ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಫ್‌ಸಿ ಚಿಕನ್ ಅಂದ್ರೆ ಬಾಯಲ್ಲಿ ನೀರು ಬಂತಾ? ವಸಿ ತಾಳಿ!

|
Google Oneindia Kannada News

ನವದೆಹಲಿ, ಜೂ. 26: ಬೇಯಿಸಿದ ಇಲಿಯನ್ನು ಗ್ರಾಹಕರಿಗೆ ನೀಡಿ ಟೀಕೆಗೆ ಗುರಿಯಾಗಿದ್ದ ಕೆಎಫ್ ಸಿಗೆ ಮತ್ತೊಂದು ಮಸಿ ಮೆತ್ತಿಕೊಂಡಿದೆ. ತೆಲಂಗಾಣದ ಕೆಂಟಕಿ ಫ್ರೈಡ್ ಚಿಕನ್ ಸೆಂಟರ್ ಒಂದರ ಆಹಾರದ ಸ್ಯಾಂಪಲ್ ಗಳಲ್ಲಿ ಮಾರಕ ಬ್ಯಾಕ್ಟೀರಿಯಾಗಳು ಇರುವುದು ದೃಢವಾಗಿದೆ.

ಕೆಎಫ್ ಸಿ ಯಲ್ಲಿ ಕೆಲ ಖಾದ್ಯಗಳಲ್ಲಿ ಮಾರಕ ರೋಗಾಣುಗಳಾದ ಸಾಲ್ಮೋನೆಲ್ಲಾ ಹಾಗೂ ಇ ಕೊಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಈ ಎರಡು ಬ್ಯಾಕ್ಟೀರಿಯಾಗಳು ಮಾರಕವಾಗಿದ್ದು, ಮಾನವ ದೇಹ ಸೇರಿದರೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತವೆ ಎಂದು ತೇಲಂಗಾಣದ ಆಹಾರ ತಜ್ಞೆ ಎವಿ ಕೃಷ್ಣ ಕುಮಾರಿ ಮಾಹಿತಿ ನೀಡಿದ್ದಾರೆ.[ಮ್ಯಾಗಿ ಮುಗಿಯಿತು, ಈಗ ಕೆಎಫ್ ಸಿ ನಿಷೇಧಕ್ಕೆ ಮನವಿ]

food

ಕೆಎಫ್ ಸಿ ವಿರುದ್ಧ ಎನ್ ಜಿಒ ಸಂಸ್ಥೆಯೊಂದು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಆಹಾರವನ್ನು ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಪತ್ತೆಯಾದ ರೋಗಾಣುಗಳು ಗ್ಯಾಸ್ಟ್ರಿಕ್, ಟೈಪಾಯಿಡ್ ಹರಡಲು ಕಾರಣವಾಗುತ್ತವೆ. ಇವು ಬೇಯಿಸದ ಮಾಂಸ, ಸೀಫುಡ್ ಬೇಯಿಸದ ಮೊಟ್ಟೆ ಹಾಗೂ ತೊಳೆಯದ ಹಣ್ಣು ಮತ್ತು ತರಕಾರಿಗಳಲ್ಲಿ ಕಂಡು ಬರುತ್ತದೆ ಎಂದು ಕೃಷ್ಣ ಕುಮಾರಿ ತಿಳಿಸಿದ್ದಾರೆ.[ಕಿಸ್ ಆಫ್ ಕಿಲೋ ಗಟ್ಟಲೇ ಬ್ಯಾಕ್ಟೀರಿಯಾ...]

ಆದರೆ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಕೆಎಫ್ ಸಿ, ನಮಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನೇ ಸರಬರಾಜು ಮಾಡುತ್ತಿದ್ದೇವೆ. 170 ಡಿಗ್ರಿ ಉಷ್ಣತೆಯಲ್ಲಿ ಆಹಾರವನ್ನು ತಯಾರು ಮಾಡಲಾಗುತ್ತಿದ್ದು ಬ್ಯಾಕ್ಟೀರಿಯಾ ಉಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.

English summary
American company Kentucky Fried Chicken (KFC) has landed itself in yet another trouble. Reportedly, harmful bacteria has been found in its sample. This has come to fore days after KFC faced allegation of serving its customer "fried rat". Later it was found that KFC had served chicken only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X