• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ-ಚೀನಾದ ಕಾರ್ಪ್ ಕಮಾಂಡರ್ ಹಂತದ 6ನೇ ಸಭೆ

|

ನವದೆಹಲಿ, ಸಪ್ಟೆಂಬರ್.21: ಭಾರತ-ಚೀನಾ ಪೂರ್ವ ಭಾಗದಲ್ಲಿರುವ ಲಡಾಖ್ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದ ಬೆನ್ನಲ್ಲೇ ಉಭಯ ರಾಷ್ಟ್ರಗಳ ಕಾರ್ಪ್ ಕಮಾಂಡರ್ ಹಂತದ ಉನ್ನತ ಮಟ್ಟದ ಸಭೆಯು ಸೋಮವಾರ ಬೆಳಗ್ಗೆ 9 ಗಂಟೆಗೆ ನಡೆಯಲಿದೆ.

ಮೊದಲ ಬಾರಿಗೆ ಉನ್ನತ ಮಟ್ಟದ ಕಾರ್ಪ್ ಕಮಾಂಡರ್ ಸಭೆಯಲ್ಲಿ ಭಾರತೀಯ ಕೇಂದ್ರ ಸರ್ಕಾರದ ಪ್ರತಿನಿಧಿಯೊಬ್ಬರು ಭಾಗಿಯಾಗಲಿದ್ದಾರೆ. ಭಾರತದ ಕಡೆಯಿಂದ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಚೀನಾದ ಪ್ರತಿನಿಧಿಯಾಗಿ ಪೀಪಲ್ಸ್ ಲಿಬರೇಷನ್ ಆರ್ಮಿಯ ಮೇಜರ್ ಜನರಲ್ ಲಿನ್ ಲಿಯು ಸಭೆಯಲ್ಲಿ ಭಾಗಿಯಾಗಿ ಚರ್ಚೆ ನಡೆಸಲಿದ್ದಾರೆ.

20 ದಿನದಲ್ಲೇ ಗಡಿ 6 ಎತ್ತರದ ಪ್ರದೇಶಗಳ ಮೇಲೆ ಭಾರತದ ಹಿಡಿತ!

ಭಾರತದ ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ನವಿನ್ ಶ್ರೀವಾಸ್ತವ್, ಮೇಜರ್ ಜನರಲ್ ಅಭಿಜಿತ್ ಬಾಪತ್ ಮತ್ತು ಮೇಜರ್ ಜನರಲ್ ಪದಮ್ ಶೆಖಾವತ್ ರನ್ನೊಳಗೊಂಡ ನಿಯೋಗ ಕೂಡಾ ಸೋಮವಾರದ ಸಭೆಯಲ್ಲಿ ಭಾಗಿಯಾಗಲಿದೆ.

ಇಂಡೋ-ಟಿಬೆಟಿಯನ್ ಪೊಲೀಸ್ ಇನ್ಸ್ ಪೆಕ್ಟರ್

ಇಂಡೋ-ಟಿಬೆಟಿಯನ್ ಪೊಲೀಸ್ ಇನ್ಸ್ ಪೆಕ್ಟರ್

ಭಾರತ ಮತ್ತು ಚೀನಾ ಸೇನೆಗಳ ಉನ್ನತ ಮಟ್ಟದ ಸಭೆಯಲ್ಲಿ ಇಂಡೋ-ಟಿಬೆಟಿನ್ ಬಾರ್ಡರ್ ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ದೀಪಮ್ ಸೇಠ್ ಕೂಡಾ ಸೋಮವಾರ ನಡೆಯಲಿರುವ ಸಭೆಯಲ್ಲಿ ಭಾರತದ ನಾಲ್ಕು ಬ್ರಿಗೇಡಿಯರ್ ಪೈಕಿ ಒಬ್ಬರಾಗಿ ಭಾಗಿಯಾಗಲಿದ್ದಾರೆ.

ಭಾರತ-ಚೀನಾ ನಡುವಿನ ಸಂಘರ್ಷದ ಕೇಂದ್ರ ಬಿಂದು

ಭಾರತ-ಚೀನಾ ನಡುವಿನ ಸಂಘರ್ಷದ ಕೇಂದ್ರ ಬಿಂದು

ಉನ್ನತ ಮಟ್ಟದ ಸಭೆಯು ಕೇವಲ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿದ್ದಲ್ಲ. ಬದಲಿಗೆ ಉಭಯ ರಾಷ್ಟ್ರಗಳ ನಡುವಿನ ಸೇನಾ ಸಂಘರ್ಷದ ಕೇಂದ್ರ ಬಿಂದು ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರದಿಂದ ದಕ್ಷಿಣದ ವರೆಗೂ ಇದೆ. ಈ ಬಗ್ಗೆ ಇಂದಿನ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳಲು ಚೀನಾ ಕಾರಣ

ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳಲು ಚೀನಾ ಕಾರಣ

ಸೋಮವಾರ ನಡೆಯುವ ಕಾರ್ಪ್ ಕಮಾಂಡರ್ ಹಂತದ ಸಭೆಯಲ್ಲಿ ಚೀನಾದ ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸ ಆಗುವ ಸಾಧ್ಯತೆಗಳಿವೆ. ಕಳೆದ ಆಗಸ್ಟ್ ತಿಂಗಳಾಂತ್ಯದಿಂದ ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಭಾಗದಲ್ಲಿ ಚೀನಾ ತನ್ನ ಸೇನಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿದೆ. ಪೀಪಲ್ಸ್ ಲಿಬರೇಷನ್ ಆರ್ಮಿಯ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದೆ. ಈ ಬಗ್ಗೆ ಸಭೆಯಲ್ಲಿ ಭಾರತೀಯ ಸೇನೆಯು ಮುಖ್ಯವಾಗಿ ಚರ್ಚೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.

ಚೀನಾ ಸೇನೆ ನಿಷ್ಕ್ರಿಯಗೊಳಿಸಲು ಭಾರತದ ಒತ್ತಾಯ

ಚೀನಾ ಸೇನೆ ನಿಷ್ಕ್ರಿಯಗೊಳಿಸಲು ಭಾರತದ ಒತ್ತಾಯ

ಭಾರತ ಮತ್ತು ಚೀನಾ ನಡುವಿನ ಗಾಲ್ವಾನ್ ಮತ್ತು ಗೊರ್ಗಾ ಪ್ರದೇಶಗಳಲ್ಲಿ ಸೇನಾ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ. ಅದೇ ರೀತಿ ಪ್ಯಾಂಗಾಂಗ್ ತ್ಸೋ ಪ್ರದೇಶದಲ್ಲಿ ಏಕೆ ಸೇನೆ ನಿಷ್ಕ್ರಿಯಗೊಳಿಸುವುದಕ್ಕೆ ಸಾಧ್ಯವಿಲ್ಲವೇ ಎಂದು ಚೀನಾ ಸೇನೆಯನ್ನು ಭಾರತವು ಪ್ರಶ್ನೆ ಮಾಡಲಿದೆ. ತ್ರಿಕೋನ ಪ್ರದೇಶಗಳಲ್ಲಿ ಸೇನಾ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸಬೇಕು. ಈಗಾಗಲೇ ನಿಯೋಜಿಸಿರುವ ಸೇನೆಯವನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಭಾರತೀಯ ನಿಯೋಗವು ಚೀನಾಗೆ ಆಗ್ರಹಿಸಲಿದೆ.

English summary
Here The Key Points Of India-China's Sixth Corps Commander-Level Meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X