• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ದರ ಹೆಚ್ಚಳ

|

ನವದೆಹಲಿ, ಮಾರ್ಚ್ 5: ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದ ಬಳಿಕ ಭಾರತೀಯ ರೈಲ್ವೆ ಇಂದು ಹೊಸ ಆದೇಶ ಹೊರಡಿಸಿದೆ. ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಇನ್ಮುಂದೆ ಪ್ಲಾಟ್ ಫಾರ್ಮ್ ಟಿಕೆಟ್ ದರ ಏರಿಕೆಯಾಗಲಿದೆ.

'ಕೋವಿಡ್-19 ಸೋಂಕಿನ ಕಾರಣದಿಂದ ಸಂಕಷ್ಟದ ಸನ್ನಿವೇಶ ಸೃಷ್ಟಿಯಾಗಿದೆ. ಹೀಗಾಗಿ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಲ್ಲದವರು ಪ್ರವೇಶ ನೀಡುವುದನ್ನು ನಿರ್ಬಂಧಿಸುವ ಉದ್ದೇಶದಿಂದ ಪ್ಲಾಟ್‌ಫಾರ್ಮ್ ಟಿಕೆಟ್ ಬೆಲೆಯನ್ನು ಏರಿಸಲಾಗಿದೆ'ರೈಲ್ವೆ ನಿಲ್ದಾಣಗಳಲ್ಲಿ ಸೋಂಕು ಹರಡುವ ಅಪಾಯ ತಗ್ಗಲಿದೆ ಎಂದು ಇಲಾಖೆ ಹೇಳಿದೆ.

ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆಯ ಮತ್ತೊಂದು ಆಘಾತ ನೀಡಿದ ರೈಲ್ವೆ ಇಲಾಖೆ

ಹಬ್ಬದ ಅವಧಿಯಲ್ಲಿ ಬೆಂಗಳೂರಿನ ಕೆಲವು ನಿಲ್ದಾಣಗಳು ಸೇರಿದಂತೆ ದೇಶದ 260ಕ್ಕೂ ಅಧಿಕ ಪ್ರಮುಖ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಬೆಲೆ 10 ರಿಂದ 50 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಹೊಸ ಆದೇಶದಲ್ಲಿ ಏನಿದೆ?

ಪ್ಲಾಟ್‌ಫಾರ್ಮ್ ಟಿಕೆಟ್ ಬೆಲೆ ಆದೇಶ ಕೂಡಾ ತಾತ್ಕಾಲಿಕವಾಗಿ ಜಾರಿಯಲ್ಲಿರಲಿದೆ. 10 ರು ಇರುವ ಟಿಕೆಟ್ ದರವನ್ನು 50 ರು ಬದಲಿಗೆ 30 ರುಗೆ ಏರಿಕೆ ಮಾಡಲಾಗಿದೆ. ಜೊತೆಗೆ ಸ್ಥಳೀಯ ಸಂಚಾರದ ಟಿಕೆಟ್ ದರವೂ ಏರಿಕೆಯಾಗಿದೆ

ಉದಾ: ದೆಹಲಿಯಿಂದ ಗಾಜಿಯಾಬಾದ್‌ಗೆ ಪ್ರಯಾಣಿಸುವವರು 10 ರು ಬದಲು 30 ರು ನೀಡಬೇಕಾಗುತ್ತದೆ.

ವರ್ಷಾರಂಭದಲ್ಲಿ ಆಯ್ದ ರೈಲು ಮಾರ್ಗಗಳ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಸಬ್ ಅರ್ಬನ್ ಹೊರತುಪಡಿಸಿ, ನಾನ್ ಎಸಿ, ನಾನ್ ಸಬ್ ಅರ್ಬನ್ ರೈಲು ದರ 1 ಕಿ.ಮೀಗೆ 1 ಪೈಸೆಯಂತೆ ದರ ಹೆಚ್ಚಳ ಮಾಡಲಾಗಿತ್ತು. ಮೇಲ್/ ಎಕ್ಸ್ ಪ್ರೆಸ್ ನಾನ್ ಎಸಿ ಟ್ರೈನ್ ದರ 4ಪೈಸೆ/ಕಿ.ಮೀನಂತೆ ಏರಿಕೆಯಾಗಿತ್ತು. ಶತಾಬ್ದಿ, ರಾಜಧಾನಿ, ದುರಂತೋ ಮುಂತಾದ ಪ್ರೀಮಿಯಂ ರೈಲುಗಳ ದರವೂ ಹೆಚ್ಚಳವಾಗಿತ್ತು.

English summary
The Indian Railways have announced fare hike for platform ticket across its network. The fresh notification by the railways stated that the platform ticket price has been increased from Rs 10 to Rs 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X