ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಅತ್ಯಾಚಾರ: ಪ್ರಮುಖ ಸಾಕ್ಷಿಯಾಗಿದ್ದ ಫಾದರ್ ಶವ ಪಂಜಾಬ್‌ನಲ್ಲಿ ಪತ್ತೆ

|
Google Oneindia Kannada News

ಜಲಂಧರ್, ಅಕ್ಟೋಬರ್ 22: ಕೇರಳದ ಚರ್ಚ್‌ನಲ್ಲಿ ಕ್ರೈಸ್ತ ಸನ್ಯಾಸಿನಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿದಾರರಾಗಿದ್ದ ಫಾದರ್ ಕುರಿಯಾಕೋಸ್ ಕಟ್ಟುಥಾರಾ ಅವರ ಶವ ಪಂಜಾಬ್‌ನ ಜಲಂಧರ್‌ನಲ್ಲಿ ಪತ್ತೆಯಾಗಿದೆ.

ಅತ್ಯಾಚಾರದ ಆರೋಪಕ್ಕೆ ಸಿಲುಕಿರುವ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧ ನಿರ್ಭಿಡೆಯಿಂದ ಧ್ವನಿ ಎತ್ತಿದ್ದ ಕೆಲವರಲ್ಲಿ ಕುರಿಯಾಕೋಸ್ ಒಬ್ಬರಾಗಿದ್ದರು. ಅವರ ಮೃತದೇಹ ಜಲಂಧರ್‌ನ ದಸುಯಾದಲ್ಲಿನ ಸೈಂಟ್ ಮೇರಿಸ್ ಚರ್ಚ್‌ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

67 ವರ್ಷದ ಅವರ ಮೃತದೇಹ ಸೋಮವಾರ ಬೆಳಿಗ್ಗೆ ಕಂಡುಬಂದಿದೆ. ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕುರಿಯಾಕೋಸ್ ಅವರ ಸಾವಿನ ಹಿಂದೆ ಸಂಚು ಇರುವ ಬಗ್ಗೆ ಅವರು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ.

 'ಹೆಣ್ಣು ಭಕ್ಷಕ' ಬಿಷಪ್, ಅಸಹಾಯಕ ಸನ್ಯಾಸಿನಿ, ನೆರವಿಗೆ ಬಾರದ ಚರ್ಚ್ ವ್ಯವಸ್ಥೆ 'ಹೆಣ್ಣು ಭಕ್ಷಕ' ಬಿಷಪ್, ಅಸಹಾಯಕ ಸನ್ಯಾಸಿನಿ, ನೆರವಿಗೆ ಬಾರದ ಚರ್ಚ್ ವ್ಯವಸ್ಥೆ

ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣದಲ್ಲಿ ಕುರಿಯಾಕೋಸ್, ಆರೋಪಿ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧ ಪೊಲೀಸ್ ಹೇಳಿಕೆ ನೀಡಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಅವರ ಸಹೋದರ ಜೋಸ್ ಕಟ್ಟುಥಾರಾ ಶಂಕೆ ವ್ಯಕ್ತಪಡಿಸಿದ್ದಾರೆ.

ನೆಲದ ಮೇಲೆ ಬಿದ್ದಿದ್ದ ಶವ

ನೆಲದ ಮೇಲೆ ಬಿದ್ದಿದ್ದ ಶವ

ಸೋಮವಾರ ಬೆಳಿಗ್ಗೆ ಕೆಲವು ಸನ್ಯಾಸಿನಿಯರು ಫಾದರ್ ಕುರಿಯಾಕೋಸ್ ಅವರಿದ್ದ ಕೋಣೆಯ ಬಾಗಿಲನ್ನು ಬಡಿದರು. ಆದರೆ, ಅವರಿಂದ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಬಾಗಿಲು ಒಡೆದು ನೋಡಿದಾಗ ನೆಲದ ಮೇಲೆ ಕುರಿಯಾಕೋಸ್ ಅವರು ಬಿದ್ದಿರುವುದು ಕಂಡುಬಂತು. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಆಗಲೇ ಮೃತಪಟ್ಟಿರುವುದಾಗಿ ಘೋಷಿಸಲಾಯಿತು ಎಂದು ಜಲಂಧರ್ ಡಯಾಸಿಸ್‌ನ ಫಾದರ್ ಪೀಟರ್ ತಿಳಿಸಿದ್ದಾರೆ.

 ಮುಲಕ್ಕಲ್ ಪೊಲೀಸ್ ವಿಚಾರಣೆ, ಜವಾಬ್ದಾರಿಯಿಂದ ತಾತ್ಕಾಲಿಕ ಬಿಡುಗಡೆ ಮುಲಕ್ಕಲ್ ಪೊಲೀಸ್ ವಿಚಾರಣೆ, ಜವಾಬ್ದಾರಿಯಿಂದ ತಾತ್ಕಾಲಿಕ ಬಿಡುಗಡೆ

Array

ಆತಂಕ ವ್ಯಕ್ತಪಡಿಸಿದ್ದ ಕುರಿಯಾಕೋಸ್

ಸನ್ಯಾಸಿನಿಯರಿಗೆ ಬೆಂಬಲ ನೀಡಿದ್ದಕ್ಕೆ ತಮ್ಮ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ ಎಂದು ಕುರಿಯಾಕೋಸ್ ಆರೋಪಿಸಿದ್ದರು. 'ಸನ್ಯಾಸಿನಿಯರು ಬಿಷಪ್ ಫ್ರಾಂಕೋ ಅವರ ವಿರುದ್ಧ ನನ್ನ ಬಳಿ ದೂರು ನೀಡಿದ್ದರು. ಅವರು ಬಿಷಪ್‌ ಭಯದ ಕಾರಣದಿಂದ ಕೇರಳ ಪೊಲೀಸರನ್ನು ಸಂಪರ್ಕಿಸಿರಲಿಲ್ಲ. ವಾಸ್ತವವಾಗಿ ಅವರ ವಿರುದ್ಧ ಮಾತನಾಡುತ್ತಿರುವುದಕ್ಕೆ ನನಗೆ ಏನಾಗಲಿದೆ ಎನ್ನುವುದೂ ನನಗೆ ಗೊತ್ತಿಲ್ಲ' ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು.

 ಬಿಷಪ್ ವಿರುದ್ಧ ಸತ್ಯಾಗ್ರಹಕ್ಕೆ ಸಂತ್ರಸ್ತೆ ಕೂತರೂ ಪಕ್ಷಗಳು ಗಪ್ ಚುಪ್ ಬಿಷಪ್ ವಿರುದ್ಧ ಸತ್ಯಾಗ್ರಹಕ್ಕೆ ಸಂತ್ರಸ್ತೆ ಕೂತರೂ ಪಕ್ಷಗಳು ಗಪ್ ಚುಪ್

ಪ್ರಮುಖ ಸಾಕ್ಷಿದಾರ

ಜಲಂಧರ್ ಡಯೋಸಿಸ್‌ನಲ್ಲಿ ಆಗಾಗ ಶಿಕ್ಷಕರಾಗಿಯೂ ಕೆಲಸ ಮಾಡುತ್ತಿದ್ದ ಕುರಿಯಾಕೋಸ್, ನ್ಯಾಯಕ್ಕಾಗಿ ಹೋರಾಟ ನಡೆಸುವಂತೆ ಸಂತ್ರಸ್ತೆ ಸನ್ಯಾಸಿನಿ ಮತ್ತು ಇತರೆ ಸನ್ಯಾಸಿನಿಯರಿಗೆ ಸಲಹೆ ನೀಡಿದ್ದರು. ಬಿಷಪ್ ಫ್ರಾಂಕೊ ಅವರ ಪ್ರಕರಣದಲ್ಲಿ ಕುರಿಯಾಕೋಸ್ ಪ್ರಮುಖ ಪ್ರಾಸಿಕ್ಯೂಷನ್ ಸಾಕ್ಷಿದಾರರಾಗಿದ್ದರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಪಿ ಹರಿಶಂಕರ್ ತಿಳಿಸಿದ್ದಾರೆ.

ಹೋರಾಟಕ್ಕೆ ಹಿನ್ನಡೆ

ಹೋರಾಟಕ್ಕೆ ಹಿನ್ನಡೆ

ಬಿಷಪ್ ಫ್ರಾಂಕೊ ವಿರುದ್ಧದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಸ್ಟರ್ ಅನುಪಮಾ, 'ಈ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಫಾದರ್ ಕುರಿಯಾಕೋಸ್ ನನಗೆ ಬೋಧಿಸಿದವರು ಮತ್ತು ನಮ್ಮ ಹೋರಾಟದ ಭಾಗವಾಗಿದ್ದರು. ನಮ್ಮ ಪ್ರಕರಣದಲ್ಲಿ ಅವರು ಪ್ರಮುಖ ಸಾಕ್ಷಿದಾರರಾಗಿದ್ದರು ಮತ್ತು ಬಿಷಪ್ ವಿರುದ್ಧ ಪೊಲೀಸರಿಗೆ ಹೇಳಿಕೆ ನೀಡಿದ್ದರು. ನಾನು ಅವರೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಆದರೆ, ಇತರೆ ಪಾದ್ರಿಗಳು ಹೇಳುವಂತೆ ಅವರ ಮೇಲೆ ಅತಿಯಾದ ಒತ್ತಡವಿತ್ತು. ಚರ್ಚ್‌ನಲ್ಲಿದ್ದ ಅನೇಕರು ಅವರ ವಿರುದ್ಧ ಆಕ್ರೋಶಗೊಂಡಿದ್ದರು. ಅವರ ಸಾವಿನ ಸಂದರ್ಭ ಅನುಮಾನಾಸ್ಪದವಾಗಿದೆ. ಇದರಿಂದ ಫ್ರಾಂಕೊ ವಿಷಪ್ ವಿರುದ್ಧದ ನಮ್ಮ ಹೋರಾಟಕ್ಕೆ ಹಿನ್ನಡೆಯಾಗಲಿದೆ' .

English summary
Key witness Father Kuriakose Kattuthara in the rape case agaianst Kerala Bishop Franco Mulakkal was found dead in Jalandhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X