗಳ ವಿರುದ್ಧ ಶಾಂತಿ ಮತ್ತು ಸೌಹಾರ್ದತೆಗಾಗಿ ಮನವಿ ಮಾಡಬೇಕು ಎಂಬರ್ಥದಲ್ಲಿ ಮೇವಾನಿ ಟ್ವೀಟ್ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ಭಬಾನಿಪುರದ ನಿವಾಸಿ ಅನುಪ್ ಕುಮಾರ್ ಡೇ ಎಂಬಾತ ನೀಡಿದ ದೂರಿನ ಆಧಾರದ ಮೇಲೆ ಮೇವಾನಿ ಬಂಧನವಾಗಿದೆ. ಮೇವಾನಿ ವಿರುದ್ಧ ಸೆಕ್ಷನ್ 120 ಬಿ (ಅಪರಾಧ ಪಿತೂರಿ), ಸೆಕ್ಷನ್ 153 (ಎ) (ನಡುವೆ ದ್ವೇಷವನ್ನು ಉತ್ತೇಜಿಸುವ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದಾಖಲೆ ತೋರಿಸುತ್ತದೆ. ಸೆಕ್ಷನ್ 295(ಎ) (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ವಿರೂಪಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 506 (ಅಪರಾಧ ಬೆದರಿಕೆ) ಮತ್ತು ಐಟಿ ಕಾಯಿದೆ ಉಲ್ಲಂಘನೆ ಆರೋಪ ಹಾಕಲಾಗಿದೆ.

ಎಫ್‌ಐಆರ್ ಅಥವಾ ಪೊಲೀಸ್ ಪ್ರಕರಣದ ಪ್ರತಿಯನ್ನು ಇನ್ನೂ ನೀಡಿಲ್ಲ ಎಂದು ಮೇವಾನಿ ಅವರ ಸಹಾಯಕರು ಹೇಳಿದ್ದಾರೆ. ಆದರೆ, ಬಂಧನಕ್ಕೆ ಕಾರಣ ಹಾಗೂ ದೂರಿನ ಬಗ್ಗೆ ಮೇವಾನಿಗೆ ತಿಳಿಸಿದ ಬಳಿಕವೇ ಬಂಧಿಸಿ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗೌ ತಿಳಿಸಿವೆ.

ಜಿಗ್ನೇಶ್ ಮೇವಾನಿ ಅವರು ಗುಜರಾತ್‌ನ ವಡ್ಗಾಮ್‌ನ ವಿಧಾನಸಭೆಯ ಸದಸ್ಯ ಅಥವಾ ಶಾಸಕರಾಗಿದ್ದಾರೆ. ಅವರು ವಕೀಲ ಕಾರ್ಯಕರ್ತ ಮತ್ತು ಮಾಜಿ ಪತ್ರಕರ್ತ. ಅವರು ಸ್ವತಂತ್ರ ಶಾಸಕರಾಗಿದ್ದರೂ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ.

ದೂರಿನಲ್ಲಿ ಏನಿದೆ?:
ಅಸ್ಸಾಂ ಪೊಲೀಸರು ಮೇವಾನಿಯೊಂದಿಗೆ ಹಂಚಿಕೊಂಡ ದೂರಿನಲ್ಲಿ, ಮೇವಾನಿ ಅವರು ಏಪ್ರಿಲ್ 18 ರಂದು ಮಾಡಿದ ಟ್ವೀಟ್ ಅನ್ನು ಉಲ್ಲೇಖಿಸಲಾಗಿದೆ. "ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 'ಗೋಡ್ಸೆ' ಯನ್ನು ದೇವರಂತೆ ಪೂಜಿಸುತ್ತಾರೆ ಮತ್ತು ಪರಿಗಣಿಸುತ್ತಾರೆ. ಏಪ್ರಿಲ್ 20 ರಂದು ಗುಜರಾತ್‌ಗೆ ಭೇಟಿ ನೀಡಿದ್ದು, ಕೋಮುಗಲಭೆ ನಡೆದ ಹಿಮ್ಮತ್‌ನಗರ, ಖಂಭತ್ ಮತ್ತು ವೆರಾವಲ್ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಸಾರ್ವಜನಿಕರಲ್ಲಿ ಮನವಿ ಮಾಡಬೇಕು ಎಂದು ಮೇವಾನಿ ಎರಡು ಟ್ವೀಟ್ ಮಾಡಿದ್ದರ ವಿರುದ್ಧ ದೂರು ನೀಡಲಾಗಿದೆ.

''ಟ್ವೀಟ್‌ ಸಾರ್ವಜನಿಕ ನೆಮ್ಮದಿಯನ್ನು ಕದಡುವ ಪ್ರವೃತ್ತಿಯನ್ನು ಹೊಂದಿದೆ, ನಿರ್ದಿಷ್ಟ ವರ್ಗದ ಜನರಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಪೂರ್ವಾಗ್ರಹವನ್ನು ಹೊಂದಿದೆ. ಇದು ಒಂದು ವಿಭಾಗವನ್ನು ಪ್ರಚೋದಿಸುವ ಸಾಧ್ಯತೆಯಿದೆ" ಎಂದು ದೂರುದಾರರು ಹೇಳಿದ್ದಾರೆ.

ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ 63,471 ಮತಗಳನ್ನು ಪಡೆದಿದ್ದಾರೆ. ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವಿಜಯಕುಮಾರ್ ಚಕ್ರವರ್ತಿಯವರನ್ನು 21,042 ಮತಗಳ ಅಂತರದಿಂದ ಸೋಲಿಸಿದ್ದರು. ಮೇವಾನಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳಲಾಗಿತ್ತು.

ಊನ್ನಾವೋ ದಲಿತ ದೌರ್ಜನ್ಯದ ನಂತರ ರಾಜ್ಯದಾದ್ಯಂತ ಹುಟ್ಟಿಕೊಂಡ ದಲಿತ ಹೋರಾಟದ ಮೂಲಕ ಜಿಗ್ನೇಶ್ ಮೇವಾನಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಬಿಜೆಪಿ ವಿರುದ್ಧ ಕೆಂಡ ಕಾರುತ್ತಾ ಬಂದ ಜಿಗ್ನೇಶ್ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಿದ್ದರು

English summary
Anup Kumar Dey, a resident of Bhabanipur in Kokrajhar district in Assam given complaint againt two tweets of independent MLA Mevani against PM Modi which led Mevani Arrest by Assam police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X