ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಹಾಗೂ ನೇಪಾಳ ನಡುವೆ ಪೆಟ್ರೋಲಿಯಂ ಪೈಪ್ ಲೈನ್

|
Google Oneindia Kannada News

ನವದೆಹಲಿ, ಸೆ. 11: ದಕ್ಷಿಣ ಏಷ್ಯಾದ ಮೊಟ್ಟಮೊದಲ ಗಡಿಯಾಚೆಗಿನ ಪೆಟ್ರೋಲಿಯಂ ಉತ್ಪನ್ನಗಳ ಪೈಪ್​ಲೈನ್​ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಒಲಿ ವಿಡಿಯೋ ಕಾನ್ಪರೆನ್ಸ್​ ಮೂಲಕ ಜಂಟಿಯಾಗಿ ಉದ್ಘಾಟಿಸಿದ್ದಾರೆ.

ಭಾರತದ ಬಿಹಾರದ ಮೋತಿಹಾರಿ ಹಾಗೂ ನೇಪಾಳದ ಅಮ್ಲೆಖ್​ಗಂಜ್ ನಡುವಿನ 60 ಕಿಮೀ ಉದ್ದದ ಪೆಟ್ರೋಲಿಯಂ ಉತ್ಪನ್ನಗಳ ಪೈಪ್​ಲೈನ್ ಯೋಜನೆ ಜಾರಿಗೊಂಡಿರುವುದರಿಂದ ನೇಪಾಳದಲ್ಲಿ ಇಂಧನ ಬೆಲೆ ತಗ್ಗಲಿದೆ.

ಯಾವುದೇ ದೇಶದ ಆಂತರಿಕ ವಿಚಾರದಲ್ಲಿ ಬಾಹ್ಯ ಪ್ರಭಾವ ನಾವು ಸಹಿಸಲ್ಲ: ಮೋದಿ, ಪುಟಿನ್ಯಾವುದೇ ದೇಶದ ಆಂತರಿಕ ವಿಚಾರದಲ್ಲಿ ಬಾಹ್ಯ ಪ್ರಭಾವ ನಾವು ಸಹಿಸಲ್ಲ: ಮೋದಿ, ಪುಟಿನ್

1973ರಿಂದ ನೇಪಾಳಕ್ಕೆ ಭಾರತದಿಂದ ಟ್ಯಾಂಕರ್​ಗಳ ಮೂಲಕ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲಾಗುತ್ತಿತ್ತು. ಇದನ್ನು ಸುಧಾರಣೆಗೊಳಿಸಲು ಯತ್ನಿಸಿ ಕೊನೆಗೆ ಪೈಪ್ ಲೈನ್ ಯೋಜನೆ ಕೈಗೊಳ್ಳಲಾಯಿತು.

Know More about South Asias first cross-border pipeline between India- Nepal

"ಭಾರತ-ನೇಪಾಳ ಇಂಧನ ಸಹಕಾರ ಯೋಜನೆಯು ಎರಡೂ ದೇಶಗಳ ನಿಕಟ ದ್ವಿಪಕ್ಷೀಯ ಸಂಬಂಧಗಳ ಸಂಕೇತವಾಗಿದೆ. ಈ ಯೋಜನೆ ಇಂಧನದ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ಸಾರಿಗೆ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಲು ಸಹಕಾರಿಯಾಗಿದೆ" ಪ್ರಧಾನಿ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

"2015ರ ಭೂಕಂಪ ನೇಪಾಳ ರಾಷ್ಟ್ರವನ್ನು ಬಹುತೇಕ ಧ್ವಂಸಗೊಳಿಸಿತ್ತು. ಆದರೆ, ಇಂತಹ ದುರಂತದ ನಂತರವೂ ಹಿಮಾಲಯದ ಈ ದೇಶ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವುದು ಸಂತಸ ಮೂಡಿಸಿದೆ. ಅಲ್ಲದೆ, ತನ್ನದೆ ಆದ ಆದ್ಯತೆಗಳಿಗೆ ಅನುಗುಣವಾಗಿ ನೇಪಾಳದ ಅಭಿವೃದ್ಧಿ ಕೆಲಸಗಳಿಗೆ ಸಹಾಯ ಮಾಡಲು ಭಾರತ ಬದ್ಧವಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಯೋಜನೆ ವಿವರ:
* 1973ರಿಂದ ಭಾರತದಿಂದ ಟ್ಯಾಂಕರ್ ಮೂಲಕ ನೇಪಾಳಕ್ಕೆ ಇಂಧನ ಸರಬರಾಜು.
*1996ರಲ್ಲಿ ಮೋತಿಹಾರಿ-ಆಮ್ಲೆಖಗಂಜ್ ಪೈಪ್​ಲೈನ್ ಯೋಜನೆಯ ಪ್ರಸ್ತಾವನೆ
* 2014ರಲ್ಲಿ ಕಾಠ್ಮಂಡು ಪ್ರವಾಸದ ವೇಳೆ ಪ್ರಧಾನಿ ಮೋದಿಯಿಂದ ಯೋಜನೆಗೆ ಮರು ಜೀವ.
* 2015ರ ಆಗಸ್ಟ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿಗದಿ ಮಾಡಲಾಗಿತ್ತು. 2015ರಲ್ಲಿ ನೇಪಾಳದಲ್ಲಿ ಭಾರೀ ಭೂಕಂಪದಿಂದಾಗಿ ಕಾಮಗಾರಿ ವಿಳಂಬ.
* 2019ರಲ್ಲಿ ಭಾರತ-ನೇಪಾಳ ಇಂಧನ ಪೈಪ್ ಲೈನ್ ಗೆ ಚಾಲನೆ.
* ಯೋಜನಾ ವೆಚ್ಚ: 350ಕೋಟಿ ರು,
* ಪೈಪ್ ಲೈನ್ ಉದ್ದ: 69 ಕಿ.ಮೀ
* ಮಾರ್ಗ: ಬಿಹಾರದ ಮೋತಿಹಾರಿಯಿಂದ ನೇಪಾಳದ ಆಮ್ಲೆಖಗಂಜ್ಗೆ ಡೀಸೆಲ್ ಸರಬರಾಜು
* ಅಂದಾಜು 14 ಸಾವಿರ ಕೋಟಿ ಉಳಿತಾಯ.

English summary
Prime Minister Narendra Modi jointly inaugurated the first-ever cross-border petroleum products pipeline in South Asia, the Motihari-Amlekhganj (Nepal) petroleum product pipeline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X