ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟಾಕಿ ಹೊಡೆಯಬೇಡಿ ಎಂಬ ಅಜ್ಜಿ ಮಾತು ಕೇಳಲಿಲ್ಲ

By ವಿಕಾಸ್ ನಂಜಪ್ಪ
|
Google Oneindia Kannada News

ತಿರುವನಂತಪುರಂ, ಏಪ್ರಿಲ್ 11 : ಜಾತ್ರೆಯಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಿ ಎಂದು ಹೋರಾಟ ಮಾಡುತ್ತಿದ್ದವರ ಮನೆ ಅಗ್ನಿ ದುರಂತದಲ್ಲಿ ಹಾನಿಗೊಳಗಾಗಿದೆ. ಇದು ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್‌ನ ದೇವಾಲಯದಲ್ಲಿ ನಡೆದ ಅಗ್ನಿ ದುರಂತದ ಕಥೆ. [ಸುದ್ದಿದನಿ : ಅಜ್ಜಿಯ ಮಾತು ಯಾರಿಗೂ ಕೇಳಲಿಲ್ಲ]

ಭಾನುವಾರ ಮುಂಜಾನೆ ಕೊಲ್ಲಂ ಜಿಲ್ಲೆಯ ಪರವೂರ್‌ನ ದೇವಾಲಯದಲ್ಲಿ ನಡೆದ ಅಗ್ನಿ ದುರಂತದಲ್ಲಿ 100ಕ್ಕೂ ಅಧಿಕ ಭಕ್ತರು ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ದುರಂತಕ್ಕೆ ಸಂಬಂಧಿಸಿದಂತೆ 5 ಜನರನ್ನು ಬಂಧಿಸಲಾಗಿದೆ. [ಕೇರಳ ಪಟಾಕಿ ದುರಂತ, 5 ಜನರ ಬಂಧನ]

 fire accident

ಪಂಕಜಾಕ್ಷಿ ಹೋರಾಟ : ದೇವಾಲಯದ ಜಾತ್ರೆಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು ಎಂದು 80 ವರ್ಷ ವಯಸ್ಸಿನ ಪಂಕಜಾಕ್ಷಿ ಅವರು ಕಳೆದ 4 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಭಾನುವಾರ ನಡೆದ ದುರಂತದ ಸುದ್ದಿ ಕೇಳಿ ಅವರು ಬೆಚ್ಚಿಬಿದ್ದಿದ್ದಾರೆ. [ಕೇರಳ ಪಟಾಕಿ ಅವಘಡದ ಕರಾಳ ಚಿತ್ರಗಳು]

ಪಂಕಜಾಕ್ಷಿ ಅವರ ಮನೆ ದೇವಾಲಯದಿಂದ ಸುಮಾರು 50 ಮೀಟರ್ ದೂರದಲ್ಲಿದೆ. 4 ವರ್ಷದಿಂದ ಪಟಾಕಿ ಹೊಡೆದರೆ ಆಗಬಹುದಾದದ ದುರಂತದ ಬಗ್ಗೆ ಪಂಕಜಾಕ್ಷಿ ಅವರು ದೂರು ನೀಡುತ್ತಲೇ ಇದ್ದಾರೆ. ಆದರೆ, ಪಟಾಕಿ ಹೊಡೆಯುವುದು ನಿಂತಿಲ್ಲ. ಏ.10ರಂದು ನಡೆದ ದುರಂತದಲ್ಲಿ ಅವರ ಮನೆಗೂ ಹಾನಿ ಉಂಟಾಗಿದೆ. [ದೇವರ ನಾಡು ಕೇರಳದ ಮೇಲೆ ಮೂಕಾಂಬಿಕೆಯ ಮುನಿಸು!]

ಪಂಕಜಾಕ್ಷಿ ಮತ್ತು ಆಕೆಯ ಮನೆಯವರು ಪ್ರತಿಬಾರಿ ಪಟಾಕಿ ನಿಷೇಧದ ಬಗ್ಗೆ ಮಾತನಾಡಿದಾಗ ದೇವಾಲಯದ ಆಡಳಿತ ಮಂಡಳಿ ಸಂಪ್ರದಾಯವನ್ನು ವಿರೋಧಿಸುತ್ತಾರೆ ಎಂದು ಹೇಳಿ, ಅದನ್ನು ಮುಚ್ಚಿಹಾಕುತ್ತಿತ್ತು. ಇಂತಹ ದುರಂತ ನಡೆಯಬಹುದು ಎಂದು ಅವರು ಎಚ್ಚರಿಕೆ ನೀಡುತ್ತಿದ್ದರು ಎಂಬುದನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ. [ಪಟಾಕಿ ಸಿಡಿದು ಭಾರೀ ಅಗ್ನಿ ದುರಂತ, 105 ಸಾವು]

'ಉತ್ಸವದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಿ ಎಂದು ಕೊಲ್ಲಂ ಜಿಲ್ಲಾಡಳಿತಕ್ಕೆ ಪಂಕಜಾಕ್ಷಿ ಪ್ರತಿ ವರ್ಷವೂ ಮನವಿ ಮಾಡುತ್ತಿದ್ದರು. ಪ್ರತಿ ಬಾರಿ ಜಾತ್ರೆ ನಡೆದಾಗ ಅವರ ಮನೆಗೆ ಹಾನಿಯಾಗುತ್ತಿತ್ತು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ' ಎಂದು ಪಂಕಜಾಕ್ಷಿ ಅಳಿಯ ಪ್ರಕಾಶ್ ಹೇಳಿದ್ದಾರೆ.

ಅಂದಹಾಗೆ ಭಾನುವಾರ ನಡೆದ ದುರಂತಕ್ಕೆ ಸಂಬಂಧಿಸಿದಂತೆ 30 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಟಾಕಿ ಹೊಡೆಯಲು ಬಂದಿದ್ದ 5 ಜನರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. [ಕೇರಳ ದುರಂತದ ಚಿತ್ರಗಳು]

English summary
It is quite ironical when the house of the person who had sought a ban on fireworks was damaged in the fire accident at the Puttingal temple in Kerala. Meet the 80 year Pankajakshi Amma whose house is located 50 meters from the temple where the accident took place yesterday in which 106 died and 380 were injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X