ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ಯಾರಿಗೆ ಸಿಕ್ತು ಲಾಭದ ಪಾಲು.?

|
Google Oneindia Kannada News

ನವದೆಹಲಿ, ಮೇ 13: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿನ್ನೆಯಷ್ಟೇ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದರು. ಕೋವಿಡ್-19 ವಿರುದ್ಧ ಹೋರಾಡಲು ಭಾರತೀಯರಿಗೆ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಅನ್ನು ಮೋದಿ ಘೋಷಿಸಿದ್ದರು.

Recommended Video

ಹಾಸನದಲ್ಲಿ ಕೊರೊನಾ ಕೇಸ್ ಪತ್ತೆಯಾಗ್ತಿದ್ದಂತೆ ಮಲೆನಾಡಿಗರು ಮಾಡ್ತಿರೋ ಕೆಲಸ ನೋಡಿ | Hassan | Oneindia Kannada

ಈ ವಿಶೇಷ ಆರ್ಥಿಕ ಪ್ಯಾಕೇಜ್ ಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರ ನೀಡಿದರು. ಇಂದು ಸಂಜೆ 4 ಗಂಟೆಗೆ ಸುದ್ಧಿಗೋಷ್ಠಿ ನಡೆಸಿದ ನಿರ್ಮಲಾ ಸೀತಾರಾಮನ್, ಆತ್ಮ ನಿರ್ಭರ್ ಭಾರತ್ ಅಭಿಯಾನದ ಅಡಿ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದರು.

ಐಟಿ ರಿಟರ್ನ್ಸ್ ಸಲ್ಲಿಕೆ ದಿನಾಂಕ ವಿಸ್ತರಣೆ ಏನು ಲಾಭ?ಐಟಿ ರಿಟರ್ನ್ಸ್ ಸಲ್ಲಿಕೆ ದಿನಾಂಕ ವಿಸ್ತರಣೆ ಏನು ಲಾಭ?

ಹಾಗಾದ್ರೆ, 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಯಾರಿಗೆ, ಯಾವ ವರ್ಗಕ್ಕೆ ಲಾಭ ತಂತು.? ಇಲ್ಲಿದೆ ನೋಡಿ ಸವಿವರ...

ಎಂ.ಎಸ್.ಎಂ.ಇ ಗಳಿಗೆ ಭರ್ಜರಿ ಕೊಡುಗೆ

ಎಂ.ಎಸ್.ಎಂ.ಇ ಗಳಿಗೆ ಭರ್ಜರಿ ಕೊಡುಗೆ

* ಎಂ.ಎಸ್.ಎಂ.ಇ ಗಳಿಗೆ (ಅತಿ ಸಣ್ಣ, ಸಣ್ಣ, ಮಧ್ಯಮ ಪ್ರಮಾಣದ ಕೈಗಾರಿಕೆ) ಸಂಬಂಧಿಸಿದಂತೆ 6 ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ.

* ಎಂ.ಎಸ್.ಎಂ.ಇ ಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗುವುದು. ಇದರಿಂದ 45 ಲಕ್ಷ ಎಂ.ಎಸ್.ಎಂ.ಇ ಗಳು ಅನುಕೂಲ ಪಡೆಯಲಿವೆ.

* ಎಂ.ಎಸ್.ಎಂ.ಇ ಗಳಿಗೆ ಯಾವುದೇ ಅಡಮಾನವಿಲ್ಲದೆ ಸಾಲ ಕೊಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಇದರಿಂದ 25 ಕೋಟಿ - 100 ಕೋಟಿ ವಹಿವಾಟು ಇರುವ ಕೈಗಾರಿಕೆಗಳಿಗೆ ಅನುಕೂಲ ಆಗಲಿದೆ.

* ಸಂಬಳ ಪಾವತಿಗೆ ಅವಶ್ಯವಿದ್ದರೆ, ಸಣ್ಣ ಕೈಗಾರಿಕೆಗಳಿಗೆ ತಕ್ಷಣ ಸಾಲ ಮಂಜೂರು ಮಾಡಲಾಗುವುದು.

* ಸಾಲಕ್ಕೆ ಮೊದಲು 12 ತಿಂಗಳವರೆಗೆ ಮರುಪಾವತಿ ಅವಶ್ಯಕತೆ ಇರುವುದಿಲ್ಲ. ಸಾಲ ಮರುಪಾವತಿಗೆ 4 ವರ್ಷದವರೆಗೆ ಕಾಲಾವಕಾಶ ನೀಡಲಾಗಿದೆ.

* ಬ್ಯಾಂಕ್ ಗಳು ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರೆಂಟಿ ನೀಡಲಿದೆ. ಸಾಲ ಪಡೆಯಲು ಯಾವುದೇ ಶುಲ್ಕ ಇಲ್ಲ. ಅಕ್ಟೋಬರ್ 31 ರವರೆಗೆ ಸಾಲ ಪಡೆಯಲು ಅವಕಾಶವಿದೆ.

* 200 ಕೋಟಿವರೆಗೆ ಗ್ಲೋಬಲ್ ಟೆಂಡರ್ ಇಲ್ಲ. ವಿದೇಶಿ ಕಂಪನಿಗಳಿಗೆ ಟೆಂಡರ್ ನಲ್ಲಿ ಭಾಗಿಯಾಗಲು ಅವಕಾಶ ಇಲ್ಲ. 200 ಕೋಟಿ ರೂಪಾಯಿ ವರೆಗಿನ ಗ್ಲೋಬಲ್ ಟೆಂಡರ್ ನಲ್ಲಿ ಸಣ್ಣ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗಿದೆ.

* ಸಂಕಷ್ಟದಲ್ಲಿ ಇರುವ ಸಣ್ಣ ಕೈಗಾರಿಕೆಗಳಿಗೆ 20 ಸಾವಿರ ಕೋಟಿ ಸಹಾಯಕ ಸಾಲ ನೀಡಲಾಗುವುದು. ಇದರಿಂದ 2 ಲಕ್ಷ ಎಂ.ಎಸ್.ಎಂ.ಇ ಗಳಿಗೆ ಅನುಕೂಲ ಆಗಲಿದೆ.

* ಎಂ.ಎಸ್.ಎಂ.ಇ ಗಳಿಗೆ 50 ಸಾವಿರ ಕೋಟಿ ರೂಪಾಯಿ ಈಕ್ವಿಟಿ ಇನ್ ಫ್ಯೂಶನ್ ಸಿಗಲಿದೆ.

ಎಂ.ಎಸ್.ಎಂ.ಇ ಗಳಿಗೆ ಹೊಸ ವ್ಯಾಖ್ಯಾನ

ಬಂಡವಾಳ ಮತ್ತು ವಾರ್ಷಿಕ ಟರ್ನ್ ಓವರ್ ಆಧಾರದ ಮೇಲೆ ಎಂ.ಎಸ್.ಎಂ.ಇ ಗಳನ್ನು ಸಣ್ಣ, ಅತಿ ಸಣ್ಣ, ಮಧ್ಯಮ ಕೈಗಾರಿಕೆ ಎಂದು ವರ್ಗೀಕರಿಸಲಾಗಿದೆ. ಅದರ ವಿವರ ಇಲ್ಲಿದೆ.

3 ತಿಂಗಳು ಇಪಿಎಫ್ ಸರ್ಕಾರ ತುಂಬಲಿದೆ; ಷರತ್ತುಗಳು ಅನ್ವಯ3 ತಿಂಗಳು ಇಪಿಎಫ್ ಸರ್ಕಾರ ತುಂಬಲಿದೆ; ಷರತ್ತುಗಳು ಅನ್ವಯ

ಕಾರ್ಮಿಕರಿಗೆ, ನೌಕರರಿಗೆ ಸಿಕ್ಕಿದ್ದೇನು.?

ಕಾರ್ಮಿಕರಿಗೆ, ನೌಕರರಿಗೆ ಸಿಕ್ಕಿದ್ದೇನು.?

* ನೌಕರರು ಮತ್ತು ಉದ್ಯಮಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ 2500 ಕೋಟಿ ಇ.ಪಿ.ಎಫ್ ಸಪೋರ್ಟ್.

* 15 ಸಾವಿರ ಒಳಗಿನ ಸಂಬಳ ಪಡೆಯುವವರಿಗೆ ತಕ್ಷಣ ಇಪಿಎಫ್ ಪಾವತಿ

* ಮತ್ತೆ 3 ತಿಂಗಳು (ಆಗಸ್ಟ್ ವರೆಗೆ) ನೌಕರರ ಪಿಎಫ್ ಖಾತೆಗೆ ಕೇಂದ್ರದಿಂದ ಹಣ ಸಿಗಲಿದೆ. ಕಂಪನಿ ಮತ್ತು ನೌಕರರ ಪಾಲಿನ ಹಣವನ್ನು ಕೇಂದ್ರ ಸರ್ಕಾರವೇ ಪಾವತಿಸಲಿದೆ. ಇದರಿಂದ 72.22 ಲಕ್ಷ ಕಾರ್ಮಿಕರಿಗೆ ಇಪಿಎಫ್ ನಿಂದ ಅನುಕೂಲವಾಗಲಿದೆ

* ಇಪಿಎಫ್ ಖಾತೆಗಳಿಂದ ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ

* 15 ಸಾವಿರ ರೂಪಾಯಿ ಮೇಲ್ಪಟ್ಟ ಸಂಬಳದಾರರಿಗೂ ಕೇಂದ್ರ ಸರ್ಕಾರದಿಂದ ರಿಲೀಫ್ ನೀಡಲಾಗಿದೆ. ನೌಕರರ ಪಿಎಫ್ ಪಾಲು 12% ರಿಂದ 10% ಕ್ಕೆ ಇಳಿಕೆಯಾಗಿದೆ. ಇದಕ್ಕಾಗಿ 6750 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ಭರಿಸಲಿದೆ.

ವಿವಿಧ ಆರ್ಥಿಕ ಪ್ಯಾಕೇಜ್

ವಿವಿಧ ಆರ್ಥಿಕ ಪ್ಯಾಕೇಜ್

* ಎನ್.ಬಿ.ಎಫ್.ಸಿ/ಎಚ್.ಎಫ್.ಸಿ/ಎಂ.ಎಫ್.ಐ ಗಳಿಗೆ 30 ಸಾವಿರ ಕೋಟಿ ಸ್ಪೆಷಲ್ ಲಿಕ್ವಿಡಿಟಿ ಸ್ಕೀಮ್ ಘೋಷಣೆ.

* ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 45 ಸಾವಿರ ಕೋಟಿ ರೂಪಾಯಿ ಸಾಲ.

* ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಗೃಹ ಸಾಲ ಕಂಪನಿಗಳು, ಸಣ್ಣ ಸಾಲ ನೀಡುವ ಕಂಪನಿಗಳಿಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ.

* 90 ಸಾವಿರ ಕೋಟಿ ವಿದ್ಯುತ್ ಸರಬರಾಜು ಕಂಪನಿಗಳಿಗೆ (ಡಿಸ್ಕಾಂ) ಮೀಸಲು ಇರಿಸಲಾಗಿದೆ.

MSMEsಗೆ ಹೊಸ ವ್ಯಾಖ್ಯಾನ: ಹೂಡಿಕೆಯ ಮಿತಿ ಪರಿಷ್ಕರಿಸಿದ ಸರ್ಕಾರMSMEsಗೆ ಹೊಸ ವ್ಯಾಖ್ಯಾನ: ಹೂಡಿಕೆಯ ಮಿತಿ ಪರಿಷ್ಕರಿಸಿದ ಸರ್ಕಾರ

ಕೊರೊನಾ ನೈಸರ್ಗಿಕ ವಿಕೋಪ

ಕೊರೊನಾ ನೈಸರ್ಗಿಕ ವಿಕೋಪ

* ಸರ್ಕಾರಿ ಗುತ್ತಿಗೆದಾರರಿಗೆ ರಿಲೀಫ್ ನೀಡಲಾಗಿದೆ. ಬಾಕಿ ಉಳಿಸಿಕೊಂಡ ಯೋಜನೆಗಳನ್ನು ಮುಗಿಸಲು 6 ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ.

* ಕೊರೊನಾವನ್ನ ನೈಸರ್ಗಿಕ ವಿಕೋಪ ಎಂದು ಪರಿಗಣಿಸಲು ಸೂಚನೆ ನೀಡಲಾಗಿದೆ. ನೈಸರ್ಗಿಕ ವಿಕೋಪ ಎಂದು ಪರಿಗಣಿಸಿ ರಿಯಲ್ ಎಸ್ಟೇಟ್ ವಲಯಕ್ಕೂ ರಿಲೀಫ್ ನೀಡಲಾಗಿದೆ.

ಇಪಿಎಫ್ - 50 ಸಾವಿರ ಕೋಟಿ

ಇಪಿಎಫ್ - 50 ಸಾವಿರ ಕೋಟಿ

* ಮಾರ್ಚ್ 2021 ರವರೆಗೆ ಟಿಡಿಎಸ್/ಟಿಸಿಎಸ್ ಗಳಿಗೆ 25% ರಷ್ಟು ಕಡಿತ ಮಾಡಲಾಗಿದೆ. ಇದರಿಂದ 50 ಸಾವಿರ ಕೋಟಿ ರೂಪಾಯಿ ಉಳಿತಾಯ ಆಗಲಿದೆ.

* ಐಟಿ ರಿಟರ್ನ್ಸ್ ಸಲ್ಲಿಕೆಗೆ ನವೆಂಬರ್ 30, 2020 ರವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ.

* ಟ್ಯಾಕ್ಸ್ ಆಡಿಟ್ ಗೆ ಅಕ್ಟೋಬರ್, 31, 2020 ಕೊನೆಯ ದಿನಾಂಕ

ದೇಶಿ ಉದ್ಯಮಕ್ಕೆ ಬೆಂಬಲ; ಸರ್ಕಾರಿ ಖರೀದಿಯಲ್ಲಿ ಜಾಗತಿಕ ಟೆಂಡರ್ ಇಲ್ಲದೇಶಿ ಉದ್ಯಮಕ್ಕೆ ಬೆಂಬಲ; ಸರ್ಕಾರಿ ಖರೀದಿಯಲ್ಲಿ ಜಾಗತಿಕ ಟೆಂಡರ್ ಇಲ್ಲ

1.70 ಲಕ್ಷ ಕೋಟಿ ಪ್ಯಾಕೇಜ್

1.70 ಲಕ್ಷ ಕೋಟಿ ಪ್ಯಾಕೇಜ್

* ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅನುಸಾರ 1.70 ಲಕ್ಷ ಕೋಟಿ ರಿಲೀಫ್ ಪ್ಯಾಕೇಜ್ ಘೋಷಣೆಯಾಗಿದೆ. ಇದರಿಂದ ಕೊರೊನಾ ವೈರಸ್ ವಿರುದ್ಧ ಹೋರಾಡಲು ಬಡವರಿಗೆ ಸಹಕಾರಿ ಆಗಲಿದೆ.

* ಪ್ರತಿ ಹೆಲ್ತ್ ವರ್ಕರ್ ಗೆ 50 ಲಕ್ಷ ಇನ್ಶುರೆನ್ಸ್ ಕವರ್.

* ಜನ್ ಧನ್ ಅಕೌಂಟ್ ಹೊಂದಿರುವ 20 ಕೋಟಿ ಮಹಿಳೆಯರಿಗೆ ಮುಂದಿನ ಮೂರು ತಿಂಗಳ ಕಾಲ, ಪ್ರತಿ ತಿಂಗಳು 500 ರೂಪಾಯಿ ಸಿಗಲಿದೆ.

* ಮುಂದಿನ ಮೂರು ತಿಂಗಳು 8 ಕೋಟಿ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಸಿಗಲಿದೆ.

* ಪಿಎಂ ಕಿಸಾನ್ ಯೋಜನೆ ಅಡಿ 8.7 ಕೋಟಿ ರೈತರಿಗೆ 2 ಸಾವಿರ ರೂಪಾಯಿ ಸಿಗಲಿದೆ

English summary
20 Lakh Crore Economic Package: Highlights of Nirmala Seetharaman pressmeet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X