ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರಾಶಾಹಿ ಕಿಂಗ್ ಫಿಶರ್ ಸಿಬ್ಬಂದಿ ಕೇಜ್ರೀವಾಲಾಗೆ ಮೊರೆ

By Srinath
|
Google Oneindia Kannada News

Kingfisher Airlines employees to send sos to Arvind Kejriwal for salaries
ಮುಂಬೈ, ಡಿ. 30: ಅತ್ತ, ಆರ್ಥಿಕ ಅಂಧಃಪತನದ ನಡುವೆಯೂ ಕಣ್ಣಿಗೆ ಬಣ್ಣದ ಕನ್ನಡದ ಧರಿಸಿಕೊಂಡು ಮನ್ಯ ಸಾಹೇಬರು ಕಿಂಗ್ ಫಿಶರ್ ಏರ್ ಲೈನ್ಸ್ ವಾರ್ಷಿಕ ಕ್ಯಾಲೆಂಡರನ್ನು ಹೊರತಂದಿದ್ದರೆ ಇತ್ತ ಧರಾಶಾಹಿಯಾಗಿರುವ ಅದೇ ಕಿಂಗ್ ಫಿಶರ್ ಏರ್ ಲೈನ್ಸ್ ಸಿಬ್ಬಂದಿ ದಿಲ್ಲಿಯ ನೂತನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾ ಅವರ ಮೊರೆಹೋಗಲು ನಿರ್ಧರಿಸಿದ್ದಾರೆ.

ಇದು ಸ್ವಲ್ಪ ವಿಚಿತ್ರವೆನಿಸಿದರೂ ಕಹಿವಾಸ್ತವವಾಗಿದೆ. ಹಾಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾ ಅವರು ಇದ್ದಕ್ಕಿಂದ್ದಂತೆ ಆಶಾಕಿರಣವಾಗಿ ಹೊಮ್ಮಿದ್ದು, ದೇಶದಲ್ಲಿ ಅಷ್ಟೂ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲರು ಎಂದೆನಿದ್ದು, ಎಲ್ಲರೂ ಕೇಜ್ರಿವಾಲಾರತ್ತ ಮುಖ ಮಾಡಿದ್ದಾರೆ.
(ಆಮ್‌ ಆದ್ಮಿ ಕೇಜ್ರಿವಾಲಾ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ದಿನ)

ಈ ಹಿನ್ನೆಲೆಯಲ್ಲಿ ವಿಮಾನಗಳಲ್ಲಿ ಹಾರಾಡುತ್ತಿದ್ದ ಕಿಂಗ್ ಫಿಶರ್ ಏರ್ ಲೈನ್ಸ್ ಸಿಬ್ಬಂದಿ ಸುಮಾರು ಒಂದೂವರೆ ವರ್ಷದಿಂದ ಸಂಬಳಗಳೂ ಇಲ್ಲದೇ ತ್ರಿಶಂಕು ಸ್ಥಿತಿಯಲ್ಲಿರುವಾಗ ಅರವಿಂದ್ ಕೇಜ್ರಿವಾಲಾಗೆ SOS ಸಂದೇಶ ಕಳಿಸಲು ಮುಂದಾಗಿದ್ದಾರೆ.

ಕಿಂಗ್ ಫಿಶರ್ ಏರ್ ಲೈನ್ಸ್ ನಲ್ಲಿ 2000ಕ್ಕೂ ಹೆಚ್ಚು ಸಿಬ್ಬಂದಿ ಇಂತಹ ದುರ್ಭರ ಪರಿಸ್ಥಿತಿಯಲ್ಲಿದ್ದು, ಅವರ ಪೈಕಿ ದಿಲ್ಲಿಯಲ್ಲಿರುವ 500 ಮಂದಿ ತಮ್ಮ ನೂತನ ಮುಖ್ಯಮಂತ್ರಿಯಲ್ಲಿ ಭರವಸೆಯ ಬೆಳಕು ಕಂಡಿದ್ದಾರೆ.

ಗಮನಾರ್ಹವೆಂದರೆ ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಮಂದಿಗೆ ಸಮಸ್ಯೆ ಬಗೆಬರಿಸುವಂತೆ ಅಲವತ್ತುಕೊಂಡಿದ್ದೆವು. ಆದರೆ ಅದು ಅವರ ಕಿವಿಗಳಿಗೆ ಬಳಲಿಲ್ಲ. ಈಗ ನೋಡೋಣ ನಮ್ಮ ಲಕ್ಕು ಚೆನ್ನಾಗಿದ್ದರೆ ಅರವಿಂದರು ನಮ್ಮ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದು ಆಶಿಸಿದ್ದೇವೆ ಎಂದು ದೆಹಲಿ ಮೂಲದ ಸಿಬ್ಬಂದಿಗಳು ಕೈಯಲ್ಲಿ ಅರ್ಜಿ ಇಟ್ಟುಕೊಂಡು ಮುಖ್ಯಮಂತ್ರಿಯ ಮನೆ ಬಾಗಿಲಲ್ಲಿ ನಿಂತಿದ್ದಾರೆ.

ಕೇಜ್ರಿವಾಲಾರು ಭಿನ್ನ ರಾಜಕಾರಣಿಯಾಗಿ ಗೋಚರಿಸುತ್ತಿದ್ದಾರೆ. ಯಾವುದೋ ರೂಪದಲ್ಲಿ ಕೇಜ್ರಿವಾಲಾರು ನಮ್ಮ ಕೈಹಿಡಿಯುತ್ತಾರೆ ಎಂದು ನಂಬಿದ್ದೇವೆ ಎಂದು ಸಿಬ್ಬಂದಿ ಅಲವತ್ತುಕೊಂಡಿದ್ದಾರೆ. ಆರ್ಥಿಕವಾಗಿ ಕಡುಕಷ್ಟಕ್ಕೆ ತುತ್ತಾದ ಕನ್ನಡಿಗ ವಿಜಯ್ ಮಲ್ಯಾರು ಕಳೆದ ಅಕ್ಟೋಬರಿನಲ್ಲಿ ತಮ್ಮ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ. (ಕಿಂಗ್ ಫಿಶರ್ ಕ್ಯಾಲೆಂಡರ್ 2014: ಮೀಂಚುಳ್ಳಿ ದೃಶ್ಯಗಳು )

English summary
Kingfisher Airlines employees to send sos to Arvind Kejriwal for salaries. he employees of the grounded Kingfisher Airlines, who have not been paid their salaries for the past 17 months, said they will seek help from Delhi Chief Minister Arvind Kejriwal in getting their dues.We will now approach Delhi Chief Minister Arvind Kejriwal and seek his help in getting our dues cleared - a Delhi-based Kingfisher Airlines employee has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X