ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ್ ಆಹಾರ ಕೆಫೆ: ರೈಲು ನಿಲ್ದಾಣಗಳಲ್ಲಿ 20ರುಗೆ ಊಟ

By Mahesh
|
Google Oneindia Kannada News

ಬೆಂಗಳೂರು, ಜ.04: ಎಷ್ಟೋ ರೈಲು ನಿಲ್ದಾಣಗಳಲ್ಲಿ ಚಹಾ ಸಿಗುವುದೇ ಕಷ್ಟ ಗೊಣಗುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ವರ್ಷಾರಂಭದಲ್ಲಿ ಶುಭ ಸುದ್ದಿ ನೀಡುತ್ತಿದೆ. ಜನ್ ಆಹಾರ ಕೆಫೆಗಳನ್ನು ಆರಂಭಿಸಿ ಕಡಿಮೆ ವೆಚ್ಚದಲ್ಲಿ ಆಹಾರ ಒದಗಿಸಲು ಮುಂದಾಗಿದೆ.[ರೈಲ್ವೆ ನಿಲ್ದಾಣದಲ್ಲಿ ಲೀಟರ್ ಶುದ್ಧ ನೀರಿಗೆ 5 ರುಪಾಯಿ]

ಈ ಮೂಲಕ ಪ್ರತಿನಿತ್ಯ ರೈಲಿನಲ್ಲಿ ಸಂಚರಿಸುವ ಸುಮಾರು 30 ಮಿಲಿಯನ್ ಗೂ ಅಧಿಕ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್ (ಐಆರ್ ಸಿಟಿಸಿ) ಸಿಹಿ ಸುದ್ದಿ ನೀಡಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಆಹಾರ ನೀಡಬಲ್ಲ ಈ ಕೆಫೆಟೇರಿಯಾಗಳಿಗೆ 'ಜನಾಹಾರ' ಎಂದು ಹೆಸರಿಡಲಾಗಿದೆ.

Know about Indian Railways’ Jan Ahaar Cafeteria

ಜನಾಹಾರ ಕೆಫೆ ಸ್ವಸಹಾಯ ಪದ್ಧತಿಯ ಹೊಂದಿರುತ್ತದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿವೆ. 8-12 ಸೀಟಿಂಗ್ ವ್ಯವಸ್ಥೆ ಇರುವ ಈ ಹೊಟೇಲ್​ನಲ್ಲಿ ಎಸಿ ಸೌಲಭ್ಯ ಇರಲಿದ್ದು, ಉಚಿತ ಶುದ್ಧೀಕರಿಸಿದ ನೀರು ಕೂಡ ಲಭ್ಯವಿರಲಿದೆ. ಅಡುಗೆ ಕೋಣೆಗೆ ಗ್ಲಾಸ್​ನ ವಿಭಜಕ ಅಳವಡಿಸಲಾಗುತ್ತದೆ. ಹಾಗಾಗಿ ಗ್ರಾಹಕರು ಅಡುಗೆ ಕೋಣೆಯ ಸ್ವಚ್ಛತೆ ನೋಡಬಹುದಾಗಿದೆ.[ಇ-ಕ್ಯಾಟರಿಂಗ್ ಪಟ್ಟಿಗೆ ಸಾವಿರಾರು ರೈಲುಗಳು ಸೇರ್ಪಡೆ]

ಆಹಾರದ ಶುದ್ಧತೆ ಬಗ್ಗೆ ಪ್ರಯಾಣಿಕರು ಸಚಿವ ಸುರೇಶ್ ಪ್ರಭು ಅವರಿಗೆ ದೂರು ನೀಡಿದ ಬಗ್ಗೆ ಟ್ವೀಟ್.

* 24X7 ಕಾರ್ಯ ನಿರ್ವಹಿಸುವ ಹೋಟೆಲ್ ಗಳಾಗಿವೆ.
* ಜನತಾ ಊಟ, ಎಕಾನಮಿ ಊಟ, ಪ್ರಾದೇಶಿಕ ವಿಶೇಷ ಊಟ ಸಿಗಲಿದೆ. ಗರಿಷ್ಠ ದರ 20 ರು ಆಗಲಿದೆ.
* ಇದರಲ್ಲಿ ಊಟ ಮತ್ತು ಸ್ಥಳೀಯ ಆಹಾರಗಳ ಜತೆಗೆ ಐಸ್ಕ್ರೀಂ, ಜ್ಯೂಸ್, ಟೀ, ಕಾಫಿ ಕೂಡ ಲಭ್ಯವಿರಲಿದೆ.

English summary
Jan Ahaar Cafeteria: The Indian Railway Catering and Tourism Corporation (IRCTC) has set up low-cost cafeterias in railway stations all over the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X