ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ-ಭಾರತ ಘರ್ಷಣೆ: ಈವರೆಗೂ ಬೆಳವಣಿಗೆಯ ಪ್ರಮುಖ ಅಂಶಗಳು

|
Google Oneindia Kannada News

ಲಡಾಖ್, ಜೂನ್ 16: ಲಡಾಖ್‌ನ ಗಾಲ್ವಾನ್ ವ್ಯಾಲಿ ಪ್ರದೇಶದ ಸೋಮವಾರ ರಾತ್ರಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಸಂಭವಿಸಿದೆ. ಈ ಗಲಾಟೆಯಲ್ಲಿ ಭಾರತದ ಇಬ್ಬರು ಸೈನಿಕರು ಹಾಗೂ ಓರ್ವ ಅಧಿಕಾರಿ ಮೃತಪಟ್ಟಿರುವುದು ಖಚಿತವಾಗಿದೆ.

Recommended Video

India to witness solar eclipse on June 21 | Solar Eclipse | Oneindia Kannada

ಈ ಘಟನೆ ವರದಿ ಆದ ಬಳಿಕ ಉಭಯ ರಾಷ್ಟ್ರಗಳ ನಡುವೆ ಉನ್ನತ ಮಟ್ಟದ ಸಭೆಗಳು, ಮೇಜರ್ ಮಟ್ಟದ ಸಭೆಗಳು ನಡೆದಿದೆ. ಈ ಘಟನೆಗೆ ಕಾರಣವೇನು ಎಂದು ಚೀನಾ ತನ್ನ ಹೇಳಿಕೆ ನೀಡಿದೆ.

India-China standoff LIVE : ಭಾರತ ಹಾಗೂ ಚೀನಾ ಗಡಿಭಾಗ ಉದ್ವಿಗ್ನIndia-China standoff LIVE : ಭಾರತ ಹಾಗೂ ಚೀನಾ ಗಡಿಭಾಗ ಉದ್ವಿಗ್ನ

ಮತ್ತೊಂದೆಡೆ ಭಾರತವೂ ಅದಕ್ಕೆ ಪ್ರತ್ಯುತ್ತರ ನೀಡಿದೆ ಎಂದು ಮೂಲಗಳು ತಿಳಿಸಿವೆ. ಹಾಗಿದ್ರೆ, ಚೀನಾ ಮತ್ತು ಭಾರತ ನಡುವಿನ ಘರ್ಷಣೆ ಬಳಿಕ ನಡೆದ ಪ್ರಮುಖ ಅಂಶಗಳ ಸುತ್ತ ವಿಶೇಷ ವರದಿ ಇಲ್ಲಿದೆ. ಮುಂದೆ ಓದಿ....

ಮೊದಲು ದಾಳಿ ಮಾಡಿದ್ದು ಭಾರತ: ಚೀನಾ

ಮೊದಲು ದಾಳಿ ಮಾಡಿದ್ದು ಭಾರತ: ಚೀನಾ

ಸೋಮವಾರ ರಾತ್ರಿ ಲಡಾಖ್‌ನ ಗಾಲ್ವಾನ್ ವ್ಯಾಲಿ ಪ್ರದೇಶದಲ್ಲಿ ಎರಡು ಬಾರಿ ಭಾರತ ಸೇನೆ ಗಡಿ ದಾಟಿದೆ. ನಮ್ಮ ಸೇನೆಗಳನ್ನು ಪ್ರಚೋದಿಸಿದೆ. ಜೊತೆಗೆ ದಾಳಿ ಸಹ ಮಾಡಿದೆ. ಇದರ ಪರಿಣಾಮವಾಗಿ ಉಭಯ ಸೇನೆಗಳ ನಡುವೆ ಘರ್ಷಣೆ ನಡೆದಿದ್ದು, ಇದರಲ್ಲಿ ಎರಡೂ ದೇಶಗಳ ಯೋಧರಿಗೆ ಹಾನಿಯಾಗಿದೆ ಎಂದು ಚೀನಾ ಆರೋಪಿಸಿದೆ.

ಚೀನಾ ಸೈನ್ಯದಲ್ಲೂ ಸಾವು ಸಂಭವಿಸಿದೆ

ಚೀನಾ ಸೈನ್ಯದಲ್ಲೂ ಸಾವು ಸಂಭವಿಸಿದೆ

ಈ ಘಟನೆಯಲ್ಲಿ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆಯ ಮೂಲಗಳು ಖಚಿತಪಡಿಸಿದೆ. ಓರ್ವ ಅಧಿಕಾರಿ ಮತ್ತು ಇಬ್ಬರು ಯೋಧರು. ಕೇವಲ ಭಾರತದ ಕಡೆ ಮಾತ್ರವಲ್ಲ ಚೀನಾ ಸೈನ್ಯದಲ್ಲೂ ಯೋಧರ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆಯ ಮೂಲಗಳು ಹೇಳಿದೆ. ಎರಡೂ ಸೈನ್ಯದಲ್ಲಿ ಸಾವು-ನೋವು ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಸೇನೆ ಮುಖ್ಯಸ್ಥರ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತುರ್ತು ಸಭೆಸೇನೆ ಮುಖ್ಯಸ್ಥರ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತುರ್ತು ಸಭೆ

ಮಿಲಿಟರಿ ಮಟ್ಟದ ಮಾತುಕತೆ

ಮಿಲಿಟರಿ ಮಟ್ಟದ ಮಾತುಕತೆ

ಸದ್ಯ ಉಂಟಾಗಿರುವ ಸಂದಿಗ್ಧ ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಯಥಾಸ್ಥಿತಿ ಕಾಪಾಡಿಕೊಳ್ಳಲು ಉಭಯ ದೇಶಗಳ ಮಿಲಿಟರಿ ಅಧಿಕಾರಿಗಳು ಉನ್ನತ ಮಟ್ಟದ ಸಭೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಎರಡೂ ದೇಶಗಳು ಸೇನೆ ಮುಖ್ಯಸ್ಥರ ಮೂಲಕ ಪರಿಸ್ಥಿತಿ ನಿಭಾಯಿಸುವ ಕುರಿತು ಚರ್ಚಿಸಲಾಗ್ತಿದೆ.

ಗುಂಡಿನ ದಾಳಿ ಆಗಿಲ್ಲ

ಗುಂಡಿನ ದಾಳಿ ಆಗಿಲ್ಲ

ಈ ಘಟನೆಯಲ್ಲಿ ಪರಸ್ಪರ ರಾಷ್ಟ್ರಗಳ ನಡುವೆ ಗುಂಡಿನ ದಾಳಿ ಆಗಿಲ್ಲ ಎಂದು ಭಾರತೀಯ ಸೇನೆಯ ಮೂಲಗಳು ಖಚಿತಪಡಿಸಿದೆ. ಕಲ್ಲುಗಳ ಮೂಲಕ ಸೈನಿಕರು ಕಾದಾಡಿದ್ದಾರೆ ಮತ್ತು ಲೋಹದ ಮೂಲಕ ಘರ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜನಾಥ್ ಸಿಂಗ್ ಸಭೆ

ರಾಜನಾಥ್ ಸಿಂಗ್ ಸಭೆ

ಲಡಾಖ್ ಗಡಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಪಟ್ಟಂತೆ ಭಾರತದ ರಕ್ಷಣ ಸಚಿವ ರಾಜನಾಥ್ ಸಿಂಗ್ ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಇತರೆ ಮೂರು ಸೇನೆಗಳ ಮುಖ್ಯಸ್ಥರ ಜೊತೆ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಚೀನಾ ವಿಚಾರದಲ್ಲಿ ಭಾರತ ಹೇಗೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಮುಂದಿನ ಹೆಜ್ಜೆ ಯಾವ ರೀತಿ ಇಡಬೇಕು ಎಂಬುದನ್ನು ಚರ್ಚಿಸಿದ್ದಾರೆ.

ಪಠಾಣ್‌ಕೋಟ್ ಭೇಟಿ ರದ್ದು

ಪಠಾಣ್‌ಕೋಟ್ ಭೇಟಿ ರದ್ದು

ಈ ಮಧ್ಯೆ ಪಠಾಣ್‌ಕೋಟ್ ಮಿಲಿಟರಿ ಕೇಂದ್ರಕ್ಕೆ ಸೈನ್ಯದ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಅವರು ಭೇಟಿ ನೀಡಬೇಕಿತ್ತು. ಆದರೆ, ಚೀನಾ ಮತ್ತು ಭಾರತ ನಡುವಿನ ಘರ್ಷಣೆ ಪರಿಣಾಮ ಈ ಯೋಜನೆಯನ್ನು ರದ್ದುಪಡಿಸಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

English summary
China army killed 2 indian soldiers and 1 officers at ladakh galwan valley. here is the key highlights of indian army and china army fight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X