ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗೆ ಸ್ತನ್ಯಪಾನ ಮಾಡಿಸಿ ಶಿಕ್ಷಿಸಿದ ಖಾಪ್ ಪಂಚಾಯತ್

By Kiran B Hegde
|
Google Oneindia Kannada News

ಇಂದೋರ್, ಜ. 3: ಸ್ವಯಂ ನ್ಯಾಯಾಲಯದಂತೆ ವರ್ತಿಸುತ್ತಿರುವ ಖಾಪ್ ಪಂಚಾಯತ್‌ ನೀಡಿದ ತೀರ್ಪೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಪತಿ ಹಾಗೂ ಮಕ್ಕಳನ್ನು ತೊರೆದು ಪ್ರೇಮಿಯೊಂದಿಗೆ ಓಡಿಹೋಗಿದ್ದ ಮಹಿಳೆಯೋರ್ವಳಿಗೆ ಎಲ್ಲರೆದುರು ಪ್ರೇಮಿಗೆ ಮೊಲೆಯುಣಿಸಿ ಮಗನೆಂದು ಸ್ವೀಕರಿಸುವಂತೆ ಆದೇಶಿಸಿದೆ!

ಪ್ರಕರಣದ ವಿವರ : ಮಧ್ಯ ಪ್ರದೇಶ ರಾಜ್ಯದ ಅಲಿರಾಜ್‌ಪುರ ಜಿಲ್ಲೆಯ ಇಂದೋರ್ ನಗರದಿಂದ ಸುಮಾರು 200 ಕಿ.ಮೀ. ದೂರದಲ್ಲಿ ಭಿಲ್ ಜನಾಂಗದವರ ಖಾಪ್ ಪಂಚಾಯತ್ ಇದೆ.

ಇದರ ವ್ಯಾಪ್ತಿಯ ಗ್ರಾಮವೊಂದರ 25 ವರ್ಷ ವಯಸ್ಸಿನ ಮಹಿಳೆ ಎರಡು ತಿಂಗಳುಗಳ ಹಿಂದೆ ತನ್ನ ಪತಿ ಹಾಗೂ ಮೂವರು ಮಕ್ಕಳನ್ನು ತೊರೆದು ಪ್ರೇಮಿಯೊಂದಿಗೆ ಗುಜರಾತ್‌ಗೆ ಓಡಿಹೋಗಿದ್ದಳು. ಇದರಿಂದ ಕ್ರುದ್ಧರಾದ ಗ್ರಾಮಸ್ಥರು ಗುಜರಾತ್‌ಗೆ ಹೋಗಿ ಮಹಿಳೆ ಹಾಗೂ ಯುವಕನನ್ನು ಹುಡುಕಿ ಕರೆತಂದಿದರು. [ಅವಿವೇಕಿ ಪ್ರೇಮಿಗಳಿಗೆ ಕೋರ್ಟ್ ಎಚ್ಚರ]

khap

ಕೂದಲು ಕತ್ತರಿಸಿ ಅವಮಾನಿಸಿದರು : ನಂತರ ಅವರ ತಪ್ಪಿಗೆ ಶಿಕ್ಷೆ ವಿಧಿಸಲು ಗ್ರಾಮಸ್ಥರ ಸಮ್ಮುಖದಲ್ಲಿ ಖಾಪ್ ಪಂಚಾಯತ್ ಮುಖಂಡರು ಸಭೆ ನಡೆಸಿದರು. ಮಹಿಳೆ ಹಾಗೂ ಆಕೆಯ ಪ್ರೇಮಿಗೆ ಛೀಮಾರಿ ಹಾಕಿ ಅವರ ಕೂದಲು ಕತ್ತರಿಸಿ ಅವಮಾನಿಸಲಾಯಿತು. ನಂತರ ಪ್ರೇಮಿಗೆ ಎಲ್ಲರೆದುರು ಮೊಲೆಯುಣಿಸುವಂತೆ ಆದೇಶಿಸಿ, ಇನ್ನು ಮುಂದೆ ಆತನನ್ನು ಮಗನಂತೆ ನೋಡಬೇಕೆಂದು ಸೂಚಿಸಲಾಯಿತು. [ಹುಬ್ಬಳ್ಳಿಯಲ್ಲಿ ಶಿರಸಿ ಪ್ರೇಮಿಗಳ ಆತ್ಮಹತ್ಯೆ]

ಖಾಪ್ ಪಂಚಾಯತ್ ಸಭೆ ಮುಗಿದ ನಂತರ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾಳೆ. ಖಾಪ್ ಮುಖಂಡರಲ್ಲೊಬ್ಬನಾದ ನಕೇಡಿಯಾ ಹೆಸರು ಹೇಳಿದ್ದು, ಇನ್ನೂ 11 ಜನರ ವಿರುದ್ಧ ದೂರು ನೀಡಿದ್ದಾಳೆ. ಪೊಲೀಸರು ಹಲವು ಶಂಕಿತರನ್ನು ವಶಕ್ಕೆ ಪಡೆದಿದು ವಿಚಾರಣೆ ನಡೆಸುತ್ತಿದ್ದಾರೆ. [ಗಂಡ-ಹೆಂಡತಿ ಆತ್ಮಹತ್ಯೆ]

ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಭಿಲ್ ಸಮುದಾಯವು ತಮ್ಮದೇ ಕಾನೂನುಗಳನ್ನು ಪಾಲಿಸುತ್ತದೆ. ಇವರೇ ರಚಿಸಿಕೊಂಡಿರುವ ಖಾಪ್ ಪಂಚಾಯತ್ ಎಲ್ಲ ವಿವಾದಗಳ ಕುರಿತು ತೀರ್ಪು ನೀಡುತ್ತದೆ. ಅತ್ಯಾಚಾರ ಸಂಭವಿಸಿದರೆ 3 ರಿಂದ 5 ಲಕ್ಷ ರು. ವರೆಗೆ ದಂಡ ವಿಧಿಸುವ ಪದ್ಧತಿಯೂ ಅವರಲ್ಲಿದೆ.

ಹಲವು ಪ್ರಕರಣಗಳು : ಹಿಂದೂಗಳ ಖಾಪ್ ಪಂಚಾಯತ್ ಹಾಗೂ ಮುಸ್ಲಿಂ ಧಾರ್ಮಿಕ ಮುಖಂಡರ ಹಲವು ತೀರ್ಪುಗಳು ವಿವಾದಕ್ಕೀಡಾಗಿವೆ. [ಕೇರಳದಿಂದ ಇಲ್ಲಿಗೆ ಬಂದು ಆತ್ಮಹತ್ಯೆ ಶರಣಾದರು]

ಉತ್ತರ ಪ್ರದೇಶ ರಾಜ್ಯದ ಹಳ್ಳಿಯೊಂದರಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯೋರ್ವಳ ಮೇಲೆ ಆಕೆಯ ಮಾವನೇ (ಪತಿಯ ತಂದೆ) ಅತ್ಯಾಚಾರಗೈದಿದ್ದ. ಆಗ ಧಾರ್ಮಿಕ ಮುಖಂಡರು ಸಭೆ ನಡೆಸಿ ಅತ್ಯಾಚಾರಕ್ಕೊಳಗಾದ ಮಹಿಳೆ ಇನ್ನು ಮುಂದೆ ಮಾವನನ್ನು ಪತಿಯಂತೆ ಹಾಗೂ ಪತಿಯನ್ನು ಮಗನೆಂದು ಪರಿಗಣಿಸಬೇಕೆಂದು ಆದೇಶಿಸಿದ್ದರು. ಈ ತೀರ್ಪಿನ ವಿರುದ್ಧ ಸಂತ್ರಸ್ತ ಮಹಿಳೆ ನ್ಯಾಯಾಲಯದ ಮೆಟ್ಟಿಲೇರಿದಾಗ ವಿಷಯ ದೇಶಾದ್ಯಂತ ಚರ್ಚೆಗೊಳಗಾಗಿತ್ತು.

English summary
In a khap panchayat in Madhya Pradesh's Alirajpur district, a 25-year old married woman was forced to breastfeed her lover with whom she had eloped. The woman and the man eloped to Gujarat, which borders Alirajpur, a few days ago. Following this, the villagers nabbed them and brought them to the Panchayat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X