ಹುಡುಗಿಯರ ಸ್ತನವನ್ನು ಕಲ್ಲಂಗಡಿಗೆ ಹೋಲಿಸಿದ ರಸಿಕ ಶಿಕ್ಷಕ

Posted By:
Subscribe to Oneindia Kannada

ಕೋಳಿಕ್ಕೋಡ್, ಮಾ 23: ದೇವರನಾಡಿನ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಎದೆಯನ್ನು ಕಲ್ಲಂಗಡಿಗೆ ಹೋಲಿಸಿ, ದೇವರು ಕೋಪಿಸಿಕೊಳ್ಳುವಂತಹ ಕೆಲಸವನ್ನು ಮಾಡಿದ್ದಾನೆ. ಈತನ ವಿರುದ್ದ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ನಗರದ ಫಾರೂಕ್ ಟ್ರೈನಿಂಗ್ ಕಾಲೇಜಿನಲ್ಲಿ ಉಪನ್ಯಾಸ ನೀಡುತ್ತಾ ಶಿಕ್ಷಕ ಜವಹರ್ ಮುನಾವರ್, ಇಸ್ಲಾಂ ಸಂಪ್ರದಾಯಕ್ಕೆ ಅನುಗುಣವಾಗಿ ಈಗಿನ ವಿದ್ಯಾರ್ಥಿನಿಯರು ಬಟ್ಟೆ ತೊಡುತ್ತಿಲ್ಲ. ಬದಲಿಗೆ, ಹುಡುಗಿಯರು ತಮ್ಮ ಎದೆಭಾಗವನ್ನು ಕಲ್ಲಂಗಡಿಯ ತುಂಡಿನಂತೆ ಪ್ರದರ್ಶಿಸುತ್ತಿದ್ದಾರೆ ಎನ್ನುವ ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾನೆ.

ನಾನು ಪಾಠ ಮಾಡುತ್ತಿರುವ ಈ ಕಾಲೇಜಿನಲ್ಲಿ ಶೇ. 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ, ಅದರಲ್ಲಿ ಬಹುತೇಕ ಎಲ್ಲರೂ ಮುಸ್ಲಿಮರು. ವಿದ್ಯಾರ್ಥಿನಿಯರು ಹಿಜಬ್ (ಬುರ್ಖಾ) ಧರಿಸದೇ, ತಮ್ಮ ಎದೆಯ ಭಾಗವನ್ನು ಕೆಂಪುಬಣ್ಣದ ಕಲ್ಲಂಗಡಿಯ ತುಂಡಿನಂತೆ ತೋರಿಸುತ್ತಿದ್ದಾರೆ ಎಂದು ಶಿಕ್ಷಕ ಪ್ರೊ. ಮುನಾವರ್ ಹೇಳಿದ್ದಾನೆ.

Kerala professor compared womens breasts to watermelon, FIR lodged against him

ಶಿಕ್ಷಕನ ಈ 'ಉಪನ್ಯಾಸ'ದ ತುಣುಕು ರೆಕಾರ್ಡ್ ಆಗಿದ್ದು ಈತನ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಮಹಿಳೆಯರ ವಿರುದ್ದ ಅವಮಾನಕಾಗಿ ಹೇಳಿಕೆ ನೀಡಿದ ಶಿಕ್ಷಕನ ಮೇಲೆ, ನಗರದ ಕುಡುವಳ್ಳಿ ಪೊಲೀಸರು ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ.

ಅದೇ ಕಾಲೇಜಿನ ಅಮೃತಾ ಎನ್ನುವ ವಿದ್ಯಾರ್ಥಿನಿ, ಶಿಕ್ಷಕನ ಈ ಅಸಂಬದ್ದ ಹೇಳಿಕೆಯ ವಿರುದ್ದ ಪೊಲೀಸ್ ಠಾಣೆ ಮೆಟ್ಟಲೇರಿದ್ದಳು. ಆದರೆ, ತನ್ನ ವಿರುದ್ದ ದೂರು ದಾಖಲಾಗುತ್ತಿದ್ದಂತೇ, ಶಿಕ್ಷಕ ಮುನಾವರ್ ನಾಪತ್ತೆಯಾಗಿದ್ದಾನೆ.

ಈ ಶಿಕ್ಷಕನ ವಿರುದ್ದ ಸಾಮಾಜಿಕ ತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ನೆಟ್ಟಿಗರು ಈತನನ್ನು ಹುರಿದು ಮುಕ್ಕುತ್ತಿದ್ದಾರೆ ಮತ್ತು ಈತನ ವಿರುದ್ದ ಆಂದೋಲನ ಆರಂಭಿಸಿದ್ದಾರೆ. ಕೆಲವೊಂದು ಮಹಿಳೆಯರು, ತಮ್ಮ ಅರೆನಗ್ನ ಫೋಟೋಗಳನ್ನು ಹಾಕಿ ಪ್ರತಿಭಟಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
FIR lodged against sexist Kerala professor, who compared women's breasts to watermelons. Professor Jauhar Munavar of Kozhikode's Farook Training College, who publicly slammed female students in his college for displaying their chests like "slices of watermelon".

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ