ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲ: ವಿಧಾನಸಭೆಯ ಮುಖ್ಯ ದ್ವಾರಕ್ಕೆ ಖಲಿಸ್ತಾನ್ ಧ್ವಜ ಹಾರಿಸಿದ ಕಿಡಿಗೇಡಿಗಳು

|
Google Oneindia Kannada News

ಚಂಡೀಗಢ ಮೇ 08. ಹಿಮಾಚಲ ಪ್ರದೇಶದ ವಿಧಾನಸಭೆಯ ಮುಖ್ಯ ದ್ವಾರದಲ್ಲಿ ಇಂದು ಬೆಳಗ್ಗೆ ಖಲಿಸ್ತಾನದ ಧ್ವಜ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಗಳು ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ದ್ವಾರದ ಮೇಲೆ ಮಾತ್ರವಲ್ಲದೆ ಗೋಡೆಯ ಮೇಲೂ ಖಲಿಸ್ತಾನ್ ಧ್ವಜವನ್ನು ಅಂಟಿಸಿದ್ದಾರೆ. ಆದರೆ ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಮಧ್ಯರಾತ್ರಿ ಅಥವಾ ಬೆಳಗಿನ ಜಾವ ಯಾರೋ ಈ ಕೃತ್ಯ ಎಸಗಿರಬಹುದು ಎಂದು ಕಂಗ್ರಾ ಎಸ್ಪಿ ಕುಶಾಲ್ ಶರ್ಮಾ ಅವರು ಹೇಳಿದ್ದಾರೆ. ಜೊತೆಗೆ ವಿಧಾನಸಭೆಯ ಗೇಟ್‌ನಿಂದ ಖಾಲಿಸ್ತಾನದ ಧ್ವಜವನ್ನು ತೆಗೆಸಿದ್ದಾರೆ. ಇದು ಪಂಜಾಬ್‌ನಿಂದ ಬರುವ ಪ್ರವಾಸಿಗರ ಕೃತ್ಯವಾಗಿರಬಹುದು. ಈ ಸಂಬಂಧ ಇಂದು ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ಶರ್ಮಾ ಹೇಳಿದ್ದಾರೆ.

ವಿಧಾನಸಭೆಯ ಮುಖ್ಯ ದ್ವಾರದಲ್ಲಿ ಖಲಿಸ್ತಾನ್ ಧ್ವಜ ಅಳವಡಿಸಿರುವ ಬಗ್ಗೆ ಮಾಹಿತಿ ಪಡೆದ ಕಂಗ್ರಾ ಪೊಲೀಸರು ಅದನ್ನು ತೆಗೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ಡಾ.ನಿಪುನ್ ಜಿಂದಾಲ್ ಹೇಳಿದ್ದಾರೆ. ಸುತ್ತಮುತ್ತ ಅಳವಡಿಸಿರುವ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದ್ದು, ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Khalistani flags found installed on Himachal Pradesh Assembly gate

ಕೆಲವು ಕಿಡಿಗೇಡಿಗಳು ವಿಧಾನಸಭೆಯ ಗೇಟ್‌ನಲ್ಲಿ 5-6 ಖಲಿಸ್ತಾನಿ ಧ್ವಜಗಳನ್ನು ಹಾರಿಸಿದ್ದಾರೆ ಮತ್ತು ಗೋಡೆಯ ಮೇಲೆ 'ಖಾಲಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಗಳನ್ನು ಬರೆದಿದ್ದಾರೆ. ಧ್ವಜಗಳನ್ನು ತೆಗೆದು ಗೋಡೆಯ ಮೇಲೆ ಬರೆದಿದ್ದ ಘೋಷಣೆಗಳನ್ನು ಸ್ವಚ್ಛಗೊಳಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಳೆದ ತಿಂಗಳು ಏಪ್ರಿಲ್ 26 ರಂದು ಇಂತಹ ಘಟನೆಗಳು ಸಂಭವಿಸಬಹುದು ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು.

Khalistani flags found installed on Himachal Pradesh Assembly gate

ಘಟನೆಯನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಖಂಡಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದಿರುವ ಅವರು, 'ಧರ್ಮಶಾಲಾ ಅಸೆಂಬ್ಲಿ ಕಾಂಪ್ಲೆಕ್ಸ್‌ನ ಗೇಟ್‌ನಲ್ಲಿ ರಾತ್ರಿಯ ಕತ್ತಲೆಯಲ್ಲಿ ಖಾಲಿಸ್ತಾನ ಧ್ವಜವನ್ನು ಹಾರಿಸಿದ ಹೇಡಿತನದ ಘಟನೆಯನ್ನು ನಾನು ಖಂಡಿಸುತ್ತೇನೆ. ಈ ವಿಧಾನಸಭೆಯಲ್ಲಿ ಚಳಿಗಾಲದ ಅಧಿವೇಶನವಷ್ಟೇ ಇರುವುದರಿಂದ ಆ ಸಮಯದಲ್ಲಿ ಇಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳ ಅಗತ್ಯವಿದೆ. ಇದರ ಲಾಭ ಪಡೆದು ಈ ಹೇಡಿತನದ ಘಟನೆ ನಡೆಸಿದ್ದರೂ ಸಹಿಸುವುದಿಲ್ಲ. ಈ ಘಟನೆ ಕುರಿತು ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಮಗೆ ಧೈರ್ಯವಿದ್ದರೆ ರಾತ್ರಿಯ ಕತ್ತಲಲ್ಲಿ ಅಲ್ಲ, ಹಗಲಿನ ಬೆಳಕಿನಲ್ಲಿ ಹೊರಗೆ ಬನ್ನಿ ಎಂದು ನಾನು ಆ ಜನರಿಗೆ ಹೇಳಲು ಬಯಸುತ್ತೇನೆ' ಎಂದಿದ್ದಾರೆ.

English summary
Khalistani flags were found tied to the gates of the Himachal Pradesh Assembly on Sunday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X