• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭರ್ಜರಿ ಶತಕ ಸಿಡಿಸಿದ ಕೆ.ಎಲ್ ರಾಹುಲ್: ಸಚಿನ್ ದಾಖಲೆ ನೆಲಸಮ

|

ದುಬೈ, ಸೆಪ್ಟೆಂಬರ್ 24: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್ ಪಂಜಾಬ್ ನಾಯಕ, ಕನ್ನಡಿಗ ಕೆ.ಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿದ್ದಾನೆ.

ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಕಿಂಗ್ಸ್‌ ಇಲೆವೆನ್ ಪಂಜಾಬ್‌ ಪರ ನಾಯಕ ಕೆ.ಎಲ್ ರಾಹುಲ್ ಭರ್ಜರಿ ಆಟವಾಡಿದ್ರು. ತಂಡವನ್ನ ಆರಂಭದಿಂದಲೂ ಉತ್ತಮವಾಗಿ ಮುನ್ನಡಿಸಿದ ಕೆ.ಎಲ್ ಮೈದಾನದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದರು.

ಕೇವಲ 62 ಎಸೆತಗಳಲ್ಲಿ ಶತಕ ಪೂರೈಸಿದ ಕೆ.ಎಲ್ ರಾಹುಲ್ ಇನ್ನಿಂಗ್ಸ್‌ನಲ್ಲಿ 7 ಭರ್ಜರಿ ಸಿಕ್ಸರ್ ಮತ್ತು 13 ಆಕರ್ಷಕ ಬೌಂಡರಿಗಳಿದ್ದವು. ರಾಹುಲ್‌ರ ಈ ಶತಕವು ಐಪಿಎಲ್ 13ನೇ ಆವೃತ್ತಿಯಲ್ಲಿ ಮೊದಲ ಶತಕವಾಗಿದೆ. ರಾಹುಲ್‌ಗೆ ಇದು ವೈಯಕ್ತಿಕವಾಗಿ ಎರಡನೇ ಐಪಿಎಲ್ ಶತಕವಾಗಿದೆ. ಅಲ್ಲದೆ ಐಪಿಎಲ್‌ನಲ್ಲಿ ವೇಗವಾಗಿ 2,000ರನ್ ಪೂರೈಸಿದ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆ ನೆಲಸಮವಾಗಿದೆ.

ಅಂತಿಮವಾಗಿ ರಾಹುಲ್ 69 ಎಸೆಗಳಲ್ಲಿ 139 ರನ್ ಸಿಡಿಸಿದ್ದು, ಐಪಿಎಲ್‌ನಲ್ಲಿ ನಾಯಕನಾಗಿ ಗರಿಷ್ಠ ರನ್‌ ಸಿಡಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾನೆ. ಜೊತೆಗೆ ಇನ್ನಿಂಗ್ಸ್‌ವೊಂದರಲ್ಲಿ ಭಾರತದ ಯಾವುದೇ ಕ್ರಿಕೆಟಿಗನ ಗರಿಷ್ಟ ರನ್ ಇದಾಗಿದೆ.

ಕೆ.ಎಲ್ ರಾಹುಲ್ ಅಜೇಯ ಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ 3 ವಿಕೆಟ್ ನಷ್ಟಕ್ಕೆ 206ರನ್‌ಗಳಿಸಿದ್ದು ಆರ್‌ಸಿಬಿಗೆ 207ರನ್ ಟಾರ್ಗೆಟ್ ನೀಡಿದೆ.

English summary
Kings XI Punjab (KXIP) skipper KL Rahul on Thursday hits Season's First Century and also became the fastest Indian to score 2000 runs in the IPL and broke Sachin Tendulkar's record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X