ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಪ್ರದೇಶದ ರಾಜ್ಯಪಾಲರಾಗಿ ಕಿರಣ್ ಬೇಡಿ ನೇಮಕ?

|
Google Oneindia Kannada News

Recommended Video

ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ಕಿರಣ್ ಬೇಡಿ ನೇಮಕವಾಗುವ ಸಾಧ್ಯತೆ | Oneindia Kannada

ನವದೆಹಲಿ, ಮಾರ್ಚ್ 25 : ಕಿರಣ್ ಬೇಡಿ ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ನೇಮಕವಾಗುವ ಸಾಧ್ಯತೆ ಇದೆ. ಪ್ರಸ್ತುತ ಇ.ಎಸ್‌.ಎಲ್.ನರಸಿಂಹನ್ ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಆಂಧ್ರಪ್ರದೇಶಕ್ಕೆ ನೂತನ ರಾಜ್ಯಪಾಲರನ್ನು ನೇಮಕ ಮಾಡಬೇಕು ಎಂಬ ಬೇಡಿಕೆ ಕೇಂದ್ರ ಸರ್ಕಾರದ ಮುಂದಿದೆ. ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಿ.ವಿ.ಎಸ್.ಶರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಿಸುವ ಸಾಧ್ಯತೆ ಇದೆ.

ಅಮಿತ್ ಶಾ ಪತ್ರದ ತುಂಬ ಸುಳ್ಳಿನ ಕಂತೆ: ಚಂದ್ರಬಾಬು ನಾಯ್ಡುಅಮಿತ್ ಶಾ ಪತ್ರದ ತುಂಬ ಸುಳ್ಳಿನ ಕಂತೆ: ಚಂದ್ರಬಾಬು ನಾಯ್ಡು

ಬಿಜೆಪಿಯ ಕೆ.ಹರಿಬಾಬು ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ನೂತನ ರಾಜ್ಯಪಾರನ್ನು ನೇಮಕ ಮಾಡುವಂತೆ ಪತ್ರ ಬರೆದಿದ್ದಾರೆ. ಇ.ಎಸ್‌.ಎಲ್.ನರಸಿಂಹನ್ ಆಂಧ್ರಪ್ರದೇಶಕ್ಕೆ ಸೂಕ್ತ ನ್ಯಾಯ ಒದಗಿಸುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Kiran Bedi tipped to be new Andhra Pradesh Governor

ಕಿರಣ್ ಬೇಡಿ ಅವರು ಪ್ರಸ್ತುತ ಪುದುಚೇರಿಯ ಲೆಫ್ಟಿನೆಂಟ್ ಗೌರ್ನರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಅವರನ್ನು ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ನೇಮಿಸುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ಆಂಧ್ರಪ್ರದೇಶದ ನೂತನ ರಾಜಧಾನಿ ನಿರ್ಮಾಣಕ್ಕೆ ನೀಡಿದ ಅನುದಾನವನ್ನು ಸೂಕ್ತವಾಗಿ ಬಳಕೆ ಮಾಡಿಲ್ಲ ಎಂಬ ಆರೋಪಗಳಿವೆ. ಇಂತಹ ಸಮಯದಲ್ಲಿ ಖಡರ್ ರಾಜ್ಯಪಾರನ್ನು ನೇಮಕ ಮಾಡಲು ಕೇಂದ್ರ ಮುಂದಾಗಿದೆ.

ಆಂಧ್ರಪ್ರದೇಶದಲ್ಲಿ ನೂತನ ರಾಜಭವನ ಇನ್ನೂ ನಿರ್ಮಾಣವಾಗಿಲ್ಲ. ನೂತನ ರಾಜ್ಯಪಾಲರ ನೇಮಕಕ್ಕೆ ಇದು ಅಡ್ಡಿಯಾಗುವುದಿಲ್ಲ. ತಾತ್ಕಾಲಿಕ ನಿವಾಸದಲ್ಲಿ ಅವರು ವಾಸ್ತವ್ಯ ಹೂಡಬಹುದು ಎಂಬುದು ಕೇಂದ್ರದ ನಿಲುವಾಗಿದೆ.

English summary
Kiran Bedi is likely to be the next Governor of Andhra Pradesh. There has been a demand to appoint a new Governor for AP as E S L Narasimhan has been doubling up as the Telangana Governor as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X