ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಮಹಾಮಳೆಯ ನಡುವಲ್ಲೂ ಅಲ್ಲಲ್ಲಿ ಇಣುಕುವ ಮಾನವೀಯತೆ

|
Google Oneindia Kannada News

ತಿರುವನಂತಪುರಂ, ಆಗಸ್ಟ್ 13: ಇನ್ನೇನು ಪ್ರವಾಹದ ಪ್ರಚಂಡ ಅಲೆಯಲ್ಲಿ ಕೊಚ್ಚಿಹೋಗಬೇಕು... ಅಷ್ಟರಲ್ಲಿ ರಕ್ಷಣಾ ತಂಡದ ಸದಸ್ಯನೊಬ್ಬ ಪವಾಡ ಸದೃಶ ರೀತಿಯಲ್ಲಿ ಮಗುವೊಂದನ್ನು ಕಾಪಾಡುತ್ತಾನೆ. ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ರಭಸದಲ್ಲಿ ಉಕ್ಕುತ್ತಿರುವ ಅಲೆ ಮಾನವೀಯತೆಯೆದುರು ಸೋಲುತ್ತದೆ! ಕೇರಳದ ಭೀಕರ ಪ್ರವಾಹದ ನಡುವಲ್ಲೂ ಮಾನವೀಯತೆಯ ಜೀವಂತಿಕೆಯನ್ನು ತೋರುವ ಇಂಥ ನೂರಾರು ದೃಶ್ಯಗಳು ಕಣ್ಣನ್ನು ಒದ್ದೆಯಾಗಿಸುತ್ತವೆ!

ಇಂಥ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೇರಳದಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ದೇವರ ಸ್ವಂತ ನಾಡು ತತ್ತರಿಸಿದೆ. ಇದುವರೆಗೆ 39 ಕ್ಕೂ ಹೆಚ್ಚು ಜನ ಮೃತರಾಗಿದ್ದಾರೆ. 14 ಎನ್ ಡಿಆರ್ ಎಫ್(ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ) ತಂಡ ಹಗಲಿರುಳೆನ್ನದೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ನಷ್ಟವಾಗಿದ್ದು, 50,000 ಕ್ಕೂ ಹೆಚ್ಚು ಜನ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ವೈರಲ್ ವಿಡಿಯೋ: ಭೀತಿ ಹುಟ್ಟಿಸುವ ಕೇರಳ ಪ್ರವಾಹದ ರೌದ್ರಾವತಾರ!ವೈರಲ್ ವಿಡಿಯೋ: ಭೀತಿ ಹುಟ್ಟಿಸುವ ಕೇರಳ ಪ್ರವಾಹದ ರೌದ್ರಾವತಾರ!

ಹೀಗೆ ಮಸಣದ ಛಾಯೆಯಲ್ಲಿರುವ ಕೇರಳದಲ್ಲಿ ಬದುಕಿನ ಬಗ್ಗೆ ಭರವಸೆ ಮೂಡಿಸುವ ಎಷೋ ಘಟನೆಗಳು ಘಟಿಸುತ್ತಿವೆ. ಪ್ರವಾಹದ ಭೀಕರತೆಯ ನಡುವಲ್ಲೂ ಪವಾಡ ಸದೃಶವಾಗಿ ಪಾರಾದ ಹಲವರು ದೇವರಿಗೆ ಕೋಟಿ ನಮನ ಸಲ್ಲಿಸಿದ್ದಾರೆ. ಅಂಥ ಕೆಲವು ವಿಡಿಯೋ, ಚಿತ್ರಗಳು ಇಲ್ಲಿವೆ. ನೋಡಿ.

Array

ನಡೆಯಿತೊಂದು ಪವಾಡ!

ಪ್ರಚಂಡ ಪ್ರವಾಹದ ಅಲೆಗಳು ಬರುತ್ತಿದ್ದರೂ ಲೆಕ್ಕಿಸದೆ, ಎನ್ ಡಿಆರ್ ಎಫ್ ಸಿಬ್ಬಂದಿಯೊಬ್ಬರು ಪುಟ್ಟ ಮಗುವನ್ನು ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕನ್ನಯ್ಯ ಕುಮಾರ್ ಎಂಬ ಎನ್ ಡಿಆರ್ ಎಫ್ ಸಿಬ್ಬಂದಿ, ಆ ಮಗುವನ್ನು ಎತ್ತಿಕೊಂಡು ಓಡುವುದು ನಿಮಿಷ ತಡವಾಗಿದ್ದರೂ ರಸ್ತೆಯೆಲ್ಲ ನೀರಿನಲ್ಲಿ ಮುಳುಗಿ, ಮಗು ಪ್ರಾಣ ಕಳೆದುಕೊಳ್ಳುವ ಸ್ಥಿತಿಯಿತ್ತು!ಮಲಯಾಳಂ ಮನೋರಮಾ ಪತ್ರಿಕೆಯ ಪತ್ರಕರ್ತ ಜಿಕು ವರ್ಗೀಸ್ ಜಾಕೋಬ್ ಎಂಬುವವರು ತೆಗೆದು ವಿಡಿಯೋ ಇದು.

ಮುಗಿಲು ಕತ್ತರಿಸಿದಂಥ ಮಳೆಗೆ ತತ್ತರಿಸಿತು ದೇವರ ನಾಡು!ಮುಗಿಲು ಕತ್ತರಿಸಿದಂಥ ಮಳೆಗೆ ತತ್ತರಿಸಿತು ದೇವರ ನಾಡು!

Array

ಪ್ರವಾಹದಲ್ಲಿ ಈಜಿ ಪಾರದ ನಾಯಿ

ಛತ್ತೀಸ್ ಗಢದಲ್ಲೂ ಮಳೆ ಜಡಿಯುತ್ತಿದೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಉಕ್ಕಿ ಹರಿಯುತ್ತಿರುವ ನದಿಯ ಪ್ರವಾಹದಲ್ಲಿ ಎರಡು ನಾಯಿಗಳು ಈಜಿ ದಡಸೇರಲು ಪ್ರಯತ್ನಿಸಿವೆ. ಈ ಸಂದರ್ಭದಲ್ಲಿ ದುರದೃಷ್ಟವಶಾತ್ ಒಂದು ನಾಯಿ ನೀರಿನಲ್ಲಿ ತೇಲಿ ಹೋಗಿದ್ದರೆ, ಇನ್ನೊಂದು ನಾಯಿ ದಡ ಸೇರಿ ಪ್ರಾಣ ಉಳಿಸಿಕೊಂಡಿದೆ. ಈ ವಿಡಿಯೋ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕೇರಳ: ಇಡುಕ್ಕಿ ಜಲಾಶಯದ ಎಲ್ಲಾ 5 ಗೇಟ್ ಓಪನ್!ಕೇರಳ: ಇಡುಕ್ಕಿ ಜಲಾಶಯದ ಎಲ್ಲಾ 5 ಗೇಟ್ ಓಪನ್!

ಮಾನವ ಸರಪಳಿ ನಿರ್ಮಿಸಿ ಪಾರಾದ ಜನರು!

ವಯ್ನಾಡಿನ ಕನಿಯಂಬಟ್ಟ ಎಂಬಲ್ಲಿ ಪ್ರವಾಹದಲ್ಲಿ ಸಿಕ್ಕಿಕೊಂಡ ಜನರು ಮಾನವ ಸರಪಳಿ ನಿರ್ಮಿಸಿಕೊಂಡು ಪ್ರವಾಹದಿಂದ ಪಾರಾದ ದೃಶ್ಯ ನೋಡಿದರೆ ಒಮ್ಮೆ ಮೈ ಜುಮ್ಮೆನ್ನುತ್ತದೆ!

ಮನೆಜನರ ಜೀವ ಉಳಿಸಿದ ನಿಯತ್ತಿನ ನಾಯಿ

ಇಡುಕ್ಕಿಯಲ್ಲಿ ವಾಸವಿದ್ದ ಮೋಹನನ್ ಎಂಬುವವರ ಲಕುಟುಂಬ ರಾತ್ರಿ ನಿದ್ರೆಯಲ್ಲಿದ್ದಾಗ ಅವರ ನಾಯಿ ಇದ್ದಕ್ಕಿದ್ದಂತೇ ಬೊಗಳಲು ಆರಂಭಿಸಿತ್ತು. ಏನು ಮಾಡಿದರೂ ಬೊಗಲುವುದನ್ನು ನಿಲ್ಲಸದಿದ್ದಾಗ ಮನೆ ಜನರೆಲ್ಲರೂ ಮನೆಯಿಂದ ಆಚೆ ಬಂದು ನೋಡಿದರು. ಸಲ್ಲಿ ನೋಡಿದರೆ ಸಿಕ್ಕಾಬಟ್ಟೆ ಮಳೆ, ಪ್ರವಾಹ ಸ್ಥಿತಿ. ಮನೆಯಿಂದ ಆಚೆ ಬಂದು ಒಂದು ನಿಮಿಷವೂ ಕಳೆದಿಲ್ಲವೇನೋ, ಅಷ್ಟರಲ್ಲೇ ಅವರ ಮನೆ ಕುಸಿದುಬಿದ್ದಿತ್ತು. ಒಂದು ಕ್ಷಣ ಇವೆಲ್ಲ ಕನಸೋ ಎಂದು ಅರ್ಥವಾಗದ ಸ್ಥಿತಿ ಮೋಹನನ್ ಅವರದು! ಅಕಸ್ಮಾತ್ ಒಂದೇ ಒಂದು ನಿಮಿಷ ಮೊದಲು ಅವರು ಮನೆಯೊಳಗಿದ್ದರೂ ಜೀವ ಕಳೆದುಕೊಳ್ಳಬೇಕಿತ್ತು!

ಎಂಥ ಸಾಹಸದ ಬದುಕು

ರಸ್ತೆಯೊಂದು ಪ್ರವಾಹದ ಹೊಡೆತಕ್ಕೆ ಸಿಕ್ಕಿ ಕುಸಿದಿದೆ. ಒಂದೆಡೆಯಿಂದ ಇನ್ನೊಂದೆಡೆಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ಭಾರತೀಯ ಸೇನೆಯ ಸಿಬ್ಬಂದಿ ತಾತ್ಕಾಲಿಕ ಸೇತುವೆಯೊಂದನ್ನು ನಿರ್ಮಿಸಿದ್ದಾರೆ. ಈ ಸೇತುವೆಯ ಮೂಲಕವೇ ಜನರನ್ನು ಒಂದೆಡೆಯಿಂದ, ಇನ್ನೊಂದೆಡೆಗೆ ಸಾಗಿಸಲಾಗುತ್ತಿದೆ. ಈ ಚಿತ್ರವೂ ಕೇರಳ ಪ್ರವಾಹ ಸೃಷ್ಟಿಸಿದ ಆವಾಂತರಗಳಿಗೆ ಸಾಕ್ಷಿಯಾಗುತ್ತದೆ.

English summary
There are so many human interest stories we can be seen in Kerala floods. Many people saved miraculously by rescue team in Kerala rains. Due to heavy rains since a week, 39 people died so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X