• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರ್ಥಿಕತೆಗೆ ಜೀವ ತುಂಬಲು ಹಲವು ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್

By ಅನಿಲ್ ಆಚಾರ್
|

ನವದೆಹಲಿ, ಆಗಸ್ಟ್ 23: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಚಿವಾಲಯದ ಉನ್ನತಾಧಿಕಾರಿಗಳ ಜತೆಗೆ ಶುಕ್ರವಾರ ನವದೆಹಲಿಯಲ್ಲಿ ಭಾರತದ ಆರ್ಥಿಕತೆ ಬಗ್ಗೆ ಮಾಧ್ಯಮದ ಎದುರು ಮಾತನಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಮಾಧ್ಯಮಗಳ ಎದುರು ಮಾತನಾಡುತ್ತಾರೆ ಎಂಬ ಸುದ್ದಿಯನ್ನು ಷೇರು ಮಾರುಕಟ್ಟೆ ಸಕಾರಾತ್ಮಕವಾಗಿ ಸ್ವೀಕರಿಸಿದೆ. ಏರಿಕೆ ಕಂಡಿದೆ.

ಮೋದಿನಾಮಿಕ್ಸ್: 'ಮುಂದಿನ ಒಂದು ವರ್ಷ ಜಾಗ್ರತೆಯಾಗಿರೋಣ'

ನಿರ್ಮಲಾ ಸೀತಾರಾಮನ್ ಅವರ ಭಾಷಣದ ಪ್ರಮುಖಾಂಶಗಳು ಇಲ್ಲಿವೆ:

   ಕುಸಿದ ವಾಹನ ಉದ್ಯಮ ಚೇತರಿಕೆಗೆ ನಿರ್ಮಲಾ ಸೀತಾರಾಮನ್ ಮದ್ದು

   * ಜಾಗತಿಕ ಮಟ್ಟದಲ್ಲಿ ಜಿಡಿಪಿ ಪ್ರಗತಿಯು ಈಗ ಅಂದಾಜು ಮಾಡಿರುವ 3.2% ಗಿಂತ ಇನ್ನೂ ಕಡಿಮೆ ಆಗಲಿದೆ ಎಂದು ಪರಿಷ್ಕರಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಬೇಡಿಕೆ ದುರ್ಬಲ ಆಗಲಿದೆ.

   * ಈಗಿನ ಸರಕಾರವು 2014ರಿಂದ ಸುಧಾರಣೆಯನ್ನು ಪ್ರಮುಖ ಕಾರ್ಯಸೂಚಿಯಾಗಿ ಇರಿಸಿಕೊಂಡಿದೆ. ಇದು ನಿರಂತರ ಪ್ರಕ್ರಿಯೆ. ಇದನ್ನು ನಾವು ಮರೆತಿಲ್ಲ. ಹಿಂದಿನ ಆಡಳಿತಾವಧಿ ಜತೆಗೆ ಹೋಲಿಕೆ ಮಾಡಿ ನೋಡಿ. ನಾವು ಹಿಂಜರಿತ ಕಂಡಿಲ್ಲ ಅಥವಾ ಸುಧಾರಣೆ ಮರೆತಿಲ್ಲ.

   * ಆದಾಯ ತೆರಿಗೆ ಆದೇಶದ ವಿತರಣೆ, ನೋಟಿಸ್ ನೀಡುವುದನ್ನು ಅಕ್ಟೋಬರ್ ಒಂದರಿಂದ ಕೇಂದ್ರೀಕೃತ (ಸೆಂಟ್ರಲೈಡ್) ಕಂಪ್ಯೂಟರ್ ವ್ಯವಸ್ಥೆ ಮೂಲಕ ವಿತರಿಸಲಾಗುತ್ತದೆ. ಇನ್ನು ಮುಂದೆ ಕೇಂದ್ರದಿಂದ ಒಪ್ಪಿಗೆ ಪಡೆಯದೆ ತಳ ಮಟ್ಟದಲ್ಲಿ ನೋಟಿಸ್ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ.

   * ಕಂಪ್ಯೂಟರ್ ನಿಂದ ಜನರೇಟ್ ಆಗಿರುವ ದಾಖಲಾತಿಗಳಲ್ಲದೆ ಇನ್ಯಾವುದೇ ಸಂವಹನ ಬಂದರೂ ಅದನ್ನು ಅಧಿಕೃತವಾದದ್ದು ಎಂದು ಪರಿಗಣಿಸಲ್ಲ. ಹಳೆಯ ನೋಟಿಸ್ ಗೆ ಸಂಬಂಧಿಸಿದ ಎಲ್ಲ ತೀರ್ಮಾನಗಳನ್ನು ಅಕ್ಟೋಬರ್ ಒಂದರೊಳಗೆ ನಿರ್ಧಾರ ಆಗುತ್ತದೆ. ಆ ಪೈಕಿ ಕೆಲವಕ್ಕೆ ನೋಟಿಸ್ ನೀಡಲು ನಿರ್ಧರಿಸಬಹುದು. ಅವುಗಳನ್ನು ಅಪ್ ಲೋಡ್ ಮಾಡಲಾಗುತ್ತದೆ. ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತದೆ.

   ಪಾರ್ಲೆಯನ್ನೇ ನುಂಗಿದ ಜಿಎಸ್‌ಟಿ: ಬಿಸ್ಕತ್‌ಗೆ ಬೇಡಿಕೆ ತೀವ್ರ ಕುಸಿತ

   * ತೆರಿಗೆದಾರರು ಉತ್ತರ ನೀಡಿದ ದಿನಾಂಕದಿಂದ ಮೂರು ತಿಂಗಳ ಒಳಗೆ ಎಲ್ಲ ತೆರಿಗೆ ನೋಟಿಸ್ ಗಳ ಇತ್ಯರ್ಥ ಮಾಡಲಾಗುತ್ತದೆ.

   * ಇತರ ದೇಶಗಳಿಗಿಂತ ಭಾರತ ಜಿಡಿಪಿ ಪ್ರಗತಿ ಹೆಚ್ಚಿದೆ. ಗ್ರಾಹಕರ ಖರೀದಿ ಪ್ರಗತಿಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾತ್ರ ಅಲ್ಲ, ಈಗಾಗಲೇ ಅಭಿವೃದ್ಧಿ ಆಗಿರುವ ದೇಶಗಳಲ್ಲೂ ಇದೇ ಸ್ಥಿತಿ ಇದೆ. ಜಾಗತಿಕ ವ್ಯಾಪಾರದಲ್ಲೇ ಏರಿಳಿತ ಕಾಣಿಸಿಕೊಂಡಿದೆ.

   * ವಿದೇಶಿ ಹಾಗೂ ದೇಶಿ ಪೋರ್ಟ್ ಫೋಲಿಯೊ ಹೂಡಿಕೆದಾರರಿಗೆ ಹೆಚ್ಚಿಸಿದ್ದ ಸರ್ ಚಾರ್ಜ್ ಹಿಂಪಡೆಯಲಾಗಿದೆ.

   5 ಟ್ರಿಲಿಯನ್ ಡಾಲರ್ ಆರ್ಥಿಕತೆಯ 'ಜುಮ್ಲಾ' ಬಿಡಿಸಿಟ್ಟ ಪಿ.ಚಿದಂಬರಂ

   * ಕಂಪೆನಿ ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸುವ ಬಗ್ಗೆ ಸರಕಾರಕ್ಕೆ ಸಮ್ಮತಿ ಇಲ್ಲ. ವಿಚಾರಣೆಗಿಂತ ಎಲ್ಲಿ ಸಾಧ್ಯವೋ ಅಲ್ಲೆಲ್ಲ ದಂಡ ವಿಧಿಸುತ್ತೇವೆ. ಕಂಪೆನಿ ಕಾಯ್ದೆ ಅಡಿಯಲ್ಲಿ ಹದಿನಾಲ್ಕು ಸಾವಿರ ವಿಚಾರಣೆಯನ್ನು ಹಿಂಪಡೆದಿದ್ದೇವೆ.

   * ರೆಪೋ ದರವನ್ನು ನೇರವನ್ನು ಬಡ್ಡಿದರಕ್ಕೆ ಹೊಂದಾಣಿಕೆ ಮಾಡುವ ಮೂಲಕ ಗೃಹ ಸಾಲ, ವಾಹನ ಸಾಲ ಮತ್ತಿತರ ಸಾಲಗಳ ಬಡ್ಡಿ ದರವನ್ನು ಬ್ಯಾಂಕ್ ಗಳು ಇಳಿಕೆ ಮಾಡುತ್ತವೆ. ಕೈಗಾರಿಕೆಗಳಿಗೆ ಬೇಕಾದ ವರ್ಕಿಂಗ್ ಕ್ಯಾಪಿಟಲ್ ಸಾಲ ಕಡಿಮೆ ಬಡ್ಡಿದರದಲ್ಲಿ ದೊರೆಯಲಿದೆ.

   * ಆಧಾರ್ ಗೆ ಹೊಂದಿಕೊಂಡಂತೆ ಬ್ಯಾಂಕ್ ಕೆವೈಸಿಗೆ ಎನ್ ಬಿಎಫ್ ಸಿಗೆ (ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಾರ್ಪೊರೇಷನ್) ಅನುಮತಿ ನೀಡಲಾಗುವುದು.

   * ಸ್ಟಾರ್ಟ್ ಅಪ್ ಗಳಿಗೆ ಆದಾಯ ತೆರಿಗೆ ಸಮಸ್ಯೆಗಳ ಶೀಘ್ರ ಇತ್ಯರ್ಥಕ್ಕೆ ಪ್ರತ್ಯೇಕ ಸೆಲ್ ರಚಿಸಲು ತೀರ್ಮಾನ ಮಾಡಲಾಗಿದೆ.

   * ಸಾಲ ಮರುಪಾವತಿ ಆದ ಹದಿನೈದು ದಿನಗಳ ಒಳಗಾಗಿ ಸಾಲದ ದಾಖಲಾತಿಗಳನ್ನು ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳು ಹಿಂತಿರುಗಿಸಬೇಕು.

   * ಯು. ಕೆ. ಸಿನ್ಹಾ ಸಮಿತಿಯ ಶಿಫಾರಸಿನಂತೆ ಸುಲಭ ಸಾಲ ಲಭ್ಯತೆ, ಮಾರ್ಕೆಟಿಂಗ್, ತಂತ್ರಜ್ಞಾನ, ತಡವಾದ ಪಾವತಿಯನ್ನು ಮೂವತ್ತು ದಿನದೊಳಗೆ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

   * ದೀರ್ಘಾವಧಿ/ ಅಲ್ಪಾವಧಿ ಕ್ಯಾಪಿಟಲ್ ಗೇಯ್ನ್ಸ್ ಮೇಲೆ ಇದ್ದ ವಿಸ್ತೃತ ಸರ್ ಚಾರ್ಜ್ ನಿಂದ ವಿನಾಯಿತಿ ನೀಡಲಾಗಿದೆ. "ಏಂಜೆಲ್ ಟ್ಯಾಕ್ಸ್' ಅನ್ನು ಸ್ಟಾರ್ಟ್ ಅಪ್ಸ್ ಮತ್ತು ಅದರ ಹೂಡಿಕೆದಾರರಿಗೆ ವಿನಾಯಿತಿಯನ್ನು ಹಿಂಪಡೆಯಲಾಗಿದೆ.

   * ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ ಆರ್) ಉಲ್ಲಂಘನೆಯಾದಲ್ಲಿ ಅದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲ್ಲ.

   * ಆಯಾ ಸಂದರ್ಭಕ್ಕೆ ಮಾಡುವ ದರ ಕಡಿತವನ್ನು ಬ್ಯಾಂಕ್ ಗಳು ಜಾರಿಗೆ ತರಬೇಕು. ರೆಪೋ ದರ ಇತ್ಯಾದಿಗೆ ಹೊಂದಿಕೊಂಡಂಥ ಉತ್ಪನ್ನಗಳನ್ನು ಆರಂಭಿಸಬೇಕು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Income tax reforms and other key announcements by union finance minister Niramala Sitharaman to Indian economy boost.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more