ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ ಬುಕ್ ಸಂಸ್ಥಾಪಕನಿಗೆ ಕೇರಳೀಯರ ಮನವಿ

|
Google Oneindia Kannada News

ಕೊಚ್ಚಿ, ಏ. 22: ಸಾಮಾಜಿಕ ಜಾಲತಾಣ ಮುಕ್ತವಾಗಿದೆ ಎಂದು ಭಾವಿಸಿ ಪೇಜ್ ವೊಂದನ್ನು ಕ್ರಿಯೇಟ್ ಮಾಡಿ ಕಂಡ ಕಂಡವರ ಫೋಟೋ ಹಾಕಿ ಸಲ್ಲದ ಕಮೆಂಟ್ ಮಾಡುವವರಿಗೆ ಕೇರಳದ ಜನತೆ ತಕ್ಕ ಉತ್ತರ ನೀಡಿದ್ದಾರೆ.

ಹೆಸರಾಂತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮಕ್ಕಳ ಮತ್ತು ಹದಿಹರೆಯದವರ ಫೋಟೋ ಹಾಕಿ, ಅಸಂವಿಧಾನಿಕ ಮಾತುಗಳನ್ನು ಬರೆಯುತ್ತಿದ್ದ ಪೇಜ್ ವೊಂದನ್ನು ಬಂದ್ ಮಾಡಲಾಗಿದೆ. ಪಾಲಕರು ಈ ಬಗ್ಗೆ ನಿರಂತರವಾಗಿ ದೂರು ಸಲ್ಲಿಕೆ ಮಾಡಿದ ಪರಿಣಾಮ ಕೇರಳದ ಸೈಬರ್ ಪೊಲೀಸರು ಇಂಥ ತೀರ್ಮಾನಕ್ಕೆ ಬಂದಿದ್ದಾರೆ.[ಟ್ವಿಟ್ಟರ್ ನಂತರ ಫೇಸ್ಬುಕ್ ಬ್ಯಾಂಕಿಂಗ್ ಆರಂಭ]

facebook

ಅಭಿಯಾನ ಆರಂಭ
ಮಕ್ಕಳ ಫೋಟೋ ಬಳಸಿ ಇಂಥ ಪೇಜ್ ಸೃಷ್ಟಿ ಮಾಡಲು ಇರುವ ಅವಕಾಶವನ್ನು ಕಿತ್ತುಹಾಕಬೇಕು. ಇದೊಂದು ಅಪರಾಧವಾಗಿದ್ದು ಬೇರೆಯವರ ವೈಯಕ್ತಿಕ ಪ್ರೊಫೈಲ್ ನಲ್ಲಿರುವ ಫೋಟೋ ತೆಗೆದಿಕೊಳ್ಳುವುದು ಸರಿ ಕಾಣುವುದಿಲ್ಲ. ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರಿಗೆ ಮನವಿ ಸಲ್ಲಿಕೆ ಮಾಡುವ ಅಭಿಯಾನವೊಂದನ್ನು ಆರಂಭಿಸಲಾಗಿದೆ. [ಇಂಟರ್ನೆಟ್ಟಿಗೆ ಸೆನ್ಸಾರ್, ಇದು ಸರಿಯಾದ ಕ್ರಮವೇ?]

328,466 ಜನ ಇದಕ್ಕೆ ಸಹಿ ಮಾಡಿದ್ದು, 21,534 ಜನರ ಒಪ್ಪಿಗೆ ಅಗತ್ಯವಿದೆ. ನೀವು ಈ ಸಾಮಾಜಿಕ ಕೆಲಸದಲ್ಲಿ ಪಾಲ್ಗೊಳ್ಳುವ ಮನಸ್ಸು ಮಾಡಿದರೆ ಕೂಡಲೇ ಅಭಿಯಾನಕ್ಕೆ ಕೈ ಜೋಡಿಸಿ. ಇಲ್ಲಿದೆ ಮನವಿ ಸಲ್ಲಿಕೆ ಪೇಜ್

ಯಾವ ಪೇಜ್? ಏನಿದರ ಕತೆ?
'ಕೊಚು ಸುಂದಾರಿಲ್' ಹೆಸರಿನ ಮಲೆಯಾಳಂ ಪೇಜ್ ಗೆ 7,539 ಲೈಕ್ ಗಳು ಬಂದಿದ್ದವು. ಕೇರಳ ಮತ್ತು ಮಧ್ಯ ಪ್ರಾಚ್ಯ ದ ಸಾವಿರಾರು ಜನ ಫಾಲೋ ಮಾಡುತ್ತಿದ್ದರು. ಈ ಪೇಜ್ ನಲ್ಲಿ ಹಾಕಲಾಗಿದ್ದ ಬಹುತೇಕ ಫೋಟೋಗಳನ್ನು ವೈಯಕ್ತಿಕ ಪ್ರೋಫೈಲ್ ನಿಂದ ತೆಗೆದುಕೊಳ್ಳಲಾಗಿತ್ತು. ದಕ್ಷಿಣ ಭಾರತದ ಹೆಸರಾಂತ ನಟ-ನಟಿಯರ ಬಾಲ್ಯದ ಫೋಟೋಗಳನ್ನು ಹಾಕಲಾಗಿತ್ತು.

ಇಲ್ಲಿ ಅಶ್ಲೀಲ ಚಿತ್ರಗಳು ಇರಲಿಲ್ಲ. ಆದರೆ ಬಂದಂಥ ಕಮೆಂಟ್ ಗಳು ಮಾತ್ರ ಅಶ್ಲೀಲವಾಗಿದ್ದವು. ಈ ಸಂಗತಿಗಳು ಪಾಲಕರ ಗಮನಕ್ಕೆ ಬಂದಿದ್ದು ತಮ್ಮ ಮಕ್ಕಳ ಫೋಟೋದ ಮೇಲೆ ಇಂಥ ಕಮೆಂಟ್ ಗಳು ಬರುತ್ತಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. [ವೆಬ್ ಸೈಟ್ ನಿಂದ ವಾಟ್ಸಪ್ ಬಳಸುವುದು ಹೇಗೆ?]

ತಕ್ಷಣ ಕೆಲ ಪಾಲಕರು ಒಂದಾಗಿ ಕೇರಳ ಸೈಬರ್ ಪೋಲೀಸರ ಬಳಿ ಇದನ್ನು ಬ್ಲಾಕ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸೈಬರ್ ತಜ್ಞರು ಹೇಳುವಂತೆ ಇದು ಒಂದು ಶಿಶುಕಾಮಿಗಳ ತಾಣದಂತೆ ಪರಿವರ್ತನೆಯಾಗುತ್ತಿತ್ತು. ಚಿಕ್ಕ ಮಕ್ಕಳು ಮತ್ತು ಹದಿಹರೆಯದವರ ಫೋಟೋಗಳೇ ಇಲ್ಲಿ ಓಡಾಡಿತ್ತಿದ್ದವು.

ಸೌದಿ ಅರೇಬಿಯಾದಿಂದ ಈ ಪೇಜ್ ಚಾಲನೆಯಲ್ಲಿದ್ದದ್ದು ತನಿಖೆ ವೇಳೆ ಗೊತ್ತಾಯಿತು. 10 ವರ್ಷದ ಬಾಲಕಿಯ ತಂದೆ ರಾಜ್ ಮೋಹನ್ ಹೇಳುವಂತೆ, ಕೆಲವರು ಈ ಪೇಜ್ ಗೆ ನಿರಂತರವಾಗಿ ಆಗಮಿಸಿ ಕಮೇಂಟ್ ಮಾಡುತ್ತಿದ್ದರು. ಅಸಂವಿಧಾನಿಕ ಪದಗಳನ್ನು ಮನಸೋ ಇಚ್ಛೆ ಬಳಸುತ್ತಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
The social networking website Facebook page, which was in news for posting pictures of children and young girls has been blocked after a flurry of complaints from parents. The page "Kochu Sundarikal" (young beauties) in Malayalam had around 7,539 likes and many followers, mostly from Kerala and Middle East.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X