ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಡೆಯಲಾಗದಿದ್ದರೂ ಪ್ರವಾಹದ ಬಾಯಿಂದ ದಂಪತಿಯ ರಕ್ಷಿಸಿದ ಕತೆ ಕೇಳಿ!

|
Google Oneindia Kannada News

ಚೆಂಗನ್ನೂರ್, ಆಗಸ್ಟ್ 24: ಕೇರಳ ಪ್ರವಾಹದ ಭೀಕರತೆಯ ನಡುವಲ್ಲಿ ಎಷ್ಟೋ ಕರುಣಾಜನಕ ಘಟನೆಗಳು ಘಟಿಸಿವೆ. ಕಾಲಲ್ಲಿ ಶಕ್ತಿಯಿಲ್ಲದೆ, ನಡೆಯಲಾರದ ವ್ಯಕ್ತಿಯೊಬ್ಬ ದಂಪತಿಯನ್ನು ರಕ್ಷಿಸಿದ ಪವಾಡದಂಥ ಘಟನೆಯೊಂದು ಕೇರಳದ ಚೆಂಗನ್ನೂರ್ ನಲ್ಲಿ ನಡೆದಿದೆ.

46 ವರ್ಷದ ಸಿನ್ನಾ ದುರೈ ಎಂಬ ವ್ಯಕ್ತಿಯೊಬ್ಬರಿಗೆ ಕಾಲಲ್ಲಿ ಶಕ್ತಿಯಿಲ್ಲ. ಪಾದರಕ್ಷೆಯನ್ನು ಕೈಗೆ ಹಾಕಿಕೊಂಡು ತೆವಳುತ್ತಲೇ ಒಂದೆಡೆಯಿಂದ ಇನ್ನೊಂದೆಡೆ ಓಡಾಡುತ್ತಾರೆ. ಕೇರದಲ್ಲಿ ಪ್ರವಾಹ ಉಂಟಾಗಿ ಇದ್ದ ಒಂದು ಪುಟ್ಟ ಮನೆಯ ತುಂಬಾ ಕಸಕಡ್ಡಿಗಳು ತುಂಬಿ, ಎಲ್ಲವೂ ಕೊಚ್ಚಿಕೊಂಡು ಹೋಗಿವೆ. ಏನು ಮಾಡುವುದೆಂದೇ ತಿಳಿಯದೆ ತಲೆಮೇಲೆ ಕೈಹೊತ್ತು ಕುಳಿತ ಸಿನ್ನಾ ದೊರೆ ಅವರಿಗೆ ಇದ್ದಕ್ಕಿದ್ದಂತೆ ಚೀರಾಡುವ ಧ್ವನಿ ಕೇಳಿಸಿದೆ.

ನೇವಿ ಅಧಿಕಾರಿಗಳಿಗೆ 'Thanks' ಹೇಳಿದ ಹಸಿ ಬಾಣಂತಿ ಸಜಿತಾನೇವಿ ಅಧಿಕಾರಿಗಳಿಗೆ 'Thanks' ಹೇಳಿದ ಹಸಿ ಬಾಣಂತಿ ಸಜಿತಾ

ಓರ್ವ ಮಹಿಳೆ ಮತ್ತು ಪುರುಷ ಪ್ರವಾಹದಲ್ಲಿ ಸಿಕ್ಕಿ ಇನ್ನೇನು ತೇಲಿ ಹೋಗುವ ಸ್ಥಿತಿಯಲ್ಲಿದ್ದರು.

ಪ್ರವಾಹದ ಬಾಯಿಂದ ಪಾರಾದರು ದಂಪತಿ

ಪ್ರವಾಹದ ಬಾಯಿಂದ ಪಾರಾದರು ದಂಪತಿ

ಅವರ ಧ್ವನಿ ಕೇಳಿಸುತ್ತಿತ್ತಾದರೂ ನಡೆಯಲು ಬಾರದು ತಾನು ಏನು ಮಾಡುವುದಕ್ಕೆ ಸಾಧ್ಯ ಎಂದು ಕುಳಿತಿದ್ದ ದುರೈಗೆ ತಕ್ಷಣವೇ ಬಾಳೆದಿಂಡಿನಿಂದ ಮಾಡಿದ ತಾತ್ಕಾಲಿಕ ತೆಪ್ಪ(ದಿಬ್ಬದಂಥದ್ದು)ವೊಂದು ನೆನಪಾಗಿತ್ತು. ಅದನ್ನು ಸರಿಪಡಿಸಿ ನೀರಿಗೆ ಧುಮುಕಿದ ದುರೈ, ಆ ಇಬ್ಬರು ದಂಪತಿಗಳನ್ನು ಆ ಬಾಳೆದಿಬ್ಬದ ಮೇಲೆ ಕೂರಿಸಿಕೊಂಡು, ತಾನೇ ಹುಟ್ಟುಹಾಕುತ್ತ ಅವರನ್ನು ಎತ್ತರ ಕಟ್ಟಡವೊಂದರ ಬಳಿ ಕರೆತಂದಿದ್ದಾರೆ. ನಂತರ ಆ ಕಟ್ಟಡದ ಮಹಡಿ ಹತ್ತಿ ಪ್ರವಾಹದಿಂದ ದಂಪತಿ ಪಾರಾಗಿದ್ದಾರೆ.

ವೃದ್ಧ ತಾಯಿಯೊಂದಿಗೆ ವಾಸವಿರುವ ದುರೈ ಅವರ ಇರುವ ಒಂದೇ ಮನೆಯೂ ಮುರಿದುಬಿದ್ದಿದೆ, ಒಳಗೆಲ್ಲ ಕಸಕಡ್ಡಿಗಳು ತುಂಬಿ ವಾಸಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿದೆ. ಇದು ದುರೈ ಒಬ್ಬರ ಕತೆಯಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಕೇರಳದ ಹಲವು ಭಾಗಗಳ ಜನರ ಕರುಣಾಜನಕ ಕತೆ ಇದೇ!

ಕೇರಳದ ನೈಜ ಸೂಪರ್ ಹೀರೋಗಳು ಈ ಮೀನುಗಾರರುಕೇರಳದ ನೈಜ ಸೂಪರ್ ಹೀರೋಗಳು ಈ ಮೀನುಗಾರರು

ಏನೇ ಆಗಲಿ ಜೀವ ಉಳಿಯಿತಲ್ಲ!

ಏನೇ ಆಗಲಿ ಜೀವ ಉಳಿಯಿತಲ್ಲ!

"ಕೇರಳ ಪ್ರವಾಹದಿಂದ ಎಷ್ಟೆಲ್ಲ ಹಾನಿಯಾಗಿದೆ ಎಂಬುದನ್ನು ಗ್ರಹಿಸಬಲ್ಲೆ. ನಮಗೆ ಈಜುವುದಕ್ಕೆ ಸಾಧ್ಯವಿರಲಿಲ್ಲ. ಇಂಥ ಸಂದರ್ಭದಲ್ಲಿ ನನಗೆ ಬಾಳೆದಿಂಡಿನ ತೆಪ್ಪದ ಆಸರೆ ನೀಡಿ ರಕ್ಷಿಸಿದ ದುರೈ ಅವರ ಋಣವನ್ನು ಎಂದಿಗೂ ತೀರಿಸುವುದಕ್ಕೆ ಸಾಧ್ಯವಿಲ್ಲ. ಜೀವವೊಂದು ಉಳಿದರೆ ಏನನ್ನು ಬೇಕಾದರೂ ಮಾಡಬಹುದು" ಎಂದು ತುಂಬು ಹೃದಯದಿಂದ ದುರೈ ಅವರಿಗೆ ಕೃತಜ್ಞತೆ ಅರ್ಪಿಸುತ್ತಾರೆ ದಂಪತಿ.

ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ... ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...

ಇದು ನಮ್ಮದೇ ಮನೆಯಾ?

ಇದು ನಮ್ಮದೇ ಮನೆಯಾ?

ಇದ್ದೊಂದು ಪುಟ್ಟ ಸೂರನ್ನೂ ಕಳೆದುಕೊಂಡಂತಾಗಿರುವ ದುರೈ ಕತೆ ಒಂದೆಡೆಯಾದರೆ, ನಳಿನಿ ಎಂಬ ಗೃಹಿಣಿ ಮತ್ತು ಆಕೆಯ ಪುತ್ರಿ ಪ್ರವಾಹದ ನಂತರ ಮೊದಲ ಬಾರಿಗೆ ತಮ್ಮ ಮನೆಗೆ ಬಂದು ನೋಡಿದರೆ 'ಇದು ತಮ್ಮದೇ ಮನೆಯಾ?' ಎಂಬ ಅಚ್ಚರಿ! ಜೀವನೋಪಾಯಕ್ಕಾಗಿ ಅವರ ಬಳಿ ಇದ್ದಿದ್ದು ಒಂದು ಹಸು ಮಾತ್ರ. ಅದೂ ನಾಪತ್ತೆಯಾಗಿದೆ. ಯತಾವು ಈಗ ತೊಟ್ಟಿರುವ ಬಟ್ಟೆಯನ್ನು ಬಿಟ್ಟರೆ ತಮ್ಮ ಬಳಿ ಬೇರೆ ಏನೂ ಇಲ್ಲ ಎಂದು ಬಿಕ್ಕುತ್ತಾರೆ ನಳಿನಿ!

ಕೇರಳ ಸಂತ್ರಸ್ತರಿಗಾಗಿ ತೆರಳಿದ್ದ ಲಾರಿ ಚಾಲಕ ಗಂಗರಾಜು ಅನುಭವ ಕೇರಳ ಸಂತ್ರಸ್ತರಿಗಾಗಿ ತೆರಳಿದ್ದ ಲಾರಿ ಚಾಲಕ ಗಂಗರಾಜು ಅನುಭವ

ಸಾಲ ಮಾಡಿ ಮನೆ ಮಾಡಿದ್ದೆವು!

ಸಾಲ ಮಾಡಿ ಮನೆ ಮಾಡಿದ್ದೆವು!

ಸಾಲ ಮಾಡಿ, ಬೆವರು ಸುರಿಸಿ ಕಟ್ಟಿಸಿದ್ದ ಮನೆ ಈಗ ಇದೆಯೋ, ಇಲ್ಲವೋ ಗೊತ್ತಾಗದ ಸ್ಥಿತಿಯಲ್ಲಿದೆ! ಸಾಲ ಮಾಡಿ ಕಟ್ಟಿಸಿದ ಮನೆ ವಾಸಿಸಲು ಯೋಗ್ಯವಾಗದ ಸ್ಥಿತಿಯಲ್ಲಿದೆ. ಆದರೆ ಮಾಡಿದ ಸಾಲ ಮಾತ್ರ ಹಾಗೇ ಉಳಿದಿದೆ ಎಂದು ಉಕ್ಕಿಬರುವ ಕಣ್ಣಿರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾರೆ ಅನಿತಾ ರಿನ್ನು!

English summary
Kerala: Sinna Durai, a specially abled person from Pathanamthitta's Othera, saved a couple's life who was stuck in flood, says,"I heard them cry for help, at which I arranged a makeshift raft & assisted them to move to an elevated platform. Soon after we were rescued."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X