ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಗೆ ನನ್ನ ಮತ: ಬೇಡಿ

By Mahesh
|
Google Oneindia Kannada News

ನವದೆಹಲಿ, ಜ.9: ಸಾಮಾಜಿಕ ಕಾರ್ಯಕರ್ತ, ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರ ತಂಡದ ಪ್ರಮುಖ ಸದಸ್ಯೆ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಮೋದಿ ಅವರಿಗೆ ಮತ ಹಾಕುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕಿರಣ್ ಬೇಡಿ ಅವರು ನಿನ್ನೆ ತಡರಾತ್ರಿ ಬಿಜೆಪಿ ಪ್ರಧಾನಿ ಅಭ್ಯರ್ಥಿಗೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದಾರೆ. ಸ್ಥಿರ ಹಾಗೂ ಉತ್ತಮ ಸರ್ಕಾರಕ್ಕಾಗಿ ನನ್ನ ಮತ ಮೋದಿಗೆ ಎಂದು ಕಿರಣ್ ಬೇಡಿ ಟ್ವಿಟ್ ಮಾಡಿದ್ದಾರೆ. ಬೇಡಿ ಬೆಂಬಲಕ್ಕೆ ಬಿಜೆಪಿ ಹರ್ಷ ವ್ಯಕ್ತಪಡಿಸಿದ್ದರೆ, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು ತೊಂದರೆ ಏನಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮೋದಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಮತ್ತು ಗುಜರಾತಿನಲ್ಲಿ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ಜನತೆಗೆ ಸ್ಪಷ್ಟ ಸಂದೇಶ ನೀಡಿದಂತಾಗಿದೆ ಎಂದು ಕಿರಣ್ ಬೇಡಿ ಅವರು ಕಳೆದ ವರ್ಷ ಅಹಮದಾಬಾದಿನಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

"ನನಗೆ ಭಾರತವೇ ಮೊದಲು! ಸ್ಥಿರವಾಗಿರುವ, ಉತ್ತಮ ಆಡಳಿತವಿರುವ, ಪಾರದರ್ಶಕವಾಗಿರುವ, ಸಮಗ್ರತೆ ಇರುವ ಸರ್ಕಾರ ಬೇಕು. ಒಬ್ಬ ಸ್ವತಂತ್ರ ಮತದಾರನಾಗಿ ನಮೋಗೇ ನನ್ನ ಮತ" ಎಂದು ಕಿರಣ್ ಬೇಡಿ ಟ್ವೀಟ್ ಮಾಡಿದ್ದಾರೆ. ಹಲವಾರು ಗಣ್ಯರು ಆಮ್ ಆದ್ಮಿ ಪಕ್ಷದ ಪೊರಕೆ ಹಿಡಿಯುತ್ತಿರುವಾಗ ರಾಜಕೀಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದ ಬೇಡಿ ಅವರು ಮೋದಿ ಅವರಿಗೆ ಬೆಂಬಲ ಘೋಷಿಸಿರುವುದು ಕುತೂಹಲ ಕೆರಳಿಸಿದೆ. ಕಿರಣ್ ಬೇಡಿ ಅವರ ಟ್ವೀಟ್ ಹಾಗೂ ಅದಕ್ಕೆ ಬಂದಿರುವ ಪ್ರತಿ ಟ್ವೀಟ್ ಗಳತ್ತ ಮುಂದೆ ಓದಿ...

ಮೋದಿ ಪರ ಕಿರಣ್ ಬೇಡಿ ಅವರ ಟ್ವೀಟ್

ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಪರ ಕಿರಣ್ ಬೇಡಿ ಅವರ ಮಾಡಿರುವ ಟ್ವೀಟ್

ಸದಾ ರಾಜಕೀಯದಿಂದ ದೂರ ಇದ್ದ ಕಿರಣ್

ಸದಾ ರಾಜಕೀಯದಿಂದ ದೂರ ಇದ್ದ ಕಿರಣ್

ಅಣ್ಣಾ ಹಜಾರೆಯವರ ಜನಲೋಕಪಾಲ್ ಆಂದೋಲನದಲ್ಲಿ ಮೊದಲಿನಿಂದಲೂ ಸಕ್ರಿಯವಾಗಿದ್ದ ಕಿರಣ್ ಬೇಡಿಯವರು ಇನ್ನೂ ಕೂಡ ಯಾವುದೇ ಪಕ್ಷಕ್ಕೆ ವಾಲಿಕೊಂಡಿರಲಿಲ್ಲ ಅದರೆ, ಬಿಜೆಪಿ ಪರ ಸದಾ ನಿಲುವು ಹೊಂದಿದ್ದರು.

ಅರವಿಂದ್ ಕೇಜ್ರಿವಾಲ್ ಮತ್ತವರ ಬೆಂಬಲಿಗರು ಅಣ್ಣಾ ಹಜಾರೆ ತಂಡದಿಂದ ಸಿಡಿದು ಆಮ್ ಆದ್ಮಿ ಪಕ್ಷ ಕಟ್ಟಿಕೊಂಡಾಗಲೂ ಕಿರಣ್ ಬೇಡಿ ಹಾಗೂ ಇನ್ನೂ ಹಲವರು ಅಣ್ಣಾ ಟೀಮ್'ನಲ್ಲೇ ಉಳಿದುಕೊಂಡಿದ್ದಾರೆ. ಕರ್ನಾಟಕದ ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಇತ್ತೀಚೆಗೆ ರಾಜಕೀಯ ಸೇರುವುದಿಲ್ಲ ಎಂದು ಸ್ಪಷನೆ ನೀಡಿದ್ದರು.

ದೆಹಲಿಯಲ್ಲಿ ಆಮ್ ಆದ್ಮಿ ಮತ್ತು ಬಿಜೆಪಿ ಮೈತ್ರಿಕೂಟ ಸರ್ಕಾರ ರಚನೆ ಬಗ್ಗೆ ಬೇಡಿ ಸೂಚಿಸಿದ್ದರು. ಆದರೆ, ಅರವಿಂದ್ ಕಾಂಗ್ರೆಸ್ ಜತೆ ಕೈಜೋಡಿಸಿದರು.

ಮೋದಿ ಪರ ಕಿರಣ್ ಬೇಡಿ ನಿಂತಿದ್ದೇಕೆ?

ಮೋದಿ ಪರ ಕಿರಣ್ ಬೇಡಿ ನಿಂತಿದ್ದೇಕೆ?

ನರೇಂದ್ರ ಮೋದಿ ಅವರು ಗುಜರಾತಿನಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಆಯ್ಕೆಯಾಗಿದ್ದರಿಂದ ಮತದಾರರ ಮುಂದೆ ಸ್ಪಷ್ಟ ಚಿತ್ರಣವೊಂದು ಸಿಕ್ಕಿದೆ ಎಂದು ಕಿರಣ್ ಬೇಡಿ ಭಾಷಣದ ವೇಳೆ ಹೇಳಿದ್ದರು. ಸದಾ ಕಾಲ ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಹೊಗಳುತ್ತಿದ್ದರು.

ಸುಬ್ರಮಣ್ಯಸ್ವಾಮಿ ಟ್ವೀಟ್

ಸುಬ್ರಮಣ್ಯಸ್ವಾಮಿ ಟ್ವೀಟ್

ಇತ್ತೀಚೆಗೆ ಬಿಜೆಪಿಯೊಂದಿಗೆ ಜನತಾ ಪಕ್ಷ ವಿಲೀನವಾದ ಬಳಿಕ ಬಿಜೆಪಿಯ ಧ್ವನಿಗೆ ಬಲ ತಂದುಕೊಟ್ಟಿರುವ ಸುಬ್ರಮಣ್ಯಸ್ವಾಮಿ ಇಂದು ಕಿರಣ್ ಬೇಡಿಯನ್ನ ಪಕ್ಷಕ್ಕೆ ಸೇರಿಸಿಕೊಂಡರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಜನರಲ್ ವಿ.ಕೆ.ಸಿಂಗ್ ಮತ್ತು ಕಿರಣ್ ಬೇಡಿಯವರನ್ನ ಬಿಜೆಪಿಗೆ ಆಹ್ವಾನಿಸಬೇಕೆಂದು ಸ್ವಾಮಿಯವರು ಟ್ವೀಟ್ ಮೂಲಕ ಕರೆನೀಡಿದ್ದಾರೆ.

ಬೇಡಿ ಟ್ವೀಟ್ ಹಿಂದೆ ಬಿದ್ದಿರುವ ಬಿಜೆಪಿ

ಬೇಡಿ ಟ್ವೀಟ್ ಹಿಂದೆ ಬಿದ್ದಿರುವ ಬಿಜೆಪಿ ಟ್ವೀಟ್, ರೀ ಟ್ವೀಟ್ ಲೆಕ್ಕ ಹೇಳುತ್ತಿದ.

ಹೇಗಿದೆ ನೋಡಿ ಈ ಪ್ರತಿಕ್ರಿಯೆ

ಕಿರಣ್ ಬೇಡಿ ಅವರು ಮೋದಿ ಬೆಂಬಲಿಸಿದ್ದಕ್ಕೆ ಭಾರತ ರತ್ನ ವಾಪಸ್ ಮಾಡಲಿ... ಓಹ್ ಇನ್ನೂ ಭಾರತ ರತ್ನ ಸಿಕ್ಕಿಲ್ಲವೇ?.

ಈ ಬಾರಿ ಚುನಾವಣೆ ಫುಲ್ ಮಜಾ ಇರುತ್ತೆ

ಈ ಬಾರಿ ಚುನಾವಣೆ ಫುಲ್ ಮಜಾ ಇರುತ್ತೆ ಯಾರು ಯಾರಿಗೆ ಬೆಂಬಲ ಕೊಡುತ್ತಾರೆ? ಯಾಕೆ ಕೊಡುತ್ತಾರೆ? ಕುತೂಹಲಕಾರಿ

ಮೋದಿಗೆ ಬೇಡಿ ಬೆಂಬಲ ಏಕೆ?

ಮೋದಿಗೆ ಬೇಡಿ ಬೆಂಬಲ ಏಕೆ? ಅಧಿಕಾರ ಅವಧಿಯಲ್ಲಿ ಅನೇಕ ಅಸಂವಿಧಾನಾತ್ಮಕ ಕೃತ್ಯಗಳನ್ನು ಮಾಡಿರುವ ಮೋದಿಗೆ ಮಾಜಿ ಐಪಿಎಸ್ ಅಧಿಕಾರಿ ಬೆಂಬಲ!

English summary
Endorsing the BJP's prime ministerial candidate, former IPS officer and Anna Hazare's key aide Kiran Bedi today said Narendra Modi can provide stable, accountable and inclusive government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X